Kannada NewsKarnataka NewsLatest

*SSLC ವಿದ್ಯಾರ್ಥಿನಿ ರುಂಡ ಕಡಿದು ಹತ್ಯೆ ಪ್ರಕರಣ; ಆರೋಪಿ ಅರೆಸ್ಟ್* ; *ಆತ್ಮಹತ್ಯೆ ಸುದ್ದಿ ಸುಳ್ಳು*

ಪ್ರಗತಿವಾಹಿನಿ ಸುದ್ದಿ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಬರ್ಬರ ಹತ್ಯೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಬಂಧಿತ ಆರೋಪಿ. ವಿದ್ಯಾರ್ಥಿನಿ ಮೀನಾಳನ್ನು ಕೊಂದ ಆರೋಪಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿತ್ತು.

Home add -Advt

ಆದರೆ ಮೀನಾಳ ರುಂಡವನ್ನು ಕತ್ತರಿಸಿದ್ದ ಆರೋಪಿ ರುಂಡದೊಂದಿಗೆ ಪರಾರಿಯಾಗಿದ್ದ. ಅಲ್ಲದೇ ಹಮ್ಮಿಯಾಲ ಗ್ರಾಮದ ಗುಡ್ಡದಲ್ಲಿ ಅವಿತು ಕುಳಿತಿದ್ದ.

ಇದೀಗ ಆರೋಪಿ ಪ್ರಕಾಶ್ ಅಲಿಯಾಸ್ ಓಂಕಾರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ರುಂಡವನ್ನು ಬೆಟ್ಟದಲ್ಲಿ ಬಿಸಾಕಿದ್ದಾಗಿ ಹೇಳುತ್ತಿದ್ದು, ವಿದ್ಯಾರ್ಥಿನಿ ರುಂಡಕ್ಕಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿ ಅತ್ಯುತ್ತಮ ಅಂಕ ಪಡೆದಿದ್ದ ಮೀನಾಗೆ ರಿಸಲ್ಟ್ ದಿನವೇ ಪ್ರಕಾಶ್ ಅಲಿಯಾಸ್ ಓಂಕಾರಪ್ಪನ ಜೊತೆ ನಿಶ್ಚಿತಾರ್ಥವಾಗಿತ್ತು. ಆದರೆ ಅಪ್ರಾಪ್ತ ಬಾಲಕಿಗೆ ನಿಶ್ಚಿತಾರ್ಥ ವಿಷಯ ತಿಳಿದ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ನಿಶ್ಚಿತಾರ್ಥ ನಿಲ್ಲಿಸಿದ್ದರು. ಬಾಲಕಿಗೆ 18 ವರ್ಷ ಆಗುವವರೆಗೆ ಮದುವೆ ಮಾಡುವಂತಿಲ್ಲ ಎಂದು ಎಚ್ಚರಿಸಿದ್ದರು.

ಓದಿನಲ್ಲಿ ಜಾಣೆಯಾಗಿದ್ದ ಮೀನಾ, ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿದ್ದಳು. ಮನೆಯಿಂದ ಶಾಲೆಗೆ ಗುಡ್ಡಗಾಡು ಪ್ರದೇಶದಲ್ಲಿ ಪ್ರತಿದಿನ 4 ಕಿ.ಮೀ ದೂರ ನಡೆದೇ ಸಾಗಿ ಶಾಲೆಗೆ ಹೋಗುತ್ತಿದ್ದಳು. ಊರಿನ ಜನರಿಗೆ ಮೀನಾಳ ಬಗ್ಗೆ ಬಹಳ ಹೆಮ್ಮೆ ಇತ್ತು. ಆದರೆ ಎಸ್.ಎಸ್.ಎಲ್.ಸಿ ಓದುವ ವೇಳೆ 35 ವರ್ಷದ ಪ್ರಕಾಶ್ ಅಲಿಯಾಸ್ ಓಂಕಾರಪ್ಪ ಜೊತೆ ಮೀನಾಳಿಗೆ ಪ್ರೀತಿಯಾಗಿತ್ತು. ಹಮ್ಮಿಯಾಲ ಗ್ರಾಮದ ಓಂಕಾರಪ್ಪ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ವರ್ಷದಿಂದ ಮೀನಾಳ ಹಿಂದೆ ಬಿದ್ದಿದ್ದ. ಹೀಗಾಗಿ ಎಸ್.ಎಸ್.ಎಲ್.ಸಿ ಮುಗಿಯುತ್ತಿದ್ದಂತೆ ಮೀನಾಳಿಗೆ ಓಂಕಾರಪ್ಪ ಜೊತೆ ಕುಟುಂಬದವರು ನಿಶ್ಚಿತಾರ್ಥ ನೆರವೇರಿಸಿದ್ದರು. ಬಾಲಕಿಗೆ ಎಂಗೇಜ್ಮೆಂಟ್ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ನಿಲ್ಲಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button