ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಹುನಿರೀಕ್ಷಿತ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಓರ್ವ ವಿದ್ಯಾರ್ಥಿನಿಯನ್ನು ಹೊರತುಪಡಿಸಿ, ಎಲ್ಲರೂ ಪಾಸ್ ಆಗಿದ್ದು, ಶೇ.99.9ರಷ್ಟು ಫಲಿತಾಂಶ ಹೊರಬಂದಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ನೂತನ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ನಾಗೇಶ್ ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಿಸಿದ್ದಾರೆ. ಒಬ್ಬಳೇ ಒಬ್ಬ ವಿದ್ಯಾರ್ಥಿನಿ ಬಿಟ್ಟು ಉಳಿದೆಲ್ಲ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಆ ವಿದ್ಯಾರ್ಥಿನಿ ತಾನು ಪರೀಕ್ಷಾ ಕೊಠಡಿಗೆ ಬಾರದೇ ಬೇರೆಯವರನ್ನು ಕಳುಹಿಸಿದ್ದ ಕಾರಣ ಅವಳನ್ನು ಬಿಟ್ಟು ಉಳಿದೆಲ್ಲವರೂ ತೇರ್ಗಡೆಯಾಗಿದ್ದಾರೆ ಎಂದು ತಿಳಿಸಿದರು.
ಅಂದಿನ ಶಿಕ್ಷಣ ಮಂತ್ರಿಗಳಾದ ಸುರೇಶ್ಕುಮಾರ್ ಹಾಗೂ ಅವರಿಗೆ ಪೂರ್ಣ ಬೆಂಬಲಕೊಟ್ಟ ಆಗಿನ ಸಿಎಂ ಯಡಿಯೂರಪ್ಪ ಅವರನ್ನು ನಾನು ಈ ಸಂದರ್ಭ ನೆನಪಿಸಿಕೊಳ್ಳುತ್ತೇನೆ. ಎಲ್ಲ ವಿದ್ಯಾರ್ಥಿಗಳಿಗೆ ಮಾಡೆಲ್ ಪ್ರಶ್ನೆ ಪತ್ರಿಕೆ ಕಳುಹಿಸಿ, ಅಲ್ಲಿನ ಶಿಕ್ಷಕರ ಸಹಾಯದಿಂದ ಅವರನ್ನು ಎಕ್ಸಾಂಗೆ ಸಿದ್ಧಗೊಳಿಸಿ ಪರೀಕ್ಷೆ ಬರೆಸಿದೆವು ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದರು.ಸಾಂಕ್ರಾಮಿಕ ಕೊರೊನಾ ಸೋಂಕು ವ್ಯಾಪಿಸಿದ್ದ ಕಾರಣಕ್ಕೆ 2020-21ರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಡೆಸಬೇಕಾ ಬೇಡವೇ ಎಂಬ ಸಾಕಷ್ಟು ವಾದ – ವಿವಾದಗಳು ನಡೆದಿದ್ದವು. ಇವುಗಳ ಮಧ್ಯೆಯೇ ನಿರಾಳವಾಗಿ ಪರೀಕ್ಷೆಯು ಜುಲೈ 19, 22 ರಂದು ನಡೆಯಿತು.ಎಸ್ಎಸ್ಎಲ್ಸಿ ಪರೀಕ್ಷೆಯನ್ನು ವಿಶೇಷ ರೀತಿಯಲ್ಲಿ ಪ್ರಶ್ನೆ ಪತ್ರಿಕೆ ಮಾದರಿಯನ್ನ ಬದಲಾಯಿಸಿ ಬಹು ಆಯ್ಕೆ ಪ್ರಶ್ನೆಗಳನ್ನು ನೀಡಿ ನಡೆಸಲಾಗಿತ್ತು. ಅದು ಕೂಡ 6 ದಿನಗಳ ಪರೀಕ್ಷೆಗೆ ಕತ್ತರಿ ಹಾಕಿ, ವಿಷಯವಾರು ಮೂಲಕ ಎರಡೇ ದಿನ ಪರೀಕ್ಷೆ ನಡೆಸಲಾಯ್ತು.ಈ ಸಲದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಟ್ಟಾರೆ ಹಾಜರಾತಿ 96.65 ರಷ್ಟು ಇತ್ತು. ಕಳೆದ ವಾರ್ಷಿಕ ಪರೀಕ್ಷೆಗಿಂತ ಹೆಚ್ಚು ಮಕ್ಕಳು ಈ ಸಲ ಹಾಜರಾಗಿದ್ದರು. ಇದೀಗ 8 ಲಕ್ಷಕ್ಕೂ ಅಧಿಕ ಮಕ್ಕಳು ಪರೀಕ್ಷೆ ಬರೆದಿದ್ದರು.
ಶೇ. 99.9 ವಿದ್ಯಾರ್ಥಿಗಳು ಪಾಸ್:ಶೇ.99.9 ವಿದ್ಯಾರ್ಥಿಗಳು ಉರ್ತೀಣರಾಗಿದ್ದು, ಅದರಲ್ಲಿ 4,70,160 ವಿದ್ಯಾರ್ಥಿಗಳು ಹಾಗೂ 4,01281 ವಿದ್ಯಾರ್ಥಿನಿಯರು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಅದರಲ್ಲಿ A+ ಗ್ರೇಡ್- 1,28,931, A ಗ್ರೇಡ್- 2,50,317, B- ಗ್ರೇಡ್- 2,87,684, C- 1,13,610 ಹಾಗೂ ಗ್ರೇಸ್ ಮಾರ್ಕ್ಸ್ ಪಡೆದು 9 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ ಎಂದು ಸಚಿವರು ತಿಳಿಸಿದರು.
ಅಂಕವಾರು ಮಾಹಿತಿ:
625 ಅಂಕಕ್ಕೆ 625- 157 ಮಕ್ಕಳು 623 ಅಂಕ – 289 ಮಕ್ಕಳು622 ಅಂಕ – 2 ಮಕ್ಕಳು 621 ಅಂಕ – 449 ಮಕ್ಕಳು 620 ಅಂಕ – 28 ಮಕ್ಕಳು
ವಿಷಯವಾರು ಔಟ್ ಆಫ್ ಔಟ್ ಅಂಕ ಪಡೆದವರು:
ಪ್ರಥಮ ಭಾಷೆಯಲ್ಲಿ 125ಕ್ಕೆ 125 ಅಂಕ – 25,702 ವಿದ್ಯಾರ್ಥಿಗಳುದ್ವಿತೀಯ ಭಾಷೆಯಲ್ಲಿ100ಕ್ಕೆ 100 ಅಂಕ – 36,628 ವಿದ್ಯಾರ್ಥಿಗಳುತೃತೀಯ ಭಾಷೆಯಲ್ಲಿ 100ಕ್ಕೆ 100 ಅಂಕ – 36,776 ವಿದ್ಯಾರ್ಥಿಗಳುಗಣಿತ ವಿಷಯದಲ್ಲಿ 100ಕ್ಕೆ 100 ಅಂಕ – 6321 ವಿದ್ಯಾರ್ಥಿಗಳುವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ – 3,649 ವಿದ್ಯಾರ್ಥಿಗಳುಸಮಾಜ ವಿಜ್ಞಾನ ವಿಷಯದಲ್ಲಿ 100ಕ್ಕೆ 100 ಅಂಕ – 9,367 ವಿದ್ಯಾರ್ಥಿಗಳು
ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು:
ಈಗ ನೀಡಿರುವ ಎಸ್ಎಸ್ಎಲ್ಸಿ ಫಲಿತಾಂಶದ ಬಗ್ಗೆ ಅಸಮಾಧಾನವಿದ್ದಲ್ಲಿ ವಿದ್ಯಾರ್ಥಿಗಳು ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು. ಒಂದು ವೇಳೆ ಮರುಪರೀಕ್ಷೆ ಬರೆಯಲು ಬಯಸಿದಲ್ಲಿ ಎರಡನೇ ಬಾರಿಗೆ ಅರ್ಜಿ ಸಲ್ಲಿಸಬಹುದು. ಅದಕ್ಕೆ ಶಿಕ್ಷಕರ ಸಹಾಯ ಪಡೆದು ಅಗತ್ಯವಿರುವ ದಾಖಲೆಗಳನ್ನು ಭರ್ತಿ ಮಾಡಿ ಮನವಿ ಸಲ್ಲಿಸಬಹುದು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.
ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ – ಇಲ್ಲಿದೆ ಲಿಂಕ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ