ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಶ್ರೀನಗರದಲ್ಲಿ ನಿಧನಹೊಂದಿದ್ದ ಬೆಳಗಾವಿಯ ಹುಕ್ಕೇರಿ ತಾಲೂಕಿನ ಯೋಧ ಶಿವಾನಂದ ಬಾಬು ಸಿರಗಾಂವಿ (42) ಪಾರ್ಥಿವ ಶರೀರ ಸ್ವಗ್ರಾಮ ಬಡಕುಂದ್ರಿಗೆ ಆಗಮಿಸಿದ್ದು, ಗ್ರಾಮಸ್ಥರು ಅಂತಿಮ ದರ್ಶನ ಪಡೆದರು.
ಬಡಕುಂದ್ರಿ ಗ್ರಾಮದ ವೀರಯೋಧ ಶಿವಾನಂದ ಬಾಬು ಸಿರಗಾಂವಿ ಶ್ರೀನಗರದ 55 ಆರ್ ಆರ್ ಬಟಾಲಿಯನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅನಾರೋಗ್ಯದಿಂದ ಎರಡು ದಿನಗಳ ಹಿಂದೆ ವಿಧಿವಶರಾಗಿದ್ದರು. ಅವರ ಪಾರ್ಥವ ಶರೀರ ಶನಿವಾರ ಸ್ವ ಗ್ರಾಮ ಬಡಕುಂದ್ರಿಗೆ ಆಗಮಿಸಿದೆ. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಗ್ರಾಮದ ಸರಕಾರಿ ಶಾಲೆ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಮೃತ ಯೋಧನಿಗೆ ಸರ್ಕಾರದ ಪರವಾಗಿ ತಹಶೀಲ್ದಾರ ಡಾ, ಡಿ ಎಚ್ ಹೂಗಾರ ರೀತ್‌ನೀಡಿ ಗೌರವ ಸಲ್ಲಿಸಿದರು. ಮಾಜಿ ಸಂಸದ, ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ , ಅವರು ಯೋಧನಿಗೆ ಅಂತಿಮ ನಮನ ಸಲ್ಲಿಸಿ ಕುಟುಂಬದವರಿಗೆ ಸ್ವಾಂತನ ಹೇಳಿದರು.
ಮಾಜಿ ಸಚಿವ ಶಶಿಕಾಂತ ನಾಯಿಕ, ಬೆಳಗಾವಿ ಡಿಎಆರ್ ಪೋಲಿಸ್ ವರಿಷ್ಟಾಧಿಕಾರಿ ಕಾಶಪ್ಪನವರ, ಯಮಕನಮರ್ಡಿ ಇನ್ಸಪೇಕ್ಟರ ರಮೇಶ ಛಾಯಾಗೋಳ ಅಂತಿಮ ನಮನ ಸಲ್ಲಿಸಿದರು.
ಯೋಧ ಶಿವಾನಂದ ಸಿರಗಾಂವಿ ಕಳೆದ ವಾರ ಪತ್ನಿ ಜೋತೆ ದೂರವಾಣಿ ಮುಖಾಂತರ ಮಾತನಾಡಿ ಆದಷ್ಟು ಬೇಗ ಗುಣಮುಖವಾಗಿ ಗ್ರಾಮಕ್ಕೆ ಬರುತ್ತೆನೆ ಎಂದು ಹೇಳಿದ್ದರು ಆದರೆ ಶವವಾಗಿ ಬಂದಿದ್ದಾರೆ ಎಂದು ಮೃತ ಯೋಧನ ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು ಪಾರ್ಥಿವ ಶರಿರದ ಮುಂದೆ ಕುಳಿತು ರೋಧÀನ ಮುಗಿಲು ಮುಟ್ಟಿತ್ತು. ಪತ್ನಿ, ಮಕ್ಕಳ ಅಳು ಕಂಡು ಎಲ್ಲರ ಕಣ್ಣುಗಳು ತೇವಗೊಂಡಿದವು.
ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು ಸ್ವಯಂ ಘೋಷಿತವಾಗಿ ಅಂಗಡಿ ಮುಗ್ಗಟ್ಟು ಬಂದ್ ಮಾಡಲಾಗಿತ್ತು. ನಂತರ ಗ್ರಾಮದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಿ, ಸಕಲ ಸರ್ಕಾರಿ ಗೌರವ ಹಾಗೂ ಸೇನಾ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ವಿಧಾನಸೌಧಕ್ಕೆ ಬಾಂಬ್ ಬೆದರಿಕೆ ಕರೆ; ಎಂಜಿನಿಯರ್ ಅರೆಸ್ಟ್
https://pragati.taskdun.com/latest/vidhanasoudhabomb-threataccused-arrest/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ