*ರಾಜ್ಯ ಮಟ್ಟದ ಜುಡೋ ಚಾಂಪಿಯನ್‌ಶಿಪ್ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯ ಮಟ್ಟದ ಜುಡೋ ಚಾಂಪಿಯನ್‌ಶಿಪ್ ಗೆ ಬೆಳಗಾವಿಯ ಗಾಂಧಿ ಭವನದಲ್ಲಿ ಭವ್ಯವಾಗಿ ಚಾಲನೆ ದೊರೆಯಿತು.
ಈ ಕ್ರೀಡಾಕೂಟವನ್ನು ಡಿಸಿಪಿ ನಾರಾಯಣ ಬರಮನಿ ಮತ್ತು ಖ್ಯಾತ ಮಿಸ್ಟರ್ ಏಷಿಯಾ ಬಾಡಿಬಿಲ್ಡರ್ ಸುನಿಲ್ ಆಪ್ಟೇಕರ್ ಅವರು ಉದ್ಘಾಟಿಸಿದರು.
ಬೆಳಗಾವಿ ಅಮೆಚರ್ ಜುಡೋ ಅಸೋಸಿಯೇಷನ್ ಅಧ್ಯಕ್ಷೆ ಡಾ. ಸೋನಾಲಿ ಸರನೋಬತ್ ಹಾಗೂ ಉಪಾಧ್ಯಕ್ಷ ಡಾ. ಪ್ರಕಾಶ್ ಮುಗಳಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ರಾಜ್ಯ ಜುಡೋ ಅಸೋಸಿಯೇಷನ್‌ನ ಅಧ್ಯಕ್ಷ ಆನಂದ್ ಮತ್ತು ಕಾರ್ಯದರ್ಶಿ ರವಿಕುಮಾರ್ ಅವರ ಸಹಯೋಗವೂ ಇದಕ್ಕೆ ದೊರೆತಿದೆ.
ಕಾರ್ಯಕ್ರಮದಲ್ಲಿ ಬಸವರಾಜ ಕದ್ಲಿ, ಲಕ್ಷ್ಮಣ ಅಡಿಹುಡಿ, ಪೂಜಾ ಗವಾಡೆ, ಸಂತೋಷ್ ಕಂಗ್ರಾಳಕರ, ಭೈರವೀ ಮುಜುಂದಾರ್, ರೋಹಿಣಿ ಪಾಟೀಲ್, ತ್ರಿವೇಣಿ ಇದ್ದರು.
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಆರಂಭಿಸಲಾಯಿತು. ನಂತರ ಜುಡೋ ಕಲೆಯೊಂದಿಗಿನ ನೃತ್ಯ ಮತ್ತು ನಾಟಕ ಪ್ರದರ್ಶನದ ಮೂಲಕ ಶಾರೀರಿಕ ಕೌಶಲ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜನೆ ಮೂಡಿಸಲಾಯಿತು.
ರಾಜ್ಯಾದ್ಯಂತದಿಂದ 500ಕ್ಕೂ ಹೆಚ್ಚು ಸ್ಪರ್ಧಿಗಳು, ತೀರ್ಪುಗಾರರು ಹಾಗೂ ತರಬೇತುದಾರರು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಸ್ಪರ್ಧಾರ್ಥಿಗಳಿಗೆ ಆತಿಥ್ಯ ಹಾಗೂ ಆಹಾರದ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗಿದೆ. ಯುವಕರಲ್ಲಿ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಲಾಗಿದೆ.
ಉದ್ಘಾಟನಾ ಭಾಷಣ ಮಾಡಿದ ಡಿಸಿಪಿ ನಾರಾಯಣ ಬರಮನಿ ಅವರು, ಸ್ಪರ್ಧಿಗಳಿಗೆ ಉತ್ಸಾಹ ತುಂಬಿದರು. ಕ್ರೀಡೆಯಲ್ಲಿ ಹಾಗೂ ಜೀವನದಲ್ಲಿ ಶಿಸ್ತು ಮುಖ್ಯ ಎಂದರು.