ಬೋಲೆಂಡ್ ಪಾರ್ಕ್ – ಭಾರತ- ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿ ಬಳಿಕ ಆರಂಭಗೊಂಡಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಮೊದಲ ಪಂದ್ಯದಲ್ಲೇ ಆತಿಥೇಯ ತಂಡದ ನಾಯಕನ ಜೊತೆ ವಿರಾಟ್ ಕೋಹ್ಲಿ ಕಿರಿಕ್ ಮಾಡಿಕೊಂಡಿದ್ದಾರೆ.
ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಎದುರಾಳಿ ತಂಡದ ಕ್ಯಾಪ್ಟನ್ ತೆಂಬಾ ಬವೂಮ ಎದುರು ಅನಗತ್ಯ ಜಗಳವಾಡಿದರು.
ದಕ್ಷಿಣ ಆಫ್ರಿಕದ ಬೋಲೆಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕ್ಯಾಪ್ಟನ್ ತೆಂಬಾ ಬವೂಮ ಉತ್ತಮ ಇನ್ನಿಂಗ್ಸ್ ಕಟ್ಟಿದರು. ೧೧೦ ರನ್‌ಗಳನ್ನು ಭಾರಿಸಿದ ಅವರು ಏಕ ದಿನ ಪಂದ್ಯದಲ್ಲಿ ತಮ್ಮ ಎರಡನೇ ಶತಕ ದಾಖಲಿಸಿದರು. ಆದರೆ ದಕ್ಷಿಣ ಆಫ್ರಿಕಾ ತಂಡ ಬ್ಯಾಟ್ ಮಾಡುವಾಗ ಇನಿಂಗ್ಸ್‌ನ ೩೬ನೇ ಓವರ್‌ನಲ್ಲಿ ಕೋಹ್ಲಿ ಮತ್ತು ತೆಂಬಾ ಬವೂಮ ಜೊತೆ ಕೋಹ್ಲಿ ಮಾತಿನ ಚಕಮಕಿ ನಡೆಸಿದ್ದಾರೆ.
ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಬೌಲಿಂಗ್ ಮಾಡುವಾಗ ಸ್ಟ್ರೈಕ್‌ನಲ್ಲಿದ್ದ ಬವೂಮ ಕವರ್ಸ್ ಕಡೆಗೆ ಬಲವಾಗಿ ಬಾರಿಸಿದ್ದರು. ಆದರೆ ಚೆಂಡು ನೇರವಾಗಿ ಫೀಲ್ಡರ್ ವಿರಾಟ್ ಕೊಹ್ಲಿ ಕೈ ಸೇರಿತ್ತು. ಬ್ಯಾಟ್ಸ್‌ಮನ್ ಕ್ರೀಸ್‌ನಿಂದ ಆಚೆ ಇರುವುದನ್ನು ಗಮನಿಸಿದ್ದ ಕೊಹ್ಲಿ ಕೂಡಲೇ ಸ್ಟಂಪ್ಸ್ ಕಡೆಗೆ ಎಸೆದರು. ಕೊಹ್ಲಿ ಎಸೆದ ಚೆಂಡು ಸ್ವಲ್ಪದರಲ್ಲೇ ಬವೂಮಾ ಹೆಲ್ಮೆಟ್‌ಗೆ ಬಡಿಯುವುದರಿಂದ ತಪ್ಪಿಹೋಗಿ ಕೀಪರ್ ರಿಷಬ್ಪಂತ್ ಕೈ ಸೇರಿತು. ಇದರಿಂದ ಬೆಚ್ಚಿದ ಬವೂಮಾ ಕೋಹ್ಲಿ ಉದ್ದೇಶಿಸಿ ಕಿಡಿ ಕಾರಿದರು.ಕೊಹ್ಲಿ ಕೂಡ ಮಾತಿಗೆ ಮುಂದಾದರು.ಬಳಿಕಬವೂಮಾಗೆ ಕೋಹ್ಲಿ ಸುಮ್ಮನೆ ಬ್ಯಾಟ್ ಮಾಡುವಂತೆ ಸೂಚಿಸಿದರು.
ಈ ಮೊದಲು ನಡೆದ ಟೆಸ್ಟ್ ಸರಣಿಯಲ್ಲೂ ಟೀಂ ಇಂಡಿಯಾ ಮತ್ತು ಸೌಥ್ ಆಫ್ರಿಕಾ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದವು. ಈಗ ಏಕದಿನ ಸರಣಿಯಲ್ಲೂ ಮುಂದುವರಿದಿದೆ.
ಭೀಕರ ರಸ್ತೆ ಅಪಘಾತ; ಯಕ್ಷಗಾನ ಕಲಾವಿದ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ