Kannada NewsKarnataka NewsNationalPolitics

ಮಾಜಿ ಡಿಸಿಎಂ ಸುಶೀಲ್‌ ಕುಮಾರ್‌ ಮೋದಿ ನಿಧನ

ಪ್ರಗತಿವಾಹಿನಿ ಸುದ್ದಿ: ಬಿಹಾರದ ಮಾಜಿ ಡಿಸಿಎಂ, ಬಿಜೆಪಿಯ ಹಿರಿಯ ನಾಯಕ ಸುಶೀಲ್‌ ಕುಮಾರ್‌ ಮೋದಿ ಅನಾರೋಗ್ಯ ಹಿನ್ನೆಲೆ ನಿಧನ ಹೊಂದಿದ್ದಾರೆ.

ಸುಮಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಶೀಲ್‌ಕುಮಾರ ಮೋದಿಯವರಿಗೆ (72) ಕಳೆದ ಏಪ್ರಿಲ್‌ನಲ್ಲಿ ಅವರಿಗೆ ಕ್ಯಾನ್ಸರ್‌ ರೋಗ ಇರುವುದಾಗಿ ಪತ್ತೆಯಾದಾಗಿನಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ  ಅವರಿಗೆ ಪಾಟ್ನಾದಲ್ಲೇ ಚಿಕಿತ್ಸೆ ಮುಂದುವರೆಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಪಾಟ್ನಾದಲ್ಲಿ ಕೊನೆಯುಸಿರೆಳೆದಿದ್ದಾರೆ.

ಸುಶೀಲ್‌ ಮೋದಿಯವರ ಸುದೀರ್ಘ ರಾಜಕೀಯ ಪಯಣದಲ್ಲಿ ಎಂಎಲ್‌ಎ, ಎಂಎಲ್‌ಸಿ, ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರು ಬಿಹಾರದ ಡಿಸಿಎಂ ಆಗಿ ಕಾರ್ಯನಿವರ್ಹಿಸಿದ್ದಾರೆ. ಹಿರಿಯ ನಾಯಕನ ಅಗಲಿಕೆಗೆ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.‌

Home add -Advt

Related Articles

Back to top button