Kannada NewsKarnataka News

ವಿಶೇಷ ಚೇತನ ಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟ: ಬೆಳಗಾವಿ ಶಾಲೆಯ ಮಕ್ಕಳಿಗೆ ಬಹುಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೊರಟಗೆರೆಯಲ್ಲಿ ಜರುಗಿದ ವಿಶೇಷ ಚೇತನ ಮಕ್ಕಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಬೆಳಗಾವಿ ನಗರದ ಕಿವುಡು ಮಕ್ಕಳ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ.

ಕುಮಾರಿ ತಾವುರಾ ಮುಲ್ಲಾ (ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ) ಹಾಗೂ ಕುಮಾರಿ ವಿದ್ಯಾ ಶ್ರೀನಾಥ್ ಕದಂ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾರೆ.
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿರುವ ವಿದ್ಯಾರ್ಥಿನಿಯರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜ್, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳು ನಾಮದೇವ ಬಿಲ್ಕರ್ ಹಾಗೂ ಕಿವುಡು ಮಕ್ಕಳ ಸರ್ಕಾರಿ ಶಾಲೆಯ ಅಧೀಕ್ಷಕರಾದ ಮಂದಾಕಿನಿ ವಂಡಕರ ಇವರು ಅಭಿನಂದಿಸಿದ್ದಾರೆ.
ಮಕ್ಕಳಿಗೆ ತರಬೇತಿ ನೀಡಿದ ಶಿಕ್ಷಕಿಯರಾದ ರತ್ನಮ್ಮ ಹಾಗೂ ಸವಿತಾ ಹೋಳಿ ಅವರಿಗೂ ಕೂಡ ಅಭಿನಂದನೆ ಸಲ್ಲಿಸಿದ್ದಾರೆ.
ಕ್ರೀಡಾಕೂಟದಲ್ಲಿ ಬಹುಮಾನ ಗಳಿಸಿರುವ ಮಕ್ಕಳನ್ನು ಹಾಗೂ ಶಿಕ್ಷಕಿಯರನ್ನು ಮಾಸ್ತಮರ್ಡಿಯ ಪ್ರೌಢಶಾಲೆಯಲ್ಲಿ ಇಂದು ಸೋಮವಾರ(ಫೆ.13) ನಡೆದ ಕಲಿಕಾ ಹಬ್ಬದಲ್ಲಿ ಶಿಕ್ಷಣ ಇಲಾಖೆಯ ವತಿಯಿಂದ ಸನ್ಮಾನಿಸಲಾಯಿತು.
https://pragati.taskdun.com/sslcpreparatory-examb-c-nagesh/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button