*ದೇವಸ್ಥಾನದ ಜಾತ್ರೆ, ಉತ್ಸವಗಳಿಗೆ ಸ್ಥಳಾವಕಾಶಕ್ಕೆ ಕ್ರಮ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇವಸ್ಥಾನದ ಬಳಿಯ ಖುಲ್ಲಾ ಜಾಗೆ ವೃದ್ಧರು, ಮಹಿಳೆಯರು, ಮಕ್ಕಳಿಗೆ ವಿಹಾರಕ್ಕೆ ಜಾತ್ರೆ, ಉತ್ಸವಗಳಿಗೆ ಸೂಕ್ತವಾಗಿದ್ದು, ಅಗತ್ಯ ಕ್ರಮ ಕೈಗೊಳ್ಳುವದಾಗಿ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.
ಅವರು ಸೋಮವಾರ ಬೆಳಗಾವಿ ರಾಮತೀರ್ಥನಗರದಲ್ಲಿ ಜೀರ್ಣೋದ್ಧಾರಗೊಂಡು, ಹೊಸ ವಿನ್ಯಾಸದಲ್ಲಿ ರೂಪುಗೊಂಡಿರುವ ಭಕ್ತರಾಕರ್ಷಣೆಯ ಕೇಂದ್ರವೆನಿಸಿದ ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೆಟ್ಟಿ ಕೊಟ್ಟು, ಗದ್ದುಗೆಯ ಆಶೀರ್ವಾದ ಪಡೆದು, ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನ ಸ್ವೀಕರಿಸಿ, ದೇವಸ್ಥಾನದ ನೂತನ ಫಲಕ ಅನಾವರಣಗೊಳಿಸಿ, ಅಗತ್ಯ ಸ್ಥಳಾವಕಾಶ ಕಲ್ಪಿಸುವಂತೆ ಕೋರಿದ ಮನವಿ ಸ್ವೀಕರಿಸಿ , ರಹವಾಸಿಗಳನ್ನುದ್ದೇಶಿಸಿ ಮಾತನಾಡಿದರು.
ರಾಮತೀರ್ಥನಗರದ ಜನರ ಪ್ರೀತಿಯ ಕರೆಗೆ ಧನ್ಯವಾದಗಳು, ಶ್ರೀ ದುರ್ಗಾ ಮಹಿಳಾ ಮಂಡಳ ಮತ್ತು ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಕೋರಿಕೊಂಡ ಮನವಿಗೆ ಸ್ಪಂದಿಸಿ ಅಭಿಮಾನದಿಂದ ಮಾತನಾಡಿದರು.
ನಿಮ್ಮಮನವಿಯಲ್ಲಿಯ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು, ಮಂಜೂರು ಮಾಡಲು ಆದೇಶಿಸುವುದಾಗಿ ಹೇಳಿದರು. ಜನರ ಆಶಯಗಳನ್ನು ಈಡೇರಿಸುವದೇ ಸರ್ಕಾರದ ಕಾರ್ಯ. ಎಂದರಲ್ಲದೆ, ಸನ್ಮಾನಕ್ಕೆ ಧನ್ಯವಾದ ಹೇಳಿದರು.
ಶ್ರೀ ಕಾರ್ಯಸಿದ್ಧಿ ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಅದ್ಯಕ್ಷ ಸುರೇಶ ಉರಬಿನಹಟ್ಟಿ ಸರ್ವರನ್ನು ಸ್ವಾಗತಿಸಿದರು. ಜಿಲ್ಲಾ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅದ್ಯಕ್ಷ ವಿನಯ ನಾವಲಗಟ್ಟಿ ಅವರನ್ನೂ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಘದ ಎಸ್ ಜಿ ಕಲ್ಯಾಣಿ, ಮನೋಹರ ಕಾಜಗಾರ, ಎಸ್ ಎಲ್ ಸನದಿ, ಜಿ ಎಸ್ ಪಾಟೀಲ, ರಾಜಶೇಖರ ಚೆಳಗೇರಿ, ಪಿ ಎಫ್ ಪೂಜಾರ, ಡಿ ಎಮ್ ಟೊಣ್ಣೆ , ಮಲ್ಹಾರ ದಿಕ್ಷಿತ್, ದುಂಡಪ್ಪಾ ಉಳ್ಳೇಗಡ್ಡಿ, ರೌದ್ರ ಗೌಡ ಜುಟ್ಟನ್ನವರ, ಪ್ರಹ್ಲಾದ ಹೊಳೆಯಾಚಿ, ಶಿವಾನಂದ ಕಾಗತೀಕರ, ರಾಜಶೇಖರ ಚೆಳಗೇರಿ, ಪಿ ಎಫ್ ಪೂಜಾರ, ಆನಂದ ಹಣ್ಣಿಕೇರಿ, ಬಸವರಾಜ ಹಿರೇಮಠ, ಜಿ ಎಸ್ ಹಿರೇಮಠ, ಜಿ ಐ ದಳವಾಯಿ, ಎನ್ ಬಿ ಹಣ್ಣಿಕೇರಿ , ಡಾ ಬಿ ಸಿ ಚವ್ಹಾಣ, ಸೇರಿದಂತೆ, ಶ್ರೀ ದುರ್ಗಾ ಮಹಿಳಾ ಮಂಡಳ ದ ನಿರ್ಮಲಾ ಉರಬಿನಹಟ್ಟಿ, ಪ್ರೇಮಾ ಬಾಗೇವಾಡಿ ಸುನೀತಾ ಕೆರೂರ ಕಾವ್ಯಾ ಚಿಟಗಿ, ಮಹಾದೇವಿ ಕಮತ್, ಲತಾ ಕಾಜಗಾರ, ಉಮಾ ಖಾನವಾಡೆ, ಮಹಾನಂದಾ ಹಿರೇಮಠ, ವಿದ್ಯಾ ಮೆಳವಂಕಿ, ಸುಮಾ ಕದಮ್, ಮಹಾದೇವಿ ಮೂಲಿಮನಿ, ತೋಂಟಾಪೂರ, ಲಕ್ಷ್ಮೀ ಮಜಲಟ್ಟಿ, ಭಂಡಾರಿ ಸೇರಿದಂತೆ ಸ್ನೇಹ ಸಮಾಜ ಸೇವಾ ಸಂಘದ ಸದಸ್ಯರು, ರಹವಾಸಿಗಳು, ಮಹಿಳೆಯರು ಉಪಸ್ಥಿತರಿದ್ದರು.