Latest

ಜಂಬೂಸವಾರಿ ವೇಳೆ ಸ್ವಲ್ಪದರಲ್ಲಿ ತಪ್ಪಿದ ಅನಾಹುತ; ಜಂಬೂ ಸವಾರಿ ರದ್ದು

ಪ್ರಗತಿವಾಹಿನಿ ಸುದ್ದಿ; ಮಂಡ್ಯ: ಶ್ರೀರಂಗ ಪಟ್ಟಣದ ದಸರಾಗೆ ಚಾಲನೆ ದೊರೆತಿದೆ. ಆದರೆ ಜಂಬೂಸವಾರಿ ಮೆರವಣಿಗೆ ವೇಳೆ ಆನೆ ಬೆದರಿದ ಪರಿಣಾಮ ಜಂಬೂ ಸವಾರಿಯನ್ನೇ ರದ್ದು ಮಾಡಲಾಗಿದೆ.

ಶ್ರೀರಂಗಪಟ್ಟಣದ ದಸರಾದ ಜಂಬೂ ಸವಾರಿ ವೇಳೆ ಅವಘಡ ಸಂಭವಿಸಿದ್ದು, ತಾಯಿ ಚಾಮುಂಡೇಶ್ವರಿ ದೇವಿ ವಿಗ್ರಹ ಹೊತ್ತ ಆನೆ ಗೋಪಾಲಸ್ವಾಮಿ, ಮೆರವಣಿಗೆ ವೇಳೆ ಬೆದರಿದೆ. ಪಟಾಕಿ, ವಾದ್ಯ ಗೋಷ್ಠಿ, ಜನರ ಹರ್ಷೋದ್ಘಾರ ಕೇಳುತ್ತಿದ್ದಂತೆ ಅಂಬಾರಿ ಹೊತ್ತ ಆನೆ ಬೆದರಿ ಹಿಂತಿರುಗಿ ಒಂದು ಸುತ್ತು ಸುತ್ತಿದೆ. ಭಯಭೀತರಾದ ಜನರು ಪ್ರಾಣ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.

ಮಾವುತನ ಸಮಯ ಪ್ರಜ್ಞೆಯಿಂದ ಅನಾಹುತವೊಂದು ತಪ್ಪಿದಂತಾಗಿದೆ. ಆನೆ ಬೆದರಿದ ಹಿನ್ನೆಲೆಯಲ್ಲಿ ಜಂಬೂಸವಾರಿ ಬದಲಿಗೆ ಬೆಳ್ಳಿ ರಥದಲ್ಲಿ ದಸರಾ ಮೆರವಣಿಗೆ ಮಾಡಲಾಗಿದೆ.
ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ

Home add -Advt

Related Articles

Back to top button