ಗ್ರಾಮಸ್ಥರ ಸಂಕಷ್ಟಕ್ಕೆ ಸ್ಪಂದಿಸಿದ ಸೋನಾಲಿ ಸರ್ನೋಬತ್: ತಾವೇ ನಿಂತು ರೇಶನ್ ಹಂಚಿದ ಡಾಕ್ಟರ್
ಸೋನಾಲಿ ಸರ್ನೋಬತ್ ರೇಶನ್ ಹಂಚುವ ಮೂಲಕ ಖುಷಿಯನ್ನು ಸಹ ಹಂಚಿದರು
ಪ್ರಗತಿವಾಹಿನಿ ಸುದ್ದಿ, ಖಾನಾಪುರ – ತಾಲೂಕಿನ ಭೋರುಣಕಿ ಗ್ರಾಂ ಪಂ ವ್ಯಾಪ್ತಿಯಲ್ಲಿ ಬರುವ ಗಸ್ಟೋಳ್ಳಿ ಮತ್ತು ಚಣಕೆಬೈಲ ಗ್ರಾಮಸ್ಥರು ರೇಶನ್ ಪಡೆಯಲು ಸುಮಾರು 7 ಕಿಮೀ ದೂರದ ಗೊಳಿಹಳ್ಳಿಗೆ ಹೋಗಬೇಕಿತ್ತು.
ಇದನ್ನು ತಿಳಿದ ಬೆಳಗಾವಿ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷರು ಹಾಗೂ ಖಾನಾಪುರ ತಾಲೂಕಿನ ಪ್ರಭಾರಿಗಳು ಆದ ಡಾ. ಸೋನಾಲಿ ಸರ್ನೋಬತ್ ಗ್ರಾಮಸ್ಥರ ಸಮಸ್ಯೆಯನ್ನು ನೋಡಿ ಸಂಬಂಧಿಸಿದ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಪರಿಣಾಮವಾಗಿ ಎರಡೂ ಗ್ರಾಮಗಳಲ್ಲಿ ಅಲ್ಲಿಯೇ ರೇಶನ್ ಹಂಚುವ ವ್ಯವಸ್ಥೆ ಮಾಡಿಸಲಾಗಿದೆ.
ಸೋನಾಲಿ ಸರ್ನೋಬತ್ ಸ್ವತಃ ನಿಂತು ಗ್ರಾಮಸ್ಥರಿಗೆ ರೇಶನ್ ಹಂಚುವ ಮೂಲಕ ಖುಷಿಯನ್ನು ಸಹ ಹಂಚಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯರಾದ ಮುನ್ನೆಹಿ ಕುಳವಶಕರ್, ಈಶ್ವರ್ ಸನಿಕೊಪ್ಪ, ಕಮಲವ್ವ ವಡ್ಡಿನ್, ಶಾಹಿರ್ ಹುಬಳಿಕರ್, ಬಾಳೆಶ್ ಚವ್ಹಣ್ಣವರ್, ಕುಶಾಲ್ ಅಂಬೋಜಿ, ಮಹೇಶ್ ಗುರವ್, ಪ್ರಭು ಅವರಾದಿ ಹಾಗೂ ಊರಿನ ಇನ್ನಿತರ ನಾಗರಿಕರು ಉಪಸ್ಥಿತರಿದ್ದರು.
ಖಾನಾಪುರ ಗ್ರಾಮಸ್ಥರ ಪರ ಡಾ.ಸೋನಾಲಿ ಸರ್ನೋಬತ್ ಅಹವಾಲು ಸಲ್ಲಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ