
ಪ್ರಗತಿವಾಹಿನಿ ಸುದ್ದಿ; ಸಕಲೇಶಪುರ: ಎಸ್.ಎಸ್.ಎಲ್.ಸಿ.ಪರೀಕ್ಷೆ ಒಟ್ಟಿಗೆ ಬರೆದಿದ್ದ ಹಾಸನ ಜಿಲ್ಲೆಯ ಸಕಲೇಶಪುರದ ತಾಯಿ ಹಾಗೂ ಮಗ ಇಬ್ಬರೂ ಉತ್ತೀರ್ಣರಾಗಿದ್ದಾರೆ.
ಸಕಲೇಶಪುರದ ಲಕ್ಷ್ಮೀಪುರ ಗ್ರಾಮದ ಸಿ.ಎನ್.ತೀರ್ಥ ಹಾಗೂ ಅವರ ಮಗ ಬಿ.ಆರ್.ಹೇಮಂತ್ ಒಟ್ಟಿಗೆ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದರು. ಇದೀಗ ಫಲಿತಾಂಶ ಪ್ರಕಟವಾಗಿದ್ದು, ಇಬ್ಬರೂ ಪಾಸ್ ಆಗಿದ್ದಾರೆ.
8ನೇ ತರಗತಿ ಅರ್ಧಕ್ಕೆ ನಿಲ್ಲಿಸಿದ್ದ ತೀರ್ಥ ಬಾಳ್ಳುಪೇಟೆ ರಂಗನಾಥ ಪ್ರೌಢಶಾಲೆಯಲ್ಲಿ ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದರು. ತೀರ್ಥ ಅವರು 235 ಅಂಕ ಪಡೆದರೆ ಅವರ ಪುತ್ರ ಹೇಮಂತ್ 562 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ತಾಯಿಯ ಕಲಿಕೆಗೆ ಸ್ವತ: ಮಗನೇ ನೆರವಾಗಿದ್ದ, ಮಗನೊಂದಿಗೆ ಪಠ್ಯ ಪುಸ್ತಕಗಳನ್ನು ಓದಿ ತೀರ್ಥ ಪರೀಕ್ಷೆ ಬರೆದಿದ್ದರು.
ರಾಜಕೀಯ ಪಕ್ಷಗಳಿಗೆ ಸುಪ್ರೀಂ ಮಹತ್ವದ ಆದೇಶ




