ಪ್ರಗತಿವಾಹಿನಿ ಸುದ್ದಿ, ಅಥಣಿ
ಶೈಕ್ಷಣಿಕ ಚಟುವಟಿಕೆಗಳೊಂದಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಸದೃಢ ವ್ಯಕ್ತಿತ್ವ ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗುತ್ತವೆ ಎಂದು ಚಿಕ್ಕೋಡಿಯ ಕೆಎಲ್ಇ ಸಂಸ್ಥೆಯ ಬಿ.ಕೆ. ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ, ಸಾಹಿತಿ ಡಾ. ಎಸ್.ಎಂ. ಪಾನಬುಡೆ ಅಭಿಪ್ರಾಯಪಟ್ಟರು.
ಕೆಎಲ್ಇ ಸಂಸ್ಥೆಯ ಸ್ಥಳೀಯ ಶ್ರೀ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಪದವಿ ಮಹಾವಿದ್ಯಾಲಯದ ಪ್ರಸಕ್ತ ವರ್ಷದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ನೆರವೇರಿಸಿ ಅವರು ಬುಧವಾರ ಮಾತನಾಡಿದರು.
ಅಪಾರವಾದ ಕನಸುಗಳೊಂದಿಗೆ ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು ಸೂಕ್ತ ಮಾರ್ಗದರ್ಶನ ಮತ್ತು ನಿರ್ದಿಷ್ಟ ಗುರಿಯೊಂದಿಗೆ ಸತತ ಪ್ರಯತ್ನಶೀಲರಾದರೆ ಸಾಧನೆ ಸುಲಭ ಸಾಧ್ಯ ಎಂದ ಅವರು ಈ ನಿಟ್ಟಿನಲ್ಲಿ ಅಥಣಿಯ ಎಸ್ಎಂಎಸ್. ಮಹಾವಿದ್ಯಾಲಯ ವಿದ್ಯಾರ್ಥಿಗಳ ಸಾಧನೆಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸುತ್ತಿದೆ, ಅವುಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾದ್ಯಕ್ಷ ಡಾ. ಮಲ್ಲಿಕಾರ್ಜುನ ಹಂಜಿ ಅವರು ಸಾಧನೆಗೆ ಅಂಗವೈಕಲ್ಯ, ಬಡತನ ಇವುಗಳು ಅಡ್ಡಿಯಲ್ಲ, ಸಾಧಿಸುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು. ಮೆಸ್ಸಿ, ಹಿಮಾದಾಸ ಇವರೆಲ್ಲ ಹಲವಾರು ಅಡೆತಡೆಗಳನ್ನು ಮೀರಿ ಮಾಡಿರುವ ಸಾಧನೆ ನಮಗೆಲ್ಲ ಸ್ಫೂರ್ತಿಯಾಗಬೇಕೆಂದರು.
ಕ್ರೀಡಾ ವಿಭಾಗದ ಉಪಾಧ್ಯಕ್ಷ ಪ್ರೊ. ಯು.ಜಿ.ಪಟಗಾರ, ವಿದ್ಯಾರ್ಥಿ ಪ್ರತಿನಿದಿ ಅವಿನಾಶ ಸಾವಂತ, ವೇದಿಕೆಯಲ್ಲಿದ್ದರು. ದಿವ್ಯಾ ಶೇಗುಣಸಿ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಬಿ.ಎಸ್.ಕಾಂಬಳೆ ಸ್ವಾಗತಿಸಿದರು. ಕಾಲೇಜು ಒಕ್ಕೂಟದ ಕಾರ್ಯಾಧ್ಯಕ್ಷೆ ಡಾ. ಭಾರತಿ ಗದ್ದಿ ಪರಿಚಯಿಸಿದರು. ಪ್ರೊ. ಮಾರುತಿ ಬಿ. ನಿರೂಪಿಸಿದರು. ಐಕ್ಯೂಎಸಿ. ಸಂಯೋಜಕ ಪ್ರೊ. ಸಂಗಮೇಶ ತಳವಾರ ವಂದಿಸಿದರು.
*ಎರಡು ಶಾಲಾ ಬಸ್ ಗಳ ಭೀಕರ ಅಪಘಾತ; 15 ವಿದ್ಯಾರ್ಥಿಗಳು ದುರ್ಮರಣ*
https://pragati.taskdun.com/manipurtwo-school-busaccident15-students-death/
ಜೈನ ಯುವ ಸಂಘಟನೆಯಿಂದ ಮುಖ್ಯಮಂತ್ರಿಗೆ ಮನವಿ
https://pragati.taskdun.com/appeal-to-chief-minister-from-jain-youth-organization/
*ಮೀಸಲಾತಿ ಬಿಕ್ಕಟ್ಟು; ಕಾಂಗ್ರೆಸ್ ನಿಲುವಿನ ಬಗ್ಗೆ ಡಿ.ಕೆಶಿವಕುಮಾರ್ ಹೇಳಿದ್ದೇನು?*
https://pragati.taskdun.com/d-k-shivakumarpresseetbelagavicongress-ticket/
ಮುಂದಿನ ವಾರ ಸುವರ್ಣ ಸೌಧದ ಎದುರು ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ಚನ್ನಮ್ಮ ಪ್ರತಿಮೆ ಸ್ಥಾಪನೆಗೆ ಅಡಿಗಲ್ಲು – ಸಿಎಂ
https://pragati.taskdun.com/inaugurationnew-building-of-sangolli-rayanna-first-class-collegeanjaneya-nagarabelagavi/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ