ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಎಸ್.ಎಸ್.ಎಲ್.ಸಿ.ಪರೀಕ್ಷೆಗೆ ಸಿದ್ಧತೆ ನಡೆಸಿರುವ ಶಿಕ್ಷಣ ಇಲಾಖೆ ಇದೀಗ ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆ ಮಾಡಿದೆ.
ಬಹು ಆಯ್ಕೆಯ ಮೊದಲ ಪ್ರಶ್ನೆ ಪತ್ರಿಕೆಯನ್ನು ಎಸ್.ಎಸ್.ಎಲ್.ಸಿ ಬೋರ್ಡ್ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಗಣಿತ, ವಿಜ್ಞಾನ, ಸಾಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ಲಭ್ಯವಿದೆ.
ವಿದ್ಯಾರ್ಥಿಗಳು ಉತ್ತರವನ್ನು ಒಎಂಆರ್ ಶೀಟ್ ನಲ್ಲಿಯೂ ನಮೂದಿಸಬಹುದು. ಪ್ರತಿ ವಿಷಯಕ್ಕೆ ತಲಾ 40 ಅಂಕಗಳ ಒಟ್ಟು 120 ಅಂಕದ ಪ್ರಶ್ನೆ ಪತ್ರಿಕೆ ಇದಾಗಿದ್ದು, 3 ಗಂಟೆಗಳ ಪರೀಕ್ಷೆ ಕಾಲ ನಡೆಯಲಿದೆ. ಎರಡನೇ ಪ್ರಶ್ನೆ ಪತ್ರಿಕೆ ಇನ್ನೆರಡು ದಿನಗಳಲ್ಲಿ ಪ್ರಕಟಗೊಳ್ಳಲಿದೆ.
ಎಸ್.ಎಸ್.ಎಲ್ ಸಿ ಪ್ರಶ್ನೆ ಪತ್ರಿಕೆಗಾಗಿ ವಿದ್ಯಾರ್ಥಿಗಳು http://www.sslc.karnataka.gov.in ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿ.
ದೇಶದಲ್ಲಿ ಮೊದಲ ಗ್ರೀನ್ ಫಂಗಸ್ ಪ್ರಕರಣ ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ