ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ; ಸತೀಶ್ ಜಾರಕಿಹೊಳಿ ಸಿಂಪಲ್ ಲೀವಿಂಗ್, ಹೈ ಥಿಂಕಿಂಗ್ ವ್ಯಕ್ತಿ – ಲಕ್ಷ್ಮಿ ಹೆ್ಬ್ಬಾಳಕರ್
ಸತೀಶ್ ಜಾರಕಿಹೊಳಿ ಸಿಂಪಲ್ ಲೀವಿಂಗ್, ಹೈ ಥಿಂಕಿಂಗ್ ವ್ಯಕ್ತಿ – ಲಕ್ಷ್ಮಿ ಹೆ್ಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲೆಯ 915 ಪ್ರೌಢ ಶಾಲೆಗಳ 56,856 ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅನುಕೂಲವಾಗುವ ದೃಷ್ಟಿಯಿಂದ 13 ಲಕ್ಷ ರೂ. ಮೊತ್ತದಲ್ಲಿ 15,000 ಪ್ರತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಸಂಕಮ್ ಹೊಟೇಲ್‌ನಲ್ಲಿ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಸ್ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷಾ ಸಿದ್ದತೆಗಾಗಿ “ಗೆಲುವಿನ ನತ್ತ ನಮ್ಮ ಪಯಣ” ಅಭ್ಯಾಸ ಪುಸ್ತಕ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಎಸ್ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೂಡಲಗಿ 2ನೇ ಮತ್ತು 3ನೇ ಸ್ಥಾನದಲ್ಲಿ ಬರುತ್ತಿದ್ದು, ಇದಕ್ಕೆ ಅಲ್ಲಿಯ ಶಿಕ್ಷಕರು ಪ್ರಯತ್ನ ಕಾರಣ. ಅದೇ ಶಿಕ್ಷಕರಿಂದ ಈ ಪುಸ್ತಕಗಳನ್ನು ತಯಾರಿಸಿದ್ದೇವೆ ಎಂದು ತಿಳಿಸಿದರು.
ಯಮಕನಮರಡಿ ಕ್ಷೇತ್ರದ ಶಾಲೆಗಳಿಗೆ ಶಾಸಕರ ಅನುದಾನದಲ್ಲಿ 4,000 ಡೇಸ್ಕ್‌ಗಳನ್ನು ವಿತರಿಸಿದ್ದು, ಕಂಪ್ಯೂಟರ್‌ಗಳನ್ನು ವಿತರಿಸಲಾಗಿದ್ದು, ಕರೋನಾ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಇತರರಿಗೂ ಎರಡು ವರ್ಷದಲ್ಲಿ 1 ಲಕ್ಷ ಮಾಸ್ಕ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿಯೇ ಬೆಳಗಾವಿ ಜಿಲ್ಲೆ ಶೈಕ್ಷಣಿಕ ಸ್ಥಾನದಲ್ಲಿ ಪ್ರಥಮ ಸ್ಥಾನದಲ್ಲಿ ಇರಬೇಕೆಂದು ನಾವು ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳು ಈ ಪುಸ್ತಕಗಳನ್ನು ಸದ್ಬಳಕೆ ಮಾಡಿಕೊಂಡು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಬೇಕೆಂದರು.
ಕೆಲವು ರಾಜಕಾರಣಿಗಳು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಕಳಿಸುತ್ತಾರೆ. ಆದರೆ ನನ್ನ ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕ ಅವರಿಗೆ ಸ್ಥಳೀಯವಾಗಿ ಶಿಕ್ಷಣ ನೀಡಿ, ಸಾಮಾಜಿಕ ಕೆಲಸದಲ್ಲಿ ತೊಡಗಲು ಸಲಹೆ ನೀಡಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.
ಮಾಜಿ ಸಂಸದ ಡಿ.ಎಂ.ಚಂದ್ರಪ್ಪ ಮಾತನಾಡಿ, 12ನೇ ಶತಮಾನದ ಪರಿಕಲ್ಪನೆ ಇಂದು ಕೆಪಿಸಿಸಿ ಕಾರ್ಯಾಕ್ಷಧ್ಯ ಸತೀಶ್ ಜಾರಕಿಹೊಳಿ ಅವರಲ್ಲಿ ನಾವು ಕಾಣುತ್ತಿದ್ದು, ಅವರ ಬಡವರ, ಹಿಂದುಳಿದವರ ಪರ ಕಾಳಜಿ ನಮಗೂ ಅನುಕರಣೀಯ ಎಂದರು.
ಪ್ರಚಾರಕ್ಕೆ ಅವಕಾಶ ನೀಡದೇ ಸಾಮಾಜಿಕ ಕಾರ್ಯದಲ್ಲಿ ತೊಡಗಿದ ರಾಜ್ಯದಲ್ಲಿ ಏಕೈಕ ವ್ಯಕ್ತಿ ಅಂದರೆ ಅದು ಸತೀಶ್ ಅಣ್ಣಾ ಜಾರಕಿಹೊಳಿ. ರಾಜ್ಯದಲ್ಲಿ ತಮ್ಮದೇ ಅಭಿಮಾನಿ ಬಳಗ ಹೊಂದಿದರೂ ಪ್ರಚಾರ ಪಡೆಯುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಿ ಪ್ರಚಾರಕ್ಕೆ ಆದ್ಯತೆ ನೀಡಲೆಂದು ಮನವಿ ಮಾಡಿದರು.
ಮಾಜಿ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಸತೀಶ್ ಜಾರಕಿಹೊಳಿಯವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುತ್ತಿದ್ದು, ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಈಗಾಗಲೇ ಆರ್ಮಿ, ಪೊಲೀಸ್ ಆಕ್ಷಾಂಕಿಗಳಿಗೆ ತರಬೇತಿ ನೀಡುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಕೆಎಎಸ್, ಯುಪಿಎಸಿ ತರಬೇತಿ ನೀಡಲು ಮುಂದಾಗಲಿ, ಆ ಸಾಮರ್ಥ್ಯ ಅವರಿಗಿದೆ. ಅವರ ಈ ಕಾರ್ಯವನ್ನು ನಾವು ರೂಢಿಸಿಕೊಳ್ಳುತ್ತೇವೆ ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಅನುಕೂಲವಾಗುವ ಪುಸ್ತಕ ವಿತರಣೆ ಕಾರ್ಯವನ್ನು ಸತೀಶ್ ಜಾರಕಿಹೊಳಿಯವರು ಬೆಳಗಾವಿ ಜಿಲ್ಲೆಯಲ್ಲಿ ಮಾಡುತ್ತಿದ್ದಾರೆ. ಆದರೆ ಸರ್ಕಾರ ಈ ಕಾರ್ಯವನ್ನು ರಾಜ್ಯದಲ್ಲಿ ವಿಸ್ತರಿಸಬೇಕೆಂದು ಆಗ್ರಹಿಸಿದರು.
ಬುದ್ಧ, ಬಸವ, ಅಂಬೇಡ್ಕರ್ ದಾರಿಯಲ್ಲಿ ಸಾಗುತ್ತಿದ್ದ ಸತೀಶ್ ಜಾರಕಿಹೊಳಿ ನಡೆಯಲ್ಲಿ ನಾವು ಸಾಗೋಣ. ಬರೀ ರಾಜಕೀಯ ಮಾಡುವುದು ಅಲ್ಲ. ರಾಜಕೀಯದ ಜತೆ ಸಾಮಾಜಿಕ ಕಾರ್ಯದಲ್ಲಿ ತೊಡಗುವುದನ್ನು ನಾವು ಸತೀಶ್ ಅವರನ್ನು ಅನುಸರಿಸೋಣ ಎಂದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ರಾಜ್ಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಏಕೈಕ ರಾಜಕಾರಣಿ ಏಂದರೆ ಅದು ಸತೀಶ್ ಅಣ್ಣಾ ರಾಜಕಿಹೊಳಿ. ಅವರು ಯಾವುದೇ ಕಾರ್ಯಕ್ರಮ ಮಾಡಲಿ, ಅದು ಬಹಳ ಅರ್ಥಪೂರ್ಣವಾಗಿರುತ್ತವೆ. ಅವರ ನಡೆಯಲ್ಲಿ ನಾವು ಸಾಗೋಣ ಎಂದರು.
ಸತೀಶ್ ಅಣ್ಣಾ ಅವರ ಜೀವನ ಸರಳತೆಯಿಂದ ಕೂಡಿದ್ದರೂ ಕೂಡ ವಿಚಾರಗಳು ಮಾತ್ರ ಎತ್ತರದ ಸ್ಥಾನದಲ್ಲಿಇರುತ್ತವೆ. ಸಿಂಪಲ್ ಲೀವಿಂಗ್, ಹೈ ಥಿಂಕಿಂಗ್. ಅವರ ದೂರದೃಷ್ಟಿ, ಮುಂದಾಲೋಚನೆಯಲ್ಲಿ ಸಮಾಜದ ಕಳಕಳಿ ಎತ್ತಿ ತೋರಿಸುತ್ತದೆ ಎಂದು ಗುಣಗಾನ ಮಾಡಿದರು.
ಶೈಕ್ಷಣಿಕ ರಂಗದಲ್ಲಿ ಜಿಲ್ಲೆಗೆ ಸತೀಶ್ ಜಾರಕಿಹೊಳಿ ಅವರ ಕೊಡುಗೆ ಅಪಾರವಾಗಿದ್ದು, ಅವರ ಕಾರ್ಯಗಳಿಗೆ ಮಕ್ಕಳಾದ ರಾಹುಲ್, ಪ್ರಿಯಾಂಕ ಕೂಡ ಸಾಥ್ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್, ಶಾಸಕರಾದ ಪ್ರಸಾದ ಅಬ್ಯಯ್ಯಾ, ಗಣೇಶ ಹುಕ್ಕೇರಿ, , ಟಿ. ರಘುಮೂರ್ತಿ, ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್, ಮಾಜಿ ಸಂಸದ ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಅಶೋಕ ಪಟ್ಟಣ, ಎಸ್.ಬಿ.ಘಾಟಗೆ, ರಮೇಶ ಕುಡಚಿ, ಕಾಕಾಸಾಹೇಬ್ ಪಾಟೀಲ್, ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ವೀರಕುಮಾರ ಪಾಟೀಲ್, ಯುವ ನಾಯಕ ರಾಹುಲ್ ಜಾರಕಿಹೊಳಿ, ಯುವ ನಾಯಕಿ ಪ್ರಿಯಾಂಕ ಜಾರಕಿಹೊಳಿ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಬಿ.ಸೋಮಶೇಖರ್, ಅಶೋಕ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಇಸ್ಮಾಯಿಲ್ ತಮಟಗಾರ್, ಮಹಾವೀರ ಮೋಹಿತೆ, ಬಾಬಾಸಾಹೇಬ್ ಪಾಟೀಲ್, ವಿಶ್ವಾಸ ವ್ಯೆದ್ಯ, ಬಸವರಾಜ ಕೌಜಲಗಿ ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಸವರಾಜ ನಾಲವತವಾಡ, ಚಿಕ್ಕೋಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮೋಹನ ಹಂಚಾಟೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಇದ್ದರು. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಸ್ವಾಗತಿಸಿದರು.
ನಿಗಮ, ಮಂಡಳಿಗಳಿಗೆ ನೇಮಕಾತಿ ; ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ