ಪ್ರಗತಿವಾಹಿನಿ ಸುದ್ದಿ; ದಕ್ಷಿಣ ಕೊರಿಯಾ: ಮೊದಲೆಲ್ಲ ವೈದ್ಯರು ಶಸ್ತ್ರ ಚಿಕಿತ್ಸೆಯ ವೇಳೆ, ಅಥವಾ ಕೆಲವು ನಿರ್ಧಿಷ್ಟ ಕೆಲಸಗಾರರು ಮಾತ್ರ ಧರಿಸುತ್ತಿದ್ದ ಮಾಸ್ಕ್, ಕೋವಿಡ್ 19 ವ್ಯಾಪಕವಾದಬಳಿಕ ವಿಶ್ವದಾದ್ಯಂತ ಪ್ರತಿಯೊಬ್ಬರ ಕಡ್ಡಾಯ ಉಡುಪಾಗಿ ಮಾರ್ಪಟ್ಟಿದೆ. ಬೇರೆ ವಸ್ತುಗಳನ್ನು ಧರಿಸದಿದ್ದರೂ ಚಿಂತೆಯಿಲ್ಲ, ಆದರೆ ಮಾಸ್ಕ್ ಧರಿಸದಿದ್ದರೆ ದಂಡ ಬೀಳುವುದು ಗ್ಯಾರಂಟಿ.
ಇದೇ ವೇಳೆ ಮಾಸ್ಕ್ ನ್ನು ವಿನ್ಯಾಸದಲ್ಲೂ ವೈವಿದ್ಯತೆ ಕಂಡುಬರುತ್ತಿದೆ. ಧರಿಸುವ ವಸ್ತ್ರಕ್ಕೆ ಮ್ಯಾಚಿಂಗ್ ಆಗುವ ಮಾಸ್ಕ್, ಬಗೆಬಗೆಯ ಡಿಸೈನ್ ಉಳ್ಳ ಮಾಸ್ಕ್, ಮೂರು ಲೇಯರ್ ಇರುವ ಹೆಚ್ಚು ಸುರಕ್ಷಿತವಾದ ಮಾಸ್ಕ್ ಹೀಗೆ ತರಹೇವಾರಿ ಮಾಸ್ಕ್ಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ.
ಆದರೆ ದಕ್ಷಿಣ ಕೋರಿಯಾದ ಕಂಪನಿಯೊಂದು ವಿಭಿನ್ನ ಆಲೋಚನೆಯ ಮೂಲಕ ಹೊಸ ಬಗೆಯ ಮಾಸ್ಕ್ ಒಂದನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ಬಿಟ್ಟಿದ್ದು ವ್ಯಾಪಕ ಬೇಡಿಕೆ ಪಡೆಯುತ್ತಿದೆ.
ವಿಭಿನ್ನ ಆಲೋಚನೆ
ಮಾಸ್ಕ್ ಧರಿಸಿದಾಗ ಆಹಾರ ಸೇವೆನೆಗೆ ತೊಂದರೆಯಾಗುತ್ತದೆ. ಪ್ರತಿ ಬಾರಿ ಮಾಸ್ಕ್ ತೆಗೆದು ತಿನ್ನುವುದು ಕುಡಿಯುವುದು ಕಿರಿಕಿರಿಯ ಸಂಗತಿ. ಈ ಸಮಸ್ಯೆಗೆ ಪರಿಹಾರದ ರೀತಿಯಲ್ಲಿ ಆಹಾರ ಸೇವಿಸುವಾಗ ಮೂಗನ್ನಷ್ಟೇ ಮುಚ್ಚಿ ಬಾಯಿಯ ಭಾಗವನ್ನು ತೆರೆದಿಡಬಲ್ಲ ಹೊಸ ಬಗೆಯ ಮಾಸ್ಕನ್ನು ಕೊರಿಯಾದ ಅಟ್ಮನ್ ಎಂಬ ಕಂಪನಿ ಸಿದ್ಧಪಡಿಸಿದ್ದು ಇದಕ್ಕೆ ಕೋಸ್ಕ್ ಎಂದು ಹೆಸರಿಟ್ಟಿದೆ.
ಕೋಸ್ಕನ್ನು ಮಡಿಸುವ ವ್ಯವಸ್ಥೆ ಅಳವಡಿಸಲಾಗಿದ್ದು, ಆಹಾರ ಸೇವನೆಯ ಸಂದರ್ಭದಲ್ಲಿ ಬಾಯಿಯ ಭಾಗವನ್ನು ಮೇ¯ಕ್ಕೆ ಮಡಿಸಿಟ್ಟುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಹೊಸ ಬಗೆಯ ಮಾಸ್ಕ್ ಸಧ್ಯ ದಕ್ಷಿಣ ಕೋರಿಯಾದ ಮಾರುಕಟ್ಟೆಯಲ್ಲಿ ಜನಪ್ರಿಯವಾಗುತ್ತಿದ್ದು ವಿಶ್ವದಾದ್ಯಂತ ಮಾರುಕಟ್ಟೆ ಕುದುರಿಸುವ ಯೋಚನೆ ಕಂಪನಿಯದ್ದಾಗಿದೆ.
ಆಗಸ್ಟ್ ನಲ್ಲಿ ಚಂದ್ರಯಾನ -3
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ