ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸೆಪ್ಟೆಂಬರ್ 21ರಿಂದ 29ರವರೆಗೆ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ. 51.28ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪೂರಕ ಪರೀಕ್ಷೆಗೆ 2,13,955 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ 1,09,719 ಉತ್ತೀರ್ಣರಾಗಿದ್ದಾರೆ. ಇವರಲ್ಲಿ ಶೇ. 48.56 ರಷ್ಟು ಬಾಲಕರು ಹಾಗೂ ಶೇ.55.96 ರಷ್ಟು ಬಾಲಕಿಯರಿದ್ದಾರೆ. ನಗರ ಪ್ರದೇಶ- ಶೇ. 48.25, ಗ್ರಾಮೀಣ ಪ್ರದೇಶ- ಶೇ. 54.21 ರಷ್ಟು ಫಲಿತಾಂಶ ಬಂದಿದೆ.
ಅನುದಾನಿತ ಶಾಲೆಗಳು ಶೇ. 53.13 ವಿದ್ಯಾರ್ಥಿಗಳು ಉತ್ತೀರ್ಣ ರಾಗಿದ್ದಾರೆ. ಅನುದಾನರಹಿತ ಶಾಲೆಗಳು ಶೇ. 50.87 ಮತ್ತು ಸರ್ಕಾರಿ ಶಾಲೆಗಳು ಶೇ. 50.19 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ