
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರಕ್ಕಾಗಿ ನಿಧಿ ಸಂಗ್ರಹಣಾ ಅಭಿಯಾನದ ಕಾರ್ಯಾಲಯ ಇಲ್ಲಿಯ ಚನ್ನಮ್ಮ ನಗರದ ಆರ್ಕಿಡ್ಸ್ ಅಪಾರ್ಟ್ ಮೆಂಟ್ ನಲ್ಲಿ ಆರಂಭವಾಯಿತು.
ಆರ್.ಎಸ್.ಎಸ್. ಪ್ರಮುಖ ರಾಘವೇಂದ್ರ ಕಾಗವಾಡ ಅವರು ಕಾರ್ಯಾಲಯ ಉದ್ಘಾಟಿಸಿದರು. ಹಿಂದುಗಳ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿರುವ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ಪ್ರತಿಯೊಬ್ಬರ ಸಮರ್ಪಣೆ ಇರಬೇಕೆನ್ನುವ ಉದ್ದೇಶದಿಂದ ಈ ನಿಧಿ ಸಂಗ್ರಹಣಾ ಅಭಿಯಾನ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ವೆಂಕಟೇಶ ಕುಲಕರ್ಣಿ, ಪ್ರಮೋದ ಹರ್ದಿ, ನವೀನ್ ಭಟ್, ಕೃಷ್ಣ ಪಾಂಡುರಂಗಿ, ಎ.ಆರ್.ಬಾಳೋಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಜ.15ರಿಂದ ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನ -ಕೇಶವ ಹೆಗಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ