Latest

ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ; ಸಮಾನತೆ ಪ್ರತಿಮೆ ವಿಶೇಷತೆಯೇನು?

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಶ್ರೀರಾಮಾನುಜಾಚಾರ್ಯರ ಸಹಸ್ರಾಬ್ದಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹೈದರಾಬಾದ್ ಹೊರವಲಯದಲ್ಲಿರುವ ಮುಂಚಿತ್ತಾಲ್ ನಲ್ಲಿ ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಬೃಹತ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.

ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ ಸಂದರ್ಭದಲ್ಲಿ ಸಮಾನತೆಯ ಪ್ರತಿಮೆ ಎಂದೇ ಕರೆಯಲಾಗುತ್ತಿರುವ ಶ್ರೀರಾಮಾನುಜಾಚಾರ್ಯರ ಬೃಹತ್ ಪ್ರತಿಮೆ ಅನಾವರಣ ಮಾಡಬೇಕು ಎಂಬುದು ತ್ರಿದಂಡಿ ಶ್ರೀ ಚಿನ್ನಜಿಯರ್ ಸ್ವಾಮೀಜಿ ಅವರ ಮಹಾಸಂಕಲ್ಪವಾಗಿದೆ. ಈ ಹಿನ್ನೆಲೆಯಲ್ಲಿ ಆಶ್ರಮದ ಸಮೀಪವೇ ಪ್ರತಿಮೆ ಅನಾವರಣ ಮಾಡಲಾಗಿದ್ದು, ಚಿನ್ನಜೀಯರ್ ಅವರ 9 ವರ್ಷಗಳ ಹಿಂದಿನ ಕನಸು ಇದೀಗ ನನಸಾಗಿದೆ.

ಪ್ರತಿಮೆ ವಿಶೇಷತೆ:
ಹೈದಾರಾಬಾದ್ ನ ಮುಂಚಿತ್ತಾಲ್ ನಲ್ಲಿರುವ ಸುಮಾರು 200 ಎಕರೆ ಪ್ರದೇಶದಲ್ಲಿರುವ ದಿವ್ಯ ಸಾಕೇತಂ ಆಶ್ರಮದ ಬಳಿ ಜಗತ್ತಿನಲ್ಲಿಯೇ ಅತಿ ಎತ್ತರದ ಪಂಚಲೋಹದ ಸಮಾನತೆಯ ಪ್ರತಿಮೆ ಶ್ರೀರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಅನಾವರಣಗೊಂಡಿದೆ. ಚಿನ್ನ, ಬೆಳ್ಳಿ, ಕಂಚು, ತಾಮ್ರ ಹಾಗೂ ಜಿಂಕ್ ಗಳಿಂದ ಈ ಪ್ರತಿಮೆ ನಿರ್ಮಿಸಲಾಗಿದೆ.

ಪ್ರತಿಮೆಯ ಒಟ್ಟು ಎತ್ತರ 2016 ಅಡಿ
ರಾಮಾನುಜ ರ ಪ್ರತಿಮೆ 108 ಅಡಿ
ತ್ರಿದಂಡಮ್ 135 ಅಡಿ ಎತ್ತರ
ಪದ್ಮಪೀಠ 27 ಅಡಿ ಎತ್ತರ
ಭದ್ರಾ ವೇದಿಕೆ 54 ಅಡಿ ಎತ್ತರ

ಶಾಲಾ-ಕಾಲೇಜುಗಳಲ್ಲಿ ಏಕರೂಪದ ಸಮವಸ್ತ್ರ ಜಾರಿ – ರಾಜ್ಯ ಸರಕಾರದ ಹೊಸ ಆದೇಶ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button