ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಪಿ ಚೀಟಿ ತಂದಿದ್ದಕ್ಕೆ ಶಿಕ್ಷಕಿ ಬೈದು ನಿಂದಿಸಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಒಎಂಬಿಆರ್ ಲೇಔಟ್ ನಲಿ ನಡೆದಿದೆ.
ಅಮೃತಾ ನೇಣಿಗೆ ಶರಣಾದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿ. ದೊದ್ಡ ಬಾಣಸವಾಡಿಯ ಮರಿಯಂ ನಿಲಯ ಇಂಘ್ಲೀಷ್ ಸ್ಕೂಲ್ ನಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದ ಅಮೃತಾ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ನ.2ರಂದು ಕ್ಲಾಸ್ ಟೆಸ್ಟ್ ವೇಳೆ ಅಮೃತಾ ಕಾಪಿ ಚೀಟಿ ತಂದಿದ್ದಳಂತೆ. ಇದೇ ಕಾರಣಕ್ಕೆ ಶಿಕ್ಷಕಿ ಶಾಲಿನಿ ವಿದ್ಯಾರ್ಥಿಗಳ ಮುಂದೆ ಅಮೃತಾಳನ್ನು ನಿಂದಿಸಿದ್ದರಂತೆ. ವಿದ್ಯಾರ್ಥಿನಿಯರು ಆಕೆಯನ್ನು ಈ ಬಗ್ಗೆ ಪದೇ ಪದೇ ಕೇಳಿದ್ದಾರೆ ಎನ್ನಲಾಗಿದೆ. ಅಮೃತಾ ಶಾಲೆಯಲ್ಲಿ ತನಗಾದ ಅವಮಾನವನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾಳೆ.
ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡು ಪೋಷಕರು ಕಣ್ಣೀರಿಟ್ಟಿದ್ದಾರೆ. ಮಗಳ ಸಾವಿಗೆ ಶಿಕ್ಷಕಿ ಶಾಲಿನಿಯೇ ಕಾರಣ. ಕ್ಲಾಸ್ ಟೀಚರ್ ಬರುವವರೆಗೂ ಶಾಲೆಯಿಂದ ಕದಲುವುದಿಲ್ಲ ಎಂದು ಮಗಳ ಮೃತದೇಹನ್ನು ಶಾಲೆ ಮುದಿಟ್ಟು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿನಿ ಅಮೃತಾ ಕಾಪಿ ಮಾಡಿರುವುದಕ್ಕೆ ನಮ್ಮಲ್ಲಿ ದಾಖಲೆಗಳಿವೆ. ಕ್ಲಾಸ್ ಟೀಚರ್ ಶಾಲಿನಿ ಈ ಬಗ್ಗೆ ವಿದ್ಯಾರ್ಥಿನಿಯೊಂದಿಗೆ ಮಾತನಾಡಿ ಆಕೆಗೆ ಬುದ್ಧಿ ಹೇಳಿದ್ದಾರೆ. ಮುಂದೆ ಈ ರೀತಿ ಮಾಡದಂತೆ ಹೇಳಿದ್ದಾರೆ ಎಂದು ಪ್ರಾಂಶುಪಾಲ ಐರಿನ್ ತಿಳಿಸಿದ್ದಾರೆ. ಶಿಕ್ಷಕಿ ಬೈದರಂದು ವಿದ್ಯಾರ್ಥಿನಿ ತನ್ನ ಜೀವವನ್ನೇ ಕಳೆದುಕೊಂಡಿದ್ದು ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ನಂದಿನಿ ಹಾಲು-ಮೊಸರಿನ ದರದಲ್ಲಿ ಭಾರಿ ಏರಿಕೆ
https://pragati.taskdun.com/latest/milkcurd-pricehikekmfkarnataka/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ