Latest

ಕೋಲಾಹಲ ಎಬ್ಬಿಸಿದ ಆಪ್ತನ ಬಂಧನ; ವಿಜಯೇಂದ್ರ ನಡೆಗೆ ಶ್ರೀರಾಮುಲು ಅಸಮಾಧಾನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಮ್ಮ ಆಪ್ತ ಪಿಎ ರಾಜಣ್ಣ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ನಡೆಗೆ ಸಚಿವ ಶ್ರೀರಾಮುಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಲಸದ ಭರವಸೆ, ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಂಚಿಸಿರುವ ಆರೋಪ ಸಚಿವ ಶ್ರೀರಾಮುಲು ಪಿಎ ರಾಜಣ್ಣ ವಿರುದ್ಧ ಕೇಳಿಬಂದಿತ್ತು. ಎರಡು ದಿನಗಳ ಹಿಂದಷ್ಟೇ ರಾಜಣ್ಣ ವಿರುದ್ಧ ಎಫ್ ಐಆರ್ ಕೂಡ ದಾಖಲಾಗಿತ್ತು. ತಡರಾತ್ರಿ ಸಿಸಿಬಿ ಪೊಲೀಸರು ರಾಜಣ್ಣ ಅವರನ್ನು ಬಂಧಿಸಿದ್ದರು. ಸಚಿವರ ಹೆಸರಿನ ಜೊತೆಗೆ ವಿಜಯೇಂದ್ರ ಹೆಸರನ್ನೂ ರಾಜಣ್ಣ ದುರ್ಬಳಕೆ ಮಾಡಿಕೊಂಡಿದ್ದು, ವಿಜಯೇಂದ್ರ ದೂರಿನ ಮೇರೆಗೆ ಪೊಲೀಸರು ರಾಜಣ್ಣ ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ತನಗೆ ಮಾಹಿತಿ ನೀಡಿದ್ದರೆ ನಾನೇ ರಾಜಣ್ಣ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೆ. ಆದರೆ ಏಕಾಏಕಿ ತನ್ನ ಪಿಎ ಬಂಧನಕ್ಕೆ ದೂರು ನೀಡಿರುವ ವಿಜಯಂದ್ರ ನಡೆ ಬೇಸರ ತಂದಿದೆ ಎಂದು ಆಪ್ತರ ಬಳಿ ಸಚಿವರು ಅಸಮಾಧಾನ ತೋಡಿಕೊಂಡಿದ್ದಾರೆ. ನನ್ನ ಆಪ್ತ ವಂಚನೆ ಮಾಡಿದ್ದರೆ ನನ್ನ ಗಮನಕ್ಕೆ ತರಬೇಕಿತ್ತು. ಆದರೆ ಇಂತಹ ಕ್ರಮದಿಂದ ನನ್ನ ಇಮೇಜ್ ಗೆ ಧಕ್ಕೆತರುವ ಕೆಲಸ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button