CrimeKannada NewsLatestNational
*ಮಗು ಹಾಸಿಗೆಯಲ್ಲಿ ಮೂತ್ರ ಮಾಡಿದ್ದಕ್ಕೆ ಮಗುವಿನ ಗುಪ್ತಾಂಗವನ್ನು ಸುಟ್ಟು ವಿಕೃತಿ ಮೆರೆದ ಮಲತಾಯಿ*

ಪ್ರಗತಿವಾಹಿನಿ ಸುದ್ದಿ: ಇದೆಂತಹ ಅಮಾನವೀಯ ಘಟನೆ. ಮಗು ಹಾಸಿಗೆಯಲ್ಲಿ ಮೂತ್ರ ಮಾಡಿದಕ್ಕೆ ತಾಯಿಯೊಬ್ಬಳು ಕಂದಮ್ಮನ ಗುಪ್ತಾಂಗವನ್ನೇ ಸುಟ್ಟು ವಿಕೃತಿ ಮೆರೆದಿರುವ ಘಟನೆ ನಡೆದಿದೆ.
ಐದು ವರ್ಷದ ಮಗು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದೆ ಎಂಬ ಕಾರಣಕ್ಕೆ ಮಲತಾಯಿ ಮನಬಂದಂತೆ ಮಗುವನ್ನು ಹೊಡೆದಿದ್ದಲ್ಲದೇ ಮಗುವಿನ ಖಾಸಗಿ ಭಾಗಗಳನ್ನು ಬಿಸಿ ಸೌಟಿನಿಂದ ಸುಟ್ಟಿದ್ದಾಳೆ.
ಕೇರಳದ ಪಲಕ್ಕಾಡ್ ಬಳಿ ಈ ಘಟನೆ ನಡೆದಿದೆ. ಮಗು ಅಂಗನವಾಡಿಗೆ ಹೋದಾಗ ಕುಳಿತುಕೊಳ್ಳಲಾಗದೇ ಮಗು ಕಷ್ಟಪಡುತ್ತಿದ್ದಳು. ಇದನ್ನು ಕಂಡು ಶಿಕ್ಷಕಿ ಏನಾಯಿತು ಎಂದು ವಿಚಾರಿಸಿದ್ದಾಳೆ. ಈ ವೇಳೆ ಮಗು ವಿಶಯ ತಿಳಿಸಿದ್ದಾಳೆ. ಅಂಗನವಾಡಿ ಶಿಕ್ಷಕಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮಗುವಿನ ಮಲತಾಯಿ ಬಿಹಾರ ಮೂಲದವಳನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



