ಪ್ರಗತಿವಾಹಿನಿ ಸುದ್ದಿ : ಗಣೇಶ ವಿಸರ್ಜನೆ ವೇಳೆ ಮಂಡ್ಯದ ನಾಗಮಂಗಲ ಪಟ್ಟಣದಲ್ಲಿ ನಡೆದ ಕೋಮುಗಲಭೆ, ಹಿಂಸಾಚಾರದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಎಲ್ಲಿಯೂ ಹೊತ್ತಿ ಉರಿಯುತ್ತಿಲ್ಲ, ಶಾಂತವಾಗಿದೆ ಎಂದರು.
ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾಗಮಂಗಲ ಶಾಂತವಾಗಿದ್ದು, ಉಹಾಪೋಹಗಳನ್ನು ಹಬ್ಬಿಸುವುದು ಸರಿಯಲ್ಲ ಎಂದು ವಿಪಕ್ಷ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು. ಕರ್ತವ್ಯಲೋಪದಿಂದಾಗಿ ಈಗಾಗಲೇ ಓರ್ವ ಇನ್ಸ್‌ಪೆಕ್ಟರ್ ಅನ್ನು ಸಸ್ಪೆಂಡ್ ಮಾಡಿದ್ದೇವೆ. ಅಲ್ಲದೇ ಅಲ್ಲಿದ್ದ ಡಿವೈಎಸ್‌ಪಿಯನ್ನು ವರ್ಗಾವಣೆ ಮಾಡಿದ್ದೇವೆ ಎಂದರು.
ಸದ್ಯ ಪ್ರಕರಣ ಸಂಬಂಧ 88 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನಿಷೇಧಿತ ಪಿಎಫ್‌ಐ ಸಂಘಟನೆಯ ಕೆಲ ಕೇರಳದ ಮುಸ್ಲಿಮರು ಈ ಗಲಭೆಗೆ ಕಾರಣ ಎಂದು ವಿರೋಧ ಪಕ್ಷದ ನಾಯಕರು ಆರೋಪಿಸಿದ್ದು, ಎನ್ ಐಎ ತನಿಖೆಗೆ ಒತ್ತಾಯಿಸಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ