
ಪ್ರಗತಿವಾಹಿನಿ ಸುದ್ದಿ, ಸವದತ್ತಿ:
ಮಾಜಿ ಸಚಿವ ಮುರುಗೇಶ ನಿರಾಣಿ ಅವರಿಗೆ ಸೇರಿದ ಇನೋವಾ ಕಾರು ಮಾರುತಿ ಕಾರಿಗೆ ಡಿಕ್ಕಿ ಹೊಡೆದಿದೆ.
ಸವದತ್ತಿ ಬೈಪಾಸ್ ನಲ್ಲಿ ಅಪಘಾತವಾಗಿದ್ದು, ಮಾರುತಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕ ಗಾಯಗೊಂಡಿದ್ದಾನೆ.
ಇನೋವಾ ಕಾರಿನ ಏರ್ ಬ್ಯಾಗ್ ತೆರೆದುಕೊಂಡಿದ್ದರಿಂದ ಅದರಲ್ಲಿದ್ದವರಿಗೆ ಏನೂ ಆಗಲಿಲ್ಲ.
ನಿರಾಣಿ ಕಾರಲ್ಲಿರಲಿಲ್ಲ. ರಸ್ತೆಗೆ ಬಂದ ದನಗಳನ್ನು ತಪ್ಪಿಸಲು ಹೋಗಿ ಮಾರುತಿ ಕಾರಿಗೆ ಡಿಕ್ಕಿ ಹೊಡೆದಿದೆ.