ಪ್ರಗತಿವಾಹಿನಿ ಸುದ್ದಿ, ಧಾರವಾಡ : ಅಕ್ಷರ ಸಂಗಾತ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಆಯೋಜಿಸಿದ್ದ ಯುವ ಕಥಾ ಸ್ಪರ್ಧೆಯಲ್ಲಿ ಕಥಾ ಬಹುಮಾನವನ್ನು ಇಬ್ಬರು ಸಮಾನವಾಗಿ ಹಂಚಿಕೊಂಡಿದ್ದು, ಸುವರ್ಣ ಚೆಳ್ಳೂರು ಅವರ ಕಂಬದ ಹಕ್ಕಿ ಮತ್ತು ಪ್ರವೀಣ್ ಕುಮಾರ್ ಜಿ ಅವರ ಗುಟ್ಟು ಕಥಾ ಬಹುಮಾನ ಪಡೆದುಕೊಂಡಿವೆ.
ನಾಗರಾಜ ಕೋರಿ ಅವರ ಮಲ್ಲಯ್ಯನ ಮೈಕು, ಝಬೈರ್ ಅಹ್ಮದ್ ಪರಪ್ಪು ಅವರ ಒಂದು ತಿರುವಿನ ಕರಾಮತ್ತು ಒಪ್ಪಿತ ಕತೆಗಳಾಗಿ ಆಯ್ಕೆಯಾಗಿವೆ.
ನಾಲ್ಕೂ ಕಥೆಗಳಿಗೂ ತಲಾ ೫ ಸಾವಿರ ರೂ. ನಗದು ಬಹುಮಾನ ನೀಡಲಾಗುವುದು.
೨೦೨೨ ರ ಜನವರಿಯಲ್ಲಿ ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.
ಹಿರಿಯ ಕಥೆಗಾರರಾದ ಬಾನು ಮುಷ್ತಾಕ್ ಹಾಗೂ ಜಿ.ವಿ. ಆನಂದಮೂರ್ತಿ ತೀರ್ಪುಗಾರರಾಗಿದ್ದರು.
ಬೆಳಗಾವಿಯಲ್ಲಿ ಹಿಂದೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು 4 ಕಾರಣಕ್ಕಾಗಿ, ಏನವು?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ