Kannada NewsKarnataka News

ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ: ಸೋನಾಲಿ ಸರ್ನೋಬತ್


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಮಂಗಳವಾರ ಸಂಜೆ ಬಿಜೆಪಿ ಬಿಡುಗಡೆಗೊಳಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ್ದರಿಂದ ಖಾನಾಪುರ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ತಮಗೆ ಆಘಾತವಾಗಿದೆ. ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಈಗಾಗಲೇ ಹಲವರೊಂದಿಗೆ ಚರ್ಚೆ ನಡೆಸಿದ್ದು, ಇಲ್ಲಿಯವರೆಗೆ ತಮ್ಮೊಂದಿಗೆ ಇದ್ದ ಎಲ್ಲ ಕಾರ್ಯಕರ್ತರೊಂದಿಗೆ ಚರ್ಚಿಸಿದ
ಬಳಿಕ ಮುಂದಿನ ನಿರ್ಣಯ ಕೈಗೊಳ್ಳುವುದಾಗಿ ಬಿಜೆಪಿ ಮುಖಂಡೆ ಡಾ.ಸೋನಾಲಿ ಸರ್ನೋಬತ್ ಹೇಳಿದರು.


ಬುಧವಾರ ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ಕಳೆದ ಹಲವು
ತಿಂಗಳುಗಳಿಂದ ಖಾನಾಪುರ ಕ್ಷೇತ್ರದ ಉದ್ದಗಲ ಸಂಚರಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದ
ತಮಗೆ ಇಲ್ಲಿಯ ಜನರೊಂದಿಗೆ ವಿಶಿಷ್ಟವಾದ ಭಾವನಾತ್ಮಕ ಸಂಬಂಧವಿದೆ. ಇಲ್ಲಿಯ ಕಾಂಗ್ರೆಸ್
ಅಭ್ಯರ್ಥಿ ಮಹಿಳೆ ಮತ್ತು ವೃತ್ತಿಯಲ್ಲಿ ವೈದ್ಯೆ ಇರುವ ಕಾರಣ ಅವರಿಗೆ ಪ್ರಬಲ ಪೈಪೋಟಿ
ನೀಡುವ ಉದ್ದೇಶದಿಂದ ತಾವು ಪೂರ್ಣ ಸಿದ್ಧತೆಯೊಂದಿಗೆ ಕಣಕ್ಕೆ ಧುಮುಕಿದ್ದು, ಪಕ್ಷ
ಟಿಕೆಟ್ ಘೋಷಣೆಯ ವಿಷಯದಲ್ಲಿ ಬಿಜೆಪಿ ವರಿಷ್ಢರು ಕೈಗೊಂಡ ನಿರ್ಣಯದಿಂದ ನೋವು
ಉಂಟಾಗಿದೆ” ಎಂದು ಹೇಳಿದರು.

https://pragati.taskdun.com/kagodu-timmappadaughterrajanandinibjp-join/

Related Articles

Back to top button