ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದು ರಾಹುಗ್ರಸ್ತ ಕಂಕಣ ಸೂರ್ಯಗ್ರಹಣ ಅಥವಾ ಚೂಡಾಮಣಿ ಸೂರ್ಯಗ್ರಹಣ. ಇದು ಜೂನ್ ತಿಂಗಳಿನಲ್ಲಿ ಸಂಭವಿಸುವ ಎರಡನೇ ಗ್ರಹಣವಾಗಿದೆ.
ಪ್ರಸಕ್ತ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಬಾನಂಗಳ ಸಾಕ್ಷಿಯಾಗಲಿದೆ. ಸುಮಾರು 6 ಗಂಟೆಗಳ ಕಾಲ ಕಂಕಣ ಸೂರ್ಯಗ್ರಹಣವನ್ನು ಕಣ್ತುಂಬಿಕೊಳ್ಳುವ ಅವಕಾಶ ಭಾರತ ಸೇರಿದಂತೆ ಜಗತ್ತಿನ ಹಲವು ಪ್ರದೇಶಗಳ ಜನರಿಗೆ ಸಿಕ್ಕಿದೆ.
ಬೆಳಗ್ಗೆ 9.15ಕ್ಕೆ ಗ್ರಹಣ ಆರಂಭವಾಗಲಿದೆ. 12.10ರ ವೇಳೆಗೆ ಪೂರ್ಣವಾಗಿ ಮಧ್ಯಾಹ್ನ 3.04ಕ್ಕೆ ಅಂತ್ಯವಾಗಲಿದೆ ಒಟ್ಟಾರೆ ಗ್ರಹಣದ ಅವಧಿ 6 ಗಂಟೆಗಳ ಕಾಲ ಇರಲಿದೆ. ಆದರೆ ರಾಜ್ಯದಲ್ಲಿ ಬೆಳಿಗ್ಗೆ 10:12ರಿಂದ ಮಧ್ಯಾಹ್ನ 1:31 ವರೆಗೂ ಪಾರ್ಶ್ವ ಗೋಚರವಾಗಲಿದೆ.
ಭಾರತ, ಆಫ್ರಿಕನ್ ರಿಪಬ್ಲಿಕ್, ಕಾಂಗೋ, ಇಥಿಯೋಪಿಯಾ, ಪಾಕಿಸ್ತಾನ ಮತ್ತು ಚೀನಾದಲ್ಲಿ ಕಂಕನ ಸೂರ್ಯಗ್ರಹಣ ಗೋಚರಿಸಲಿದೆ.
ಭಾರತದಲ್ಲಿ ರಾಜಸ್ಥಾನ, ಹರ್ಯಾಣ ಮತ್ತು ಉತ್ತರಾಖಂಡದಲ್ಲಿ ಖಂಡಗ್ರಾಸ ಗ್ರಹಣ ಹಾಗೂ ಉಳಿದೆಡೆ ಭಾಗಶಃ ಗ್ರಹಣ ಗೋಚರಿಸಲಿದೆ. ಇನ್ನು ಬೆಂಗಳೂರಿನಲ್ಲಿ ಪಾರ್ಶ್ವಗ್ರಹಣ ಗೋಚರವಾಗುತ್ತದೆ. ಹೆಚ್ಚು ಮೋಡ ಇರುವುದರಿಂದ ಕಂಕಣ ಸೂರ್ಯ ಗ್ರಹಣ ಗೋಚರವಾಗುವುದಿಲ್ಲ. ಬೆಂಗಳೂರು ನಗರದಲ್ಲಿ ಶೇ. 90ರಷ್ಟು ಸೂರ್ಯಗ್ರಹಣ ಗೋಚರವಾಗುತ್ತದೆ. ಮಡಿಕೇರಿ, ಚಾಮರಾಜನಗರ, ಊಟಿ, ಕಣ್ಣೂರು, ಕೊಯಮತ್ತೂರು, ಮಧುರೈನಲ್ಲಿ ಕಂಕಣ ಸೂರ್ಯಗ್ರಹಣ ಗೋಚರವಾಗುತ್ತದೆ.
ಕೆಲವೆಡೆ ಖಂಡಗ್ರಾಸ, ಮತ್ತೆ ಕೆಲವೆಡೆ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ. ಇದನ್ನು ಬರಿಗಣ್ಣಿನಿಂದ ನೋಡಬಾರದು. ಸೋಲಾರ್ ಕನ್ನಡಕ ಧರಿಸಿ ಅಥವಾ ಪರೋಕ್ಷ ವೀಕ್ಷಣಾ ವಿಧಾನಗಳನ್ನು ಅನುಸರಿಸಿಯೇ ಈ ಗ್ರಹಣವನ್ನು ವೀಕ್ಷಿಸಬಹುದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ