ಸ್ಮಾರ್ಟ್ ಸಿಟಿ ಯೋಜನೆಯಿಂದ ಶುದ್ಧಕುಡಿಯುವ ನೀರಿನ ಘಟಕಗಳು ಪ್ರಾರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ಮಾರ್ಟ್ ಸಿಟಿ ಯೋಜನೆ ಬೆಳಗಾವಿ ನಗರದಲ್ಲಿ ಎರಡನೇ ಹಂತದಲ್ಲಿ ಆಯ್ಕೆಯಾಗಿತ್ತು. ಇದರ ಅಡಿಯಲ್ಲಿ ಬೆಳಗಾವಿ ನಾಗರಿಕರಿಗೆ ಕೈಗೆಟುಕಿದ ಪ್ರಪ್ರಥಮ ಸೌಲಭ್ಯ ಶುದ್ಧಕುಡಿಯುವ ನೀರಿನ ಘಟಕಗಳು.
ನೀರು ಅಮೃತವಿದ್ದ ಹಾಗೆ, ನೀರಿದ್ದರೆ ಮಾತ್ರ ಜೀವ ಸಂಕುಲತೆಗಳಿಗೆ ಜೀವ. ಶುದ್ಧವಾದಕುಡಿಯುವ ನೀರಿನಿಂದ ಮನುಜನ ದುಡಿಮೆಯ ಶಕ್ತಿ ವೃದ್ಧಿಸುತ್ತದೆ. ನೀರಿನಿಂದಲೇಎಲ್ಲಾ ಆಗುಹೋಗುಗಳು ನಿಂತಿವೆ. ಆದ್ದರಿಂದ ಶುದ್ದವಾದ ಕುಡಿಯುವ ನೀರನ್ನು ಮಹಾನಗರದ ಜನತೆಗೆ ಒದಗಿಸುವ ಉದ್ದೇಶದಿಂದ ಸ್ಮಾರ್ಟಸಿಟಿ ಯೋಜನೆಯಿಂದ ಕೈಗೆತ್ತಿಕೊಂಡಿರುವ ಪ್ರಪ್ರಥಮ ಯೋಜನೆಯೇ ಶುದ್ಧಕುಡಿಯುವ ನೀರಿನ ಘಟಕಗಳು.
ಶುದ್ಧಕುಡಿಯುವ ನೀರಿನ ಘಟಕಗಳನ್ನು ಬೆಳಗಾವಿ ನಗರದಲ್ಲಿ ಒಟ್ಟು ೫ ಕಡೆ ಅನುಷ್ಠಾನಗೊಳಿಸಲಾಗಿದೆ. ಅವುಗಳೆಂದರೆ, ಶ್ರೀನಗರ, ಜಿಲ್ಲಾಡಳಿತ ಆವರಣ, ಬೋಗಾರವೇಸ್, ಗೋವಾವೇಸ್, ನರಗುಂದಕರ ಭಾವೆ ಚೌಕ.
ಈ ಶುದ್ಧಕುಡಿಯುವ ನೀರಿನ ಘಟಕಗಳ ಅನುಷ್ಠಾನದ ಮುಖ್ಯ ಉದ್ದೇಶವೇನೆಂದರೆ ದಾರಿಹೋಕರರಿಗೆ ಮತ್ತು ಆ ಒಂದು ಪ್ರದೇಶದ ಸುತ್ತಮುತ್ತಲಿನವರಿಗೆ ಶುದ್ದವಾದ ಕುಡಿಯುವ ನೀರನ್ನುಒದಗಿಸುವುದಾಗಿದೆ.
ಈ ಶುದ್ಧಕುಡಿಯುವ ನೀರಿನ ಘಟಕಗಳ ಅನುಷ್ಠಾನದಿಂದ ಕಚ್ಚಾ ನೀರಿನಲ್ಲಿರುವ ಕಲ್ಮಶಗಳನ್ನು ಸೋಸುವುದಾಗಿದೆ. ಕೆಲವರು ಮನೆಗಳಲ್ಲಿ ವಾಟರ್ ಫ್ಯೂರಿಪಾಯರ್‌ಗಳನ್ನು ಅಳವಡಿಸಿರುತ್ತಾರೆ. ಶುದ್ದ ನೀರನ್ನು ಪಡೆಯುತ್ತಲಿದ್ದಾರೆ.
ಆದರೆ ಸಾಮಾನ್ಯ ಜನರಿಗೂ ಶುದ್ದ ನೀರು ಪೂರೈಸುವುದು ಸ್ಮಾರ್ಟ ಸಿಟಿ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಒಂದು ಘಟಕವನ್ನು ಅಳವಡಿಸಲು ೭ ಲಕ್ಷ ೨೮ ಸಾವಿರ ರೂಗಳ ವೆಚ್ಚವಾಗಿದೆ. ಇದನ್ನು ಬಿಜಾಪುರದ ರಾಥೋಡರವರಿಗೆ ಗುತ್ತಿಗೆ ನೀಡಲಾಗಿದೆ. ಮತ್ತು ಒಂದು ವರ್ಷದ ಕಾಲ ಸೆಪ್ಟೆಂಬರ್ ೨೦೨೦ ರವರೆಗೆ ಅದರ ಕಾರ್ಯಾಚರಣೆ ಮತ್ತು ನಿರ್ವಹಣೆ ಅವರದ್ದೇ ಆಗಿರುತ್ತದೆ.
ಶುದ್ದಕುಡಿಯುವ ನೀರಿನ ಘಟಕದ ಕಾರ್ಯ:
ಪ್ರತಿಯೊಂದು ಘಟಕದಲ್ಲಿ ೧೫೦ ಲೀಟರ್ ಸಾಮರ್ಥ್ಯವುಳ್ಳ ಟ್ಯಾಂಕನ್ನು ಅಳವಡಿಸಲಾಗಿದೆ, ಇದಕ್ಕೆ ಕಾರ್ಪೋರೇಶನ್ ನಲ್ಲಿ ಸಂಪರ್ಕ ಪಡೆದಿದ್ದು, ನೀರಿನ ಟ್ಯಾಂಕ್ ತುಂಬಿದ ತಕ್ಷಣ ಸ್ವಯಂ ಚಾಲಿತವಾಗಿ ನಲ್ಲಿ ಬಂದ್ ಆಗುತ್ತದೆ.
ಆ ನೀರು ವಿವಿಧ ಹಂತಗಳಲ್ಲಿ ಸಂಸ್ಕರಣೆಗೊಂಡು ಮೇನ್‌ಟ್ಯಾಂಕ್‌ಗೆ ಬಂದು ಉಪಯೋಗಕ್ಕೆ ಸಿದ್ದವಾಗುತ್ತದೆ, ಈ ನೀರನ್ನು ೧ ರೂ. ನಾಣ್ಯವನ್ನು ಹಾಕಿದರೆ ೧ ಲೀಟರ್, ೨ ರೂ. ಹಾಕಿದರೆ ೨ ಲೀಟರ್, ಮತ್ತು ೫ ರೂ ನಾಣ್ಯವನ್ನು ಹಾಕಿದರೆ ೧೦ ಲೀಟರ್ ಶುದ್ದ ನೀರನ್ನು ಪಡೆಯಬಹುದಾಗಿದೆ, ಸಾರ್ವಜನಿಕರು ೫ ರೀತಿಯ ನಾಣ್ಯಗಳನ್ನು ಬಳಸಬಹುದಾಗಿದೆ.
ಅಂದರೆ ೫ ರೂ.ದ ಸ್ಟೀಲ್, ಮತ್ತು ದಪ್ಪದಾದ ತಾಮ್ರದ ನಾಣ್ಯ, ೨ ರೂ.ನ ದೊಡ್ಡ ನಾಣ್ಯ, ೧ ರೂನ ಸಣ್ಣ ಮತ್ತು ದೊಡ್ಢ ನಾಣ್ಯಗಳನ್ನು ಬಳಸಿ ನೀರನ್ನು ಪಡೆಯಬಹುದಾಗಿದೆ.
ಎರಡನೇ ಹಂತದಲ್ಲಿ ಇನ್ನೂ ಏಳು ಸ್ಥಳಗಳಲ್ಲಿ ಶುದ್ಧಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದೆಂದು ವ್ಯವಸ್ಥಾಪಕ ನಿರ್ದೇಶಕರಾದ ಶಿರೀನ್ ನದಾಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಬಂಧಿಸಿದ ಸುದ್ದಿಗಳು –
ಶಿರೀನ್ ನದಾಫ್ ಸ್ಮಾರ್ಟ್ ಸಿಟಿ ಎಂಡಿ
ಸ್ಮಾರ್ಟ್ ಸಿಟಿ ರಸ್ತೆಯಲ್ಲಿ 7 ಕಡೆ ಬಿರುಕು: ಡಾಂಬರ್ ಹೊಯ್ದು ಮುಚ್ಚಲು ಯತ್ನ
ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು?
ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಸಮಗ್ರ ಚಿತ್ರಗಳು ಇಲ್ಲಿದೆ….
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ