ಅಗ್ನಿಹೋತ್ರ – ಭಾವೀ ಮಹಾಯುದ್ಧದ ಕಾಲದಲ್ಲಿ ಎದುರಾಗುವ ಸಮಸ್ಯೆಗಳ ಸಮಯದಲ್ಲಿ ಹಾಗೂ ದಿನನಿತ್ಯದಲ್ಲಿಯೂ ಉಪಯುಕ್ತ !
ವಿಶ್ವ ಅಗ್ನಿಹೋತ್ರ ದಿನದ ನಿಮಿತ್ತ ಸನಾತನ ಸಂಸ್ಥೆಯ ವಿಶೇಷ ಲೇಖನ
ತ್ರಿಕಾಲಜ್ಞಾನಿ ಸಂತರು, ಮುಂದೆ ಭೀಕರ ಆಪತ್ಕಾಲ ಬರಲಿದೆ ಮತ್ತು ಅದರಲ್ಲಿ ಜಗತ್ತಿನಲ್ಲಿನ ಬಹಳಷ್ಟು ಜನರು ನಾಶವಾಗುವವರಿದ್ದಾರೆ ಎಂದು ಹೇಳಿದ್ದಾರೆ. ಮುಂದೆ ಆಪತ್ಕಾಲ ಬರಲಿದೆ ಎಂದು ಹೇಳುವುದಕ್ಕಿಂತ ಈಗ ಆಪತ್ಕಾಲ ಪ್ರಾರಂಭವಾಗಿದೆ ಎನ್ನುವುದೇ ಸೂಕ್ತವಾಗಿದೆ. ಆಪತ್ಕಾಲದಲ್ಲಿ ಮೂರನೇ ಮಹಾಯುದ್ಧ ಪ್ರಾರಂಭವಾಗಬಹುದು. ಈಗ ಜಗತ್ತಿನಲ್ಲಿನ ಎಲ್ಲ ರಾಷ್ಟ್ರಗಳ ಬಳಿ ಎರಡನೇ ಮಹಾಯುದ್ಧಕ್ಕಿಂತ ಮಹಾ ಸಂಹಾರಕ ಅಣ್ವಸ್ತ್ರಗಳಿವೆ.
ಮುಂದೆ ಅವುಗಳನ್ನು ಒಬ್ಬರ ಮೇಲೊಬ್ಬರು ಉಪಯೋಗಿಸಬಹುದು. ಈ ಯುದ್ಧದಲ್ಲಿ ಬದುಕಬೇಕಾದರೆ, ಅಣ್ವಸ್ತ್ರಗಳನ್ನು ನಿಷ್ಕ್ರಿಯಗೊಳಿಸಲು ಪ್ರಭಾವಿ ಉಪಾಯಗಳು ಬೇಕು; ಹಾಗೆಯೇ ಈ ಅಣ್ವಸ್ತ್ರಗಳಿಂದ ಹೊರಸೂಸುವ ವಿಕಿರಣಗಳ ಹರಡುವಿಕೆಯನ್ನು ನಾಶಗೊಳಿಸುವ ಉಪಾಯಗಳೂ ಬೇಕು. ಇದಕ್ಕೆ ಸ್ಥೂಲದಲ್ಲಿನ ಉಪಾಯಗಳು ಉಪಯೋಗಕ್ಕೆ ಬರಲಾರವು, ಏಕೆಂದರೆ ಅಣುಬಾಂಬು ಸಾಮಾನ್ಯ ಬಾಂಬಿಗಿಂತ ಸೂಕ್ಷ್ಮ ವಾಗಿದೆ. ಸ್ಥೂಲ (ಉದಾ. ಬಾಣವನ್ನು ಬಿಟ್ಟು ಶತ್ರುವನ್ನು ನಾಶ ಮಾಡುವುದು), ಸ್ಥೂಲ ಅಧಿಕ ಸೂಕ್ಷ್ಮ (ಉದಾ. ಮಂತ್ರವನ್ನು ಹೇಳಿ ಬಾಣವನ್ನು ಬಿಡುವುದು), ಸೂಕ್ಷ್ಮತರ (ಉದಾ. ಕೇವಲ ಮಂತ್ರವನ್ನು ಹೇಳುವುದು) ಮತ್ತು ಸೂಕ್ಷ್ಮತಮ (ಉದಾ. ಸಂತರ ಸಂಕಲ್ಪ) ಹೀಗೆ ಮುಂದುಮುಂದಿನ ಪ್ರಭಾವಶಾಲಿ ಹಂತಗಳಿವೆ. ಸ್ಥೂಲಕ್ಕಿಂತ ಸೂಕ್ಷ್ಮವು ಅನೇಕ ಪಟ್ಟು ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಆದುದರಿಂದ ಅಣುಬಾಂಬಿನಂತಹ ಪ್ರಭಾವಿ ಸಂಹಾರಕ ವಿಕಿರಣಗಳ ಹರಡುವಿಕೆಯನ್ನು ತಡೆಗಟ್ಟಲು ಸೂಕ್ಷ್ಮದಲ್ಲಿಯೇ ಏನಾದರೂ ಮಾಡಬೇಕಾಗುತ್ತದೆ. ಇದಕ್ಕೆ ಋಷಿಮುನಿಗಳು ಯಜ್ಞದ ಪ್ರಥಮಾವತಾರವಾಗಿರುವ ಅಗ್ನಿಹೋತ್ರವನ್ನು ಮಾಡಲು ಹೇಳಿದ್ದಾರೆ. ಅಗ್ನಿಹೋತ್ರವು ಮಾಡಲು ಅತ್ಯಂತ ಸುಲಭ, ಅತ್ಯಂತ ಕಡಿಮೆ ಕಾಲಾವಧಿಯಲ್ಲಿ ಆಗುವ ಮತ್ತು ಸೂಕ್ಷ್ಮದಲ್ಲಿ ಪ್ರಭಾವಿ ಪರಿಣಾಮವನ್ನು ಬೀರುವ ಉಪಾಯವಾಗಿದೆ.
ಇದರಿಂದ ವಾತಾವರಣವು ಚೈತನ್ಯಮಯವಾಗುತ್ತದೆ ಮತ್ತು ರಕ್ಷಾಕವಚವೂ ನಿರ್ಮಾಣವಾಗುತ್ತದೆ. ಪ್ರತಿದಿನ ಅಗ್ನಿಹೋತ್ರ ಮಾಡುವುದು ಕೇವಲ ಆಪತ್ಕಾಲದ ದೃಷ್ಟಿಯಿಂದ ಮಾತ್ರವಲ್ಲದೇ, ನಿತ್ಯವೂ ಉಪಯುಕ್ತವಾಗಿದೆ. ಈ ಲೇಖನದಿಂದ ವಾಚಕರಿಗೆ ಅಗ್ನಿಹೋತ್ರದ ಪರಿಚಯವಾಗುವುದು. ಸಂತ-ಮಹಾತ್ಮರು, ಜ್ಯೋತಿಷಿಗಳು ಮುಂತಾದವರು ಹೇಳಿದಂತೆ ಮುಂಬರುವ ಕಾಲವು ಭೀಕರ ಆಪತ್ಕಾಲವಾಗಿದ್ದು ಈ ಕಾಲದಲ್ಲಿ ಸಮಾಜವು ಅನೇಕ ಆಪತ್ತುಗಳನ್ನು ಎದುರಿಸಬೇಕಾಗಬಹುದು. ಇಂತಹ ಆಪತ್ಕಾಲದಲ್ಲಿ ತನ್ನೊಂದಿಗೆ ಕುಟುಂಬದವರ ಆರೋಗ್ಯವನ್ನು ರಕ್ಷಿಸುವುದು ದೊಡ್ಡ ಸವಾಲಾಗಿರುತ್ತದೆ. ಆಪತ್ಕಾಲದಲ್ಲಿ ಸಾರಿಗೆಯ ಸಾಧನಗಳು ಇಲ್ಲದಿರುವುದರಿಂದ ರೋಗಿಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವುದು, ಡಾಕ್ಟರ್ ಅಥವಾ ವೈದ್ಯರನ್ನು ಸಂಪರ್ಕಿಸುವುದು ಮತ್ತು ಮಾರುಕಟ್ಟೆಯಲ್ಲಿ ಔಷಧಿಗಳು ದೊರೆಯುವುದು ಕಠಿಣವಾಗುವುದು.
ಅಗ್ನಿಹೋತ್ರವೆಂದರೆ ಅಗ್ನ ಯಂತರ್ಯಾಮಿ (ಅಗ್ನಿಯಲ್ಲಿ) ಆಹುತಿಯನ್ನು ಅರ್ಪಿಸಿ ಮಾಡಲಾಗುವ ಈಶ್ವರನ ಉಪಾಸನೆ. ಇದರಿಂದ ನಿರ್ಮಾಣವಾಗುವ ಅಗ್ನಿಯು ರಜ-ತಮ ಕಣಗಳನ್ನು ವಿಘಟನೆ ಮಾಡುತ್ತದೆ ಮತ್ತು ವಾಯುಮಂಡಲದಲ್ಲಿ ದೀರ್ಘ ಕಾಲ ಉಳಿದುಕೊಳ್ಳುತ್ತದೆ, ಆದುದರಿಂದ ಅಗ್ನಿಹೋತ್ರವನ್ನು ಸತತವಾಗಿ ಮಾಡಿದರೆ ಅದು ಮಾನವನ ಸುತ್ತಲೂ ೧೦ ಅಡಿ ದೂರದಲ್ಲಿ ರಕ್ಷಾ ಕವಚವನ್ನು ನಿರ್ಮಾಣ ಮಾಡುತ್ತದೆ. ಈ ಕವಚವು ಬಾಂಬ್‌ನಲ್ಲಿನ ಆಘಾತ ಮಾಡುವ ವಿಘಾತಕ ಸ್ವರೂಪದಲ್ಲಿ ಹೊರಸೂಸುವ ಶಕ್ತಿಯ ವಲಯಗಳು ಮೊದಲೇ ನಾಶವಾಗುವುದರಿಂದ ವಿಕಿರಣಗಳನ್ನು ಹೊರಸೂಸುವ ದೃಷ್ಟಿಯಿಂದ ಬಾಂಬ್ ನಿಷ್ಕ್ರೀಯ ವಾಗುತ್ತದೆ. ಆದುದರಿಂದ ಅದನ್ನು ಹಾಕಿದರೂ ಮುಂದೆ ಆಗುವ ಮನುಷ್ಯಹಾನಿಯು ಕೆಲವು ಪ್ರಮಾಣದಲ್ಲಿಯಾದರೂ ತಡೆಗಟ್ಟಲ್ಪಡುತ್ತದೆ.
ಅಗ್ನಿಹೋತ್ರದಿಂದ ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ಆಹಾರಧಾನ್ಯಗಳು ಬೆಳೆಯುತ್ತವೆ: ಅಗ್ನಿಹೋತ್ರದಿಂದ ವನಸ್ಪತಿಗಳಿಗೆ ವಾತಾವರಣದಿಂದ ಪೋಷಕದ್ರವ್ಯಗಳು ಸಿಗುತ್ತವೆ ಮತ್ತು ಅವು ಒಳ್ಳೆಯ ರೀತಿಯಲ್ಲಿ ಬೆಳೆಯುತ್ತವೆ. ಅಗ್ನಿಹೋತ್ರದ ಭಸ್ಮದಿಂದ ಗದ್ದೆ ಮತ್ತು ವನಸ್ಪತಿಗಳ ಬೆಳವಣಿಗೆಯ ಮೇಲೆ ಉತ್ತಮ ಪರಿಣಾಮವಾಗುತ್ತದೆ. ಇದರ ಪರಿಣಾಮದಿಂದ ಹೆಚ್ಚು ಸತ್ತ್ವಯುತ ಮತ್ತು ಸ್ವಾದಿಷ್ಟ ದವಸಧಾನ್ಯ, ಹಣ್ಣು, ಹೂವು ಮತ್ತು ಕಾಯಿಪಲ್ಲೆಗಳು ಬೆಳೆಯುತ್ತವೆ. ಅಗ್ನಿಹೋತ್ರದ ವಾತಾವರಣದಿಂದ ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳು ಆಗುತ್ತವೆ. ಮಕ್ಕಳ ಮೇಲೆ ಒಳ್ಳೆಯ ಪರಿಣಾಮಗಳಾಗಿ ಅವರ ಮೇಲೆ ಒಳ್ಳೆಯ ಸಂಸ್ಕಾರಗಳಾಗುತ್ತವೆ. ಸಿಡಿಮಿಡಿಗೊಳ್ಳುವ ಮತ್ತು ಹಠ ಮಾಡುವ ಮಕ್ಕಳು ಶಾಂತ ಮತ್ತು ಬುದ್ಧಿವಂತರಾಗುತ್ತಾರೆ. ಅಧ್ಯಯನದಲ್ಲಿ ಮಕ್ಕಳಿಗೆ ಏಕಾಗ್ರತೆ ಬರುತ್ತದೆ. ಮಂದಬುದ್ಧಿಯ ಮಕ್ಕಳು ಅವರ ಮೇಲೆ ಮಾಡಲಾಗುವ ಚಿಕಿತ್ಸೆಗೆ ಒಳ್ಳೆಯ ರೀತಿಯಲ್ಲಿ ಸ್ಪಂದಿಸುತ್ತಾರೆ. ಅಗ್ನಿಹೋತ್ರದಿಂದ ಪ್ರಬಲ ಇಚ್ಛಾಶಕ್ತಿ ನಿರ್ಮಾಣವಾಗಿ ಮನೋ ರೋಗಗಳು ಗುಣವಾಗುವವು ಮತ್ತು ಮಾನಸಿಕ ಬಲ ಪ್ರಾಪ್ತವಾಗುವುದು.
ನಿಯಮಿತವಾಗಿ ಅಗ್ನಿಹೋತ್ರವನ್ನು ಮಾಡುವ ವಿವಿಧ ಸ್ತರದಲ್ಲಿನ ಸ್ತ್ರೀ-ಪುರುಷರಲ್ಲಿ ಮತ್ತು ಬಾಲ-ವೃದ್ಧರಲ್ಲಿ ಒಂದುರೀತಿಯ ಹೆಚ್ಚಿನ ಸಮಾಧಾನ, ಜೀವನದ ಕಡೆಗೆ ನೋಡುವ ಸಕಾರಾತ್ಮಕ ದೃಷ್ಟಿಕೋನ, ಮನಃಶಾಂತಿ, ಆತ್ಮವಿಶ್ವಾಸ ಮತ್ತು ಕಾರ್ಯದ ಕಡೆಗೆ ಹೆಚ್ಚು ಒಲವು ಇಂತಹ ಗುಣಗಳು ನಿರ್ಮಾಣವಾಗಿ ಹೆಚ್ಚಳವಾಗುತ್ತಿರುವುದು ಅನುಭವಕ್ಕೆ ಬಂದಿರುತ್ತದೆ. ಸಾರಾಯಿ ಮತ್ತು ಇತರ ಹಾನಿಕರ ಮಾದಕದ್ರವ್ಯಗಳ ವ್ಯಸನಾಧೀನ ವ್ಯಕ್ತಿಗಳು ಅಗ್ನಿಹೋತ್ರದ ವಾತಾವರಣದಲ್ಲಿ ಆ ವ್ಯಸನಗಳಿಂದ ಮುಕ್ತರಾಗಬಲ್ಲರು; ಏಕೆಂದರೆ ಅವರಲ್ಲಿ ಪ್ರಬಲ ಇಚ್ಛಾಶಕ್ತಿ ನಿರ್ಮಾಣವಾಗುತ್ತದೆ, ಎಂಬುದು ಗಮನಕ್ಕೆ ಬಂದಿದೆ. ಅಗ್ನಿಹೋತ್ರದ ಜ್ವಾಲೆಯಿಂದ ಹೊರ ಬರುವ ಹೊಗೆಯು ಮೆದುಳು ಮತ್ತು ನರವ್ಯೂಹದ ಮೇಲೆ ಗಾಢ ಪರಿಣಾಮವನ್ನು ಬೀರುತ್ತದೆ. ಅಗ್ನಿಹೋತ್ರದ ಔಷಧಿಯುಕ್ತ ವಾತಾವರಣದಿಂದಾಗಿ ರೋಗಕಾರಿ ಜಂತುಗಳ ಬೆಳವಣಿಗೆಯ ಮೇಲೆ ಪ್ರತಿಬಂಧ ಬರುತ್ತದೆ ಎಂದು ಕೆಲವು ಸಂಶೋಧಕರಿಗೆ ತಿಳಿದುಬಂದಿದೆ.
ಆಧಾರ : ಸನಾತನ ನಿರ್ಮಿತ ಗ್ರಂಥ ‘ಅಗ್ನಿಹೋತ್ರ’
ಸಂಗ್ರಹ :
ಶ್ರೀ. ವಿನೋದ್ ಕಾಮತ್,
ವಕ್ತಾರರು, ಸನಾತನ ಸಂಸ್ಥೆ
(ಸಂಪರ್ಕ : 9342599299)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ