Latest

ತಂದೆಯ ಸಾಲಕ್ಕೆ ಮಗನೂ ಬಾಧ್ಯಸ್ಥ: ಮರು ಪಾವತಿಗೆ ಹೈಕೋರ್ಟ್ ಆದೇಶ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ತಂದೆ ಪಡೆದಿದ್ದ ಸಾಲಕ್ಕೆ ಭದ್ರತೆಯಾಗಿ ಮಗ ಚೆಕ್‌ ನೀಡಿದ್ದರೆ, ಆತನೂ ಸಾಲಕ್ಕೆ ಬಾಧ್ಯಸ್ಥನಾಗತ್ತಾನೆ ತಂದೆ ಮಾಡಿದ ಸಾಲವನ್ನು ಮಗ ಮರುಪಾವತಿ ಮಾಡಬೇಕಾಗುತ್ತದೆ ಎಂದು ಹೈಕೋರ್ಟ್‌ ಆದೇಶಿಸಿದೆ.

ದಾವಣಗೆರೆ ನಿವಾಸಿ ಪ್ರಸಾದ್‌ ರಾಯ್ಕರ್‌ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

ಪ್ರಕರಣದ ಆರೋಪಿಯಾಗಿರುವ ವ್ಯಕ್ತಿಯ ತಂದೆ ದೂರುದಾರರಿಂದ ಸಾಲ ಪಡೆದಿದ್ದರು. ಈ ಸಾಲವನ್ನು ಮರುಪಾವತಿಸುವುದಾಗಿ ಒಪ್ಪಿದ್ದ ಮಗ, ಅದಕ್ಕೆ ಖಾತ್ರಿಯಾಗಿ ಚೆಕ್ ಗಳನ್ನು ನೀಡಿದ್ದರು. ಆರೋಪಿ ದೂರುದಾರರಿಗೆ ಆಗಲೇ 10 ಸಾವಿರ ರೂ.  ಮರುಪಾವತಿ ಮಾಡಿದ್ದರು. ನಂತರ ತಂದೆಯ ಸಾಲಕ್ಕೆ ತಾನು ಬಾಧ್ಯಸ್ಥನಲ್ಲ ಎಂದು ಹೇಳಿದ್ದರು. ಆದರೆ ಮಗನ ಈ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ನಿಯಮಗಳ ಪ್ರಕಾರ ಸಾಲಕ್ಕೆ ಗ್ಯಾರಂಟಿ ನೀಡುವವರು ಹೇಗೆ ಬಾಧ್ಯಸ್ಥರಾಗುತ್ತಾರೋ ಅದೇ ರೀತಿ, ಚೆಕ್‌ ನೀಡಿದ ಪುತ್ರನೂ ಹಾಗೂ ನೆಗೋಷಿಯಬಲ್‌ ಇನ್ಸ್ಟ್ರುಮೆಂಟ್‌ ಆ್ಯಕ್ಟ್ ಪ್ರಕಾರ ಹೊಣೆಗಾರನಾಗುತ್ತಾನೆ. ತಂದೆಯ ಕಾನೂನುಬದ್ಧ ವಾರಸುದಾರನಾಗಿರುವ ಪುತ್ರ ಸಾಲ ಮರುಪಾವತಿ ಮಾಡಲೇಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:

ಪ್ರಕರಣದ ಆರೋಪಿ ದಿನೇಶ್‌ ತಂದೆ ಭರಮಪ್ಪ ಎಂಬುವವರು ದೂರುದಾರ ಪ್ರಸಾದ್‌ ಎಂಬುವರಿಂದ 2003ರ ಮಾ. 7ರಂದು 2.6 ಲಕ್ಷ ರೂ. ಸಾಲ ಪಡೆದಿದ್ದರು. ಶೇಕಡಾ 2ರ ಬಡ್ಡಿ ಸೇರಿಸಿ ಹಣ ಮರುಪಾವತಿ ಮಾಡುವುದಾಗಿ ಪ್ರಾಮಿಸರಿ ನೋಟ್‌ ಬರೆದುಕೊಟ್ಟಿದ್ದರು. ಆದರೆ, 2005ರಲ್ಲಿ ಭರಮಪ್ಪನಿಧನರಾದರು.

ಈ ವೇಳೆಗೆ ಸಾಲದ ಮೊತ್ತ ಬಡ್ಡಿ ಸೇರಿ 4.5 ಲಕ್ಷ ರೂ. ಆಗಿತ್ತು. ಆ ಬಳಿಕ ದಿನೇಶ ಅವರು 10 ಸಾವಿರ ರೂ. ಮರುಪಾವತಿ ಮಾಡಿ, ಉಳಿದ ಹಣವನ್ನು ಎರಡು ಕಂತುಗಳಲ್ಲಿ ನೀಡುವುದಾಗಿ ಹೇಳಿ 2.25 ಲಕ್ಷ ರೂ. ಮೊತ್ತದ ಎರಡು ಚೆಕ್‌ ಗಳನ್ನು ನೀಡಿದ್ದರು. ಆದರೆ, ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೆ ಎರಡೂ ಚೆಕ್‌ಗಳು ಬೌನ್ಸ್‌ ಆಗಿದ್ದವು. ಈ ಹಿನ್ನೆಲೆಯಲ್ಲಿ ದೂರುದಾರ ಪ್ರಸಾದ್‌ ಅವರು ಕೋರ್ಟ್ ಮೆಟ್ಟಿಲೇರಿದ್ದರು.

ದೂರಿನ ವಿಚಾರಣೆ ನಡೆಸಿದ ದಾವಣಗೆರೆ ಜೆಎಂಎಫ್‌ಸಿ ನ್ಯಾಯಾಲಯ ತಂದೆಯ ಕಾನೂನು ಬದ್ಧ ವಾರಸುದಾರನಾದ ಮಗ ಸಾಲವನ್ನು ಮರುಪಾವತಿ ಮಾಡಬೇಕು ಎಂದು ಆದೇಶಿಸಿತ್ತು. ಆದರೆ, ಸೆಷನ್ಸ್‌ ನ್ಯಾಯಾಲಯ ಹಣ ಮರು ಪಾವತಿಸಬೇಕಾಗಿಲ್ಲ ಎಂದು ತೀರ್ಪು ನೀಡಿತ್ತು. ಸೆಷನ್ಸ್ ಕೋರ್ಟ್ ಆದೇಶ ಪ್ರಶ್ನಿಸಿ ದೂರುದಾರ ಪ್ರಸಾದ್‌ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

*ನೋಡ ನೋಡುತ್ತಿದ್ದಂತೆ ರಸ್ತೆ ಮಧ್ಯೆಯೇ ಹೊತ್ತಿ ಉರಿದ ಸಿಮೆಂಟ್ ಲಾರಿ*

https://pragati.taskdun.com/lorryfire-accidentnational-highway-66/

*ಮಾಜಿ ಶಾಸಕ ಎಲ್.ಟಿ.ತಿಮ್ಮಪ್ಪ ಹೆಗಡೆ ನಿಧನ*

https://pragati.taskdun.com/ex-mla-l-timmappa-hegadeno-moresagara/

ಯುವಕನ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿದ ನಾಲ್ವರು ಯುವತಿಯರು!

https://pragati.taskdun.com/four-young-women-sexually-assaulted-a-young-man/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button