EducationKarnataka News

*SSLC ಪರೀಕ್ಷೆ: ಕಡಿಮೆ ಹಾಜರಾತಿ ಇರುವ ಮಕ್ಕಳಿಗೆ ಇಲ್ಲ ಅವಕಾಶ*

ಪ್ರಗತಿವಾಹಿನಿ ಸುದ್ದಿ: ಮಾರ್ಚ್ 21ರಿಂದ ಏ.4ರವರೆಗೆ 2025ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು ಈ ಬಾರಿ 75% ರಷ್ಟು ಹಾಜರಾತಿ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತಿಲ್ಲ.

2024ನೇ ಸಾಲಿನಿಂದ ಎಸ್‌ಎಸ್‌ಎಲ್‌ಸಿಗೆ ಮೂರು ಪರೀಕ್ಷೆಗಳನ್ನು ಪರಿಚಯಿಸಲಾಗಿದೆ. ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದವರು, ಇನ್ನಷ್ಟು ಅಂಕಗಳನ್ನು ಪಡೆಯಲು ಬಯಸುವವರು ಹಾಗೂ ಅನುತ್ತೀರ್ಣರಾದವರು ಉಳಿದ ಎರಡು ಪರೀಕ್ಷೆಗಳನ್ನು ಬರೆಯಬಹುದು. ಹಾಗೆಯೇ ಹಾಜರಾತಿ ಕೊರತೆ ಕಾರಣಕ್ಕೆ ಮೊದಲ ಪರೀಕ್ಷೆಯಿಂದ ವಂಚಿತರಾದವರಿಗೆ ಉಳಿದ ಎರಡು ಪರೀಕ್ಷೆ ತೆಗೆದುಕೊಳ್ಳಲು ಕಳೆದ ವರ್ಷ ಅವಕಾಶ ನೀಡಲಾಗಿತ್ತು.

ಆದರೆ ಈ ಬಾರಿ 75 % ರಷ್ಟು ಹಾಜರಾತಿ ಕೊರತೆ ಇರುವ ವಿದ್ಯಾರ್ಥಿಗಳಿಗೆ ಮೂರೂ ಪರೀಕ್ಷೆಯನ್ನು ಬರೆಯಲು ಅವಕಾಶವಿಲ್ಲ. 10ನೇ ತರಗತಿಯಲ್ಲಿ ಕಡಿಮೆ ಹಾಜರಾತಿ ಇರುವ ಮಕ್ಕಳ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಎಸ್‌ಎಟಿಎಸ್‌ ತಂತ್ರಾಂಶದಲ್ಲಿ ದಾಖಲಿಸದಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸುತ್ತೋಲೆ ಹೊರಡಿಸಿದೆ. ಇನ್ನು ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗದ ವಿದ್ಯಾರ್ಥಿಗಳು ಹಾಗೂ ಅನುತ್ತೀರ್ಣರಾದವರನ್ನು 2025-26ನೇ ಸಾಲಿನಲ್ಲಿ 10ನೇ ತರಗತಿಗೆ ಮರುದಾಖಲು ಮಾಡುವಂತೆ ಮಂಡಳಿ ಸೂಚಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button