ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ದೇಶದಲ್ಲಿ ಸಧ್ಯ ಇರುವ ಸಾಂಕ್ರಾಮಿಕ ರೋಗದ ವಾತಾವರಣದ ನಡುವೆ, ಸಾರ್ವಜನಿಕ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಹಾಗೂ ಹಾರೈಕೆಗಳನ್ನು ಜಗತ್ತಿನಾದ್ಯಂತ ಇರುವ ಲಕ್ಷಾಂತರ ಭಕ್ತಗಣಕ್ಕೆ ತಲುಪಿಸಲು ಆಗಸ್ಟ್ 11 ಹಾಗೂ 12ರಂದು ಎಲ್ಲಾ ಕಾರ್ಯಕ್ರಮಗಳನ್ನು ಆನ್ಲೈನ್ ಮೂಲಕ ಪ್ರಸಾರ ಮಾಡಲು ನಿರ್ಧರಿಸಲಾಗಿದೆ.
ಇಸ್ಕಾನ್ ಬೆಂಗಳೂರಿನ ಎಲ್ಲ ಜಾಲತಾಣದ ಮೂಲಕ ( ಇಸ್ಕಾನ್ ಬೆಂಗಳೂರು ಯುಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಗಳ ಮೂಲಕ) ಸ್ವಾಗತಂ ಕೃಷ್ಣ ಲೈವ್ ಎಂಬ ಶೀರ್ಷಿಕೆಯಿಂದ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುವುದು.
ಡಿಜಿಟಲ್ ಆಚರಣೆಯ ಪ್ರಮುಖಾಂಶಗಳು
1. ನೌಕಾ ವಿಹಾರ – ಮುಂಜಾನೆಯಲ್ಲಿ ಶ್ರೀ ಶ್ರೀ ರಾಧಾಕೃಷ್ಣಚಂದ್ರ ಸ್ವಾಮಿ ಅವರ ನೌಕಾ ವಿಹಾರ (ತೆಪ್ಪೋತ್ಸವ)ದ ನೇರ ಪ್ರಸಾರ
2. ಅಭಿಷೇಕ – ಶ್ರೀ ಶ್ರೀ ರಾಧಾಕೃಷ್ಣಚಂದ್ರ ಸ್ವಾಮಿ ಅವರಿಗೆ ಅಭಿಷೇಕ. ಪಂಚಗವ್ಯ, ಪಂಚಾಮೃತ, ಔಷಧೋಪಚಾರ, ಫಲರಸ, ಗಂಧೋದಕಾದಿ ಅಭಿಷೇಕಗಳು. ದೀಪೋತ್ಸವ, ಪುಷ್ಪವೃಷ್ಟಿ, ಚಾಮರ ಸೇವೆ ಹಾಗೂ ಉಯ್ಯಾಲೆ ಸೇವೆಯ ನೇರ ಪ್ರಸಾರ.
3. ಅನೂಪ್ ಜೋಲಾಟ ಅವರಿಂದ ಸಂಗೀತ ಕಛೇರಿ – ಭಾರತೀಯ ಹಾಡುಗಾರರು, ಸಂಗಿತಗಾರರು, ನಟ, ಕಲಾವಿದರು, ಹಿಂದು ಭಕ್ತಿಗೀತೆಗಳ ಗಾಯಕ, ಭಜನಕಾರ, ಉರ್ದು ಕವಿ, ಘಜಲ್ ಹಾಡುಗಾರ ಹಾಗೂ ಭಜನ ಸಾಮ್ರಾಟ ಎಂದೂ ಪ್ರಖ್ಯಾತರು.
4. ಅನುರಾಧಾ ಪೌಡ್ವಾಲ್ ಅವರಿಂದ ಸಂಗೀತ ಕಾರ್ಯಕ್ರಮ – ಬಾಲಿವುಡ್ ಹಾಗೂ ಮರಾಠಿ ಹಿನ್ನೆಲೆ ಗಾಯಕರು. ಭಾರತ ಸರ್ಕಾರದಿಂದ ಕೊಡಮಾಡುವ ಅತ್ಯನ್ನತ ನಾಗರಿಕ ಸನ್ಮಾನವಾದ ಪದ್ಮಶ್ರೀಗೆ 2017 ರಲ್ಲಿ ಭಾಜರಾಗಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ. ನಾಲ್ಕು ಬಾರಿ ಫಿಲ್ಮ್ ಫೇರ್ ಅವರ್ಡ್ ಸಹ ಪಡೆದಿದ್ದಾರೆ.
5. ಎಂ.ಎಸ್. ಸುಬ್ಬುಲಕ್ಷ್ಮೀ ಅವರ ಮೊಮ್ಮಕ್ಕಳಿಂದ ಸಂಗೀತ ಕಛೇರಿ – ಸಂಗೀತ ಕ್ಷೇತ್ರದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿ, ಮೊದಲ ಭಾರತರತ್ನ ಪಡೆದ ಹಾಡುಹಕ್ಕಿ ಸುಬ್ಬುಲಕ್ಷ್ಮೀ (1916-2004) ಅವರ ಪರಂಪರೆಯನ್ನು ಮೊಮ್ಮಕ್ಕಳಾದ ಎಸ್.ಐಶ್ವರ್ಯ ಮತ್ತು ಎಸ್.ಸೌಂದರ್ಯ ಮುಂದುವರಿಸಿಕೊಂಡು ಬಂದಿದ್ದಾರೆ. 2017 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸದಲ್ಲಿಯೂ ಈ ಯುವಸಹೋದರಿಯರು ತಮ್ಮ ಗಾಯನವನ್ನು ಪ್ರಸ್ತುತಪಡಿಸಿದ್ದಾರೆ.
6. ಅಗಂ ತಂಡದಿಂದ ಸಂಗೀತ ಕಾರ್ಯಕ್ರಮ – ಕೃಷ್ಣನ ಕುರಿತ ಹಾಡುಗಳ ಮೇಲೆ ಸಮಕಾಲೀನ ಕರ್ನಾಟಕ ಸಂಗೀತ ಹಾಗೂ ರಾಕ್ ಬ್ಯಾಂಡ್ ನ ಸಮ್ಮಿಳಿತ ಸಂಗೀತ ಕಾರ್ಯಕ್ರಮ.
7. ಇಸ್ಕಾನ್- ಬೆಂಗಳೂರಿನ ಸ್ಫೂರ್ತಿದಾಯಕ ಪಯಣ ಮತ್ತು ಸಂದೇಶಗಳ ಬಗ್ಗೆ ಸಂವಾದ – ಇಸ್ಕಾನ್ – ಬೆಂಗಳೂರು ಮತ್ತು ಅಕ್ಷಯ ಪಾತ್ರೆ ಪ್ರತಿಷ್ಠಾನದ ಅಧ್ಯಕ್ಷರು ಮಧುಪಂಡಿತ ದಾಸ, ವಿಜ್ಞಾನಗಳಾದ ಡಾ.ಕಸ್ತೂರಿ ರಂಗನ್, ಚಿಂತಕರಾದ ಶ್ರೀ ಅನುಪಮ್ ಖೇರ್, ವಿಧಾನಸಭಾ ಸದಸ್ಯರು ಹಾಗೂ ನಟಿಯಾದ ಶ್ರೀಮತಿ ಹೇಮಾ ಮಾಲಿನಿ ಅವರೊಂದಿಗೆ ಸಂವಾದ.
8. ಬಾಲ ಕೃಷ್ಣನ ಚಮತ್ಕಾರಗಳು : ಸಂವಾದ – ಆನಿಮೇಟೆಡ್ ಸರಣಿ ಚಿತ್ರಗಳ ಹಿಂದಿನ ಕಥೆಗಳನ್ನು ಬಿಚ್ಚಿಡಲಿದ್ದಾರೆ ಚಿತ್ರ ತಯಾರಕರು.
9. ಇಸ್ಕಾನ್ ಅಡುಗೆಮನೆಯ ರಹಸ್ಯ : ಸಂವಾದ – ಇಸ್ಕಾನ್ ನ ರುಚಿಕಟ್ಟಾದ ಆಹಾರದ ಬಗ್ಗೆ ದೇಶದ ಆಹಾರ ತಯಾರಕರಾದ ಬಿಶೋ ಪರಜುಲಿ, ಯು.ಎನ್.ಕಂಟ್ರಿ ಹೆಡ್ ಮತ್ತು ಶ್ರೀ ಆನಂದ್ ನರಸಿಂಹನ್ ಮಾತನಾಡಲಿದ್ದಾರೆ. (ಮಧು ಪಂಡಿತದಾಸ, ಚಂಚಲಪತಿ ದಾಸ).
10. ಯಾರೊಬ್ಬರೂ ಉಪವಾಸ ಹೋಗಬಾರದು : ಸಂವಾದ – ದಾಹ ಮತ್ತು ಹಸಿವು ಹೇಗೆ ಸಹಾನುಭೂತಿಯುತ ನಾಗರಿಕ ಸಮಾಜದಲ್ಲಿ ಸಹಿಸುವಂತಹ ಗುಣಲಕ್ಷಣಗಳಲ್ಲ. ಅಕ್ಷಯಪಾತ್ರ ಕಾರ್ಯಕ್ರಮ ಶುರು ಮಾಡಲು ಪ್ರೇರೇಪಿಸಿದ ಶ್ರೀಲ ಪ್ರಭುಪಾದ (ಇಸ್ಕಾನ್ ನ ಪ್ರತಿಷ್ಠಾಪನಾಚಾರ್ಯ) ರ ದೂರದೃಷ್ಟಿಗಳ ಕುರಿತಂತೆ ಶ್ರೀಮಧುಪಂಡಿತದಾಸ ಹಾಗೂ ದೇಶದ ಇನ್ನಿತರ ನಾಯಕರು ಸಮಾಲೋಚನೆ ನಡೆಸಲಿದ್ದಾರೆ.
11. ಇಸ್ಕಾನ್ – ಬೆಂಗಳೂರಿನ ಮುಖ್ಯಸ್ಥರೊಂದಿಗೆ ಕೃಷ್ಣನ ಮಾತುಕತೆ – ಶ್ರೀಕೃಷ್ಣನ ಜೀವನ ಮತ್ತು ಸಂದೇಶದ ಕುರಿತು ಸಾರ್ವಜನಿಕರು ದೂರವಾಣಿ ಕರೆ ಮೂಲಕ ಸಂವಾದ ನಡೆಸಬಹುದು.
12. ಶಾಸ್ತ್ರೀಯ ನೃತ್ಯ – ಶ್ರೀಕೃಷ್ಣನ ಗುಣ ಮತ್ತು ಅತೀಂದ್ರಿಯ ಶಕ್ತಿಗಳ ಬಗ್ಗೆ ಖ್ಯಾತ ಕಲಾವಿದರು ನೃತ್ಯ ಸಾದರಪಡಿಸಲಿದ್ದಾರೆ.
a. ರಾಧಾ ಕಲ್ಪದ ರುಕ್ಮಿಣಿಯನ್ನು ಭರತನಾಟ್ಯದ ಮೂಲಕ ಚಿತ್ರಿಸುವುದು.
b. ಅನುಪಮಾ ಮತ್ತು ರಾಜೇಂದ್ರ ಅವರಿಂದ ಕಥಕ್ ನೃತ್ಯ ಪ್ರದರ್ಶನ.
13. ಅನಾಥಾಶ್ರಮದಲ್ಲಿ ಜನ್ಮಾಷ್ಟಮಿ ಆಚರಣೆ – ಸಮರ್ಥನಂ ಟ್ರಸ್ಟ್ ನ ಮಕ್ಕಳಿಗೆ ಉಡುಗೊರೆ, ಪ್ರಸಾದ, ಸಂಗೀತ, ಗ್ರೀಟಿಂಗ್ಸ್ ಹಾಗೂ ಹಲವು ಅಚ್ಚರಿ ನೀಡುವ ಮೂಲಕ ಜನ್ಮಾಷ್ಟಮಿ ಆಚರಣೆ. ಅವರ ಖುಷಿಯೊಟ್ಟಿಗೆ ಸೇರಲು ನಮ್ಮೊಂದಿಗೆ ಜೊತೆಯಾಗಿ.
14. ಅಮಿಶ್ ತ್ರಿಪಾಠಿ ಅವರೊಂದಿಗೆ ಮಾತುಕತೆ
15. ಇಸ್ಕಾನ್ – ಬೆಂಗಳೂರಿನ ಮುಖ್ಯಸ್ಥರೊಂದಿಗೆ ಕೃಷ್ಣನ ಮಾತುಕತೆ – ಶ್ರೀಕೃಷ್ಣನ ಜೀವನ ಮತ್ತು ಸಂದೇಶದ ಕುರಿತು ಸಾರ್ವಜನಿಕರು ದೂರವಾಣಿ ಕರೆ ಮೂಲಕ ಸಂವಾದ ನಡೆಸಬಹುದು.
16. ಮಕ್ಕಳಿಗಾಗಿ ಕಾರ್ಯಕ್ರಮಗಳು – ಪಪ್ಪೆಟ್ ಶೋ (ಗೊಂಬೆಯಾಟ ಪ್ರದರ್ಶನ). ಹೆಸರಾಂತ ಮಕ್ಕಳ ಲೇಖಕಿಯಾದ ಶ್ರೀಮತಿ ರೂಪಾ ಪೈ ಅವರಿಂದ ಕೃಷ್ಣನ ಕಥೆಗಳು ಮತ್ತು ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು (ಶ್ಲೋಕ ಪಠಣ, ಕೃಷ್ಣ ವೇಷಭೂಷಣ ಸ್ಪರ್ಧೆ, ಚಿತ್ರ ಸ್ಪರ್ಧೆ)
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ