Kannada NewsKarnataka News

ಮಹಾವೀರ ಸೌಹಾರ್ದ ಸಹಕಾರಿಗೆ ಶ್ರೇಷ್ಠ ಸಹಕಾರಿ ಪ್ರಶಸ್ತಿ: ಹುಕ್ಕೇರಿ ಹಿರೇಮಠದಿಂದ ಗೌರವ 

ಮಹಾವೀರ ನೀಲಜಿ ಸಾಧನೆಗೆ ಪ್ರಶಂಸೆ 

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ:  ಹುಕ್ಕೇರಿಯ ಮಹಾವೀರ ಸೌಹಾರ್ದ ಸಹಕಾರಿಗೆ ರಾಜ್ಯ ಮಟ್ಟದ ಶ್ರೇಷ್ಠ ಸಹಕಾರಿ ಪ್ರಶಸ್ತಿ ಲಭಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಹುಕ್ಕೇರಿ ಹಿರೇಮಠದಲ್ಲಿ  ಜರುಗಿದ ಕಾರ್ತಿಕೋತ್ಸವದಲ್ಲಿ ಸನ್ಮಾನಿಸಿದರು.
 ಅಖಿಲ ಭಾರತ ಸಹಕಾರಿ ಸಪ್ತಾಹದಲ್ಲಿ ಸಹಕಾರಿ ಸಚಿವರಾದ ಸೋಮಶೇಖರ, ಸಹಕಾರಿ ಮಹಾಮಂಡಳಿ ಅಧ್ಯಕ್ಷ ಜಿ ಟಿ ದೇವೇಗೌಡ, ಉಪಾಧ್ಯಕ್ಷ ಜಗದೀಶ ಕವಟಗಿಮಠವರು ಸಹಕಾರಿ ಪ್ರಶಸ್ತಿಯನ್ನು ನೀಡಿದ್ದಾರೆ.  2 ಲಕ್ಷದಿಂದ ಆರಂಭಗೊಂಡಿರುವ ಈ ಸಂಸ್ಥೆ ಇವತ್ತು 200 ಕೋಟಿ  ಡಿಪಾಸಿಟ್ ಹೊಂದಿದೆ. 800 ಕೋಟಿ ವಹಿವಾಟವನ್ನು ಹೊಂದಿರುವ ಈ ಸಂಸ್ಥೆ 450 ನೌಕರರನ್ನು ಹೊಂದಿದೆ.  ಇದೊಂದು ದೊಡ್ಡ ಸಾಧನೆಯಾಗಿದೆ ಎಂದು ಶ್ರೀಗಳು ಹೇಳಿದರು.
  ಮಹಾವೀರ ವಸಂತ ನಿಲಜಿಗಿ   ತುಂಬಾ ಶ್ರಮಪಟ್ಟು ಮೇಲೆ ಬಂದಿದ್ದಾರೆ. ತಂದೆ  ವಸಂತ ನಿಲಜಿಗಿಯವರ ಆದರ್ಶವನ್ನು ಮೈಗೂಡಿಸಿಕೊಂಡು ಬಂದಿರುವ ಇವರಿಗೆ ಈಗಾಗಲೇ  ಹಲವಾರು ಪ್ರಶಸ್ತಿಗಳು ಲಭಿಸಿರುವುದು ನಮಗೆ ಆತೀವ ಸಂತೋಷವನ್ನು ತಂದಿದೆ ಎಂದು ಹೇಳಿದರು.
ಕ್ಯಾರಗುಡ್ಡ ಅವಜಿಕರ ಆಶ್ರಮದ ಶ್ರೀ ಅಭಿನವ ಮಂಜುನಾಥ ಮಹಾರಾಜರು ಮಾತನಾಡಿ, ಮಹಾವೀರ ನಿಲಜಿಗಿ ಅವರು ಎಲ್ಲರೊಂದಿಗೆ ಕೆಲಸವನ್ನು ಮಾಡಿರುವ ಪ್ರತಿಫಲವೇ ಇಂಥ ಪ್ರಶಸ್ತಿ ಲಭಿಸಿದೆ. ಇವರ ಕಾರ್ಯ  ನಿಜಕ್ಕೂ ಕೂಡ ಅಭಿನಂದನೀಯ ಎಂದರು.
 ವಿವೇಕಾನಂದ ಸಂಸ್ಥೆಯ ಅಧ್ಯಕ್ಷರ ಅಶೋಕ ಪಾಟೀಲ ಮಾತನಾಡಿ,  ಮಹಾವೀರ ನಿಲಜಿಗಿ ಅವರ ಶ್ರಮ ಮತ್ತು ರಾಜ್ಯಮಟ್ಟದ ಅನೇಕ ಸಂಸ್ಥೆಗಳ ಇವರಿಗೆ  ಪ್ರಶಸ್ತಿಯನ್ನು ನೀಡಿರುವುದು  ನಮ್ಮ ಹುಕ್ಕೇರಿಗೆ ಹೆಮ್ಮೆ ಎಂದರು.
ಸಂಪತ ಕುಮಾರ್ ಶಾಸ್ತ್ರಿಗಳು ಪ್ರಾಸ್ತವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸುರೇಶ ಜಿಂದ್ರಾಳಿ, ಬಾಬು ಬೆನಿವಾಡಿ, ಉದಯ ಕುಮಾರ ಶಾಸ್ತ್ರಿಗಳು , ನಿಶಾಂತ ಸ್ವಾಮಿಯವರು ಉಪಸ್ಥಿತರಿದ್ದರು.
https://pragati.taskdun.com/their-perseverance-in-the-journey-of-love/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button