ಸಿಹಿ ಕುಂಬಳಕಾಯಿ ಕಡಬು
(ಚೀಣಿಕಾಯಿ)
ಬೇಕಾಗುವ ಸಾಮಗ್ರಿಗಳು:
ಅಕ್ಕಿ 2 ಕಪ್, ಬೆಲ್ಲ ಒಂದುವರೆ ಕಪ್, ಏಲಕ್ಕಿ 2-3, ಹೆಚ್ಚಿದ ಸಿಹಿಕುಂಬಳದ ಹೋಳು 2 ಕಪ್, ರುಚಿಗೆ ತಕ್ಕಷ್ಟು ಉಪ್ಪು. ಹಸಿ ಕೊಬ್ಬರಿ ತುರಿ 1 ಕಪ್
ಮಾಡುವ ವಿಧಾನ:
ಅಕ್ಕಿಯನ್ನು 2ಗಂಟೆ ನೀರಿನಲ್ಲಿ ನೆನೆಸಬೇಕು. ನಂತರ ಏಲಕ್ಕಿ ಮತ್ತು ಕೊಬ್ಬರಿ ತುರಿ ಸೇರಿಸಿ ದೋಸೆಹಿಟ್ಟಿನ ಹದಕ್ಕೆ ರುಬ್ಬಬೇಕು. ದಪ್ಪತಳದ ಪಾತ್ರೆಯಲ್ಲಿ ಹೆಚ್ಚಿಟ್ಟ ಚೀಣೀಕಾಯಿಗೆ ಬೆಲ್ಲ ಸೇರಿಸಬೇಕು. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು 1 ಕ ಪ್ ನೀರು ಸೇರಿಸಿ ಒಂದು ಕುದಿ ಕುದಿಸಬೇಕು. ಕುದಿಯುತ್ತಿರುವ ನೀರಿಗೆ ಮೊದಲು ರುಬ್ಬಿಟ್ಟ ಹಿಟ್ಟನ್ನು ಹಾಕಿ ಕಾಯಿಸಬೇಕು. ಗಟ್ಟಿ ಆದನಂತರ ಹಿಟ್ಟನ್ನು ಬಾಳೆ ಎಲೆಯ ಹಿಂಬಾಗದಲ್ಲಿ ಹಚ್ಚಿ ಅಕ್ಕ ಪಕ್ಕ ಮಡಿಸಬೇಕು. ಇದೇರೀತಿ ಮಡಿಸಿದ ಕಡುಬುಗಳನ್ನು ಒಂದರ ಮೇಲೆ ಒಂದಿಟ್ಟು ಉಗಿಯಲ್ಲಿ ಅರ್ಧ ಗಂಟೆ ಬೇಯಿಸಬೇಕು.
ತುಪ್ಪದ ಜೊತೆ ಈ ಕಡುಬು ತುಂಬಾ ಚೆನ್ನಾಗಿರುತ್ತೆ.
-ಸಹನಾ ಭಟ್, ಸಹನಾಸ್ ಕಿಚನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ