![](https://pragativahini.com/wp-content/uploads/2022/02/sonu-sood-.jpg)
ಪ್ರಗತಿವಾಹಿನಿ ಸುದ್ದಿ: ಖ್ಯಾತ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದ್ದು, ಲುಢಿಯಾನ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದೆ.
10 ಲಕ್ಷ ರೂಪಾಯಿ ಕ್ರಿಪ್ಟೊ ಕರೆನ್ಸಿ ವಂಚನೆ ಕೇಸ್ ನಲ್ಲಿ ಸಾಕ್ಷಿಯಾಗಿ ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಸೋನು ಸೂದ್ ವಿರುದ್ಧ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ.
ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ವಿರುದ್ಧ 10 ಲಕ್ಷ ರೂಪಾಯಿ ವಂಚನೆ ಕೇಸ್ ದಾಖಲಿಸಿದ್ದೌ. ಕ್ರಿಪ್ಟೋ ಕರೆನ್ಸಿ ಹೆಸರಲ್ಲಿ ನಡೆದ ವಂಚನೆ ಇದಾಗಿತ್ತು. ಈ ಪ್ರಕರಣದ ವಿಚಾರಣೆ ಲುಧಿಯಾನಾ ಕೋರ್ಟ್ ನಲ್ಲಿ ನಡೆಯುತ್ತಿತ್ತು. ಪ್ರಕರಣದಲ್ಲಿ ಸೋನು ಸೂದ್ ಸಾಕ್ಷಿ ಹೇಳಬೇಕಿತ್ತು. ಅವರಿಗೆ ಪದೇ ಪದೇ ಕೋರ್ಟ್ ಗೆ ಹಜಾರಾಗುವಂತೆ ನೋಟಿಸ್ ನೀಡಿದ್ದರೂ ಕೂಡ ಕೋರ್ಟ್ ಗೆ ಹಾಜರಾಗಿ ಸಾಕ್ಷಿ ಹೇಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೋರ್ಟ್ ನಟನ ವಿರುದ್ಧ ಬಧನ ವಾರಂಟ್ ಜಾರಿ ಮಾಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ