Latest

*ಪುಟ್ಟ ಬಾಲಕನ ಮೇಲೆ ಬೀದಿನಾಯಿಗಳ ದಾಳಿ; ಕಚ್ಚಿ ಎಳೆದಾಡಿ ಮಗುವನ್ನು ಕೊಂದ ನಾಯಿಗಳು*

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಬೀದಿನಾಯಿಗಳ ದಾಳಿಗೆ ಪುಟ್ಟ ಬಾಲಕನೊಬ್ಬ ಬಲಿಯಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿದ್ದು, ಬಾಲಕನ್ನು ಕಚ್ಚಿ ಗಾಯಗೊಳಿಸಿವೆ. ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಮೂರು ನಾಯಿಗಳು ಅಟ್ಯಾಕ್ ಮಾಡಿದ್ದು, ಪುಟ್ಟ ಬಾಲಕನನ್ನು ಎಳೆದಾಡಿ ಕಚ್ಚಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳ್ಲಿ ವೈರಲ್ ಆಗಿದೆ. ಬಾಲಕ ಚೀರಾಡಿದರೂ ಯಾರೊಬ್ಬರೂ ರಕ್ಷಣೆಗೆ ಬಂದಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಭೀಕರ ದೃಶ್ಯ ಕರುಳು ಹಿಂಡುವಂತಿದೆ. ಗಂಭೀರವಾಗಿ ಗಯಗೊಂಡಿದ್ದ ಬಾಲಕನನ್ನು ಆತನ ತಂದೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಬಾಲಕ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ.

ಬಾಲಕನ ಕೈಲಿದ್ದ ಆಹಾರ ಪೊಟ್ಟಣದ ವಾಹಸನೆ ಗ್ರಹಿಸಿ ಬೀದಿ ನಾಯಿಗಳು ಬಾಲಕನ ಮೇಲೆ ದಾಲಿ ನಡೆಸಿವೆ ಎಂದು ಹೈದರಾಬಾದ್ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

Home add -Advt

*ಕೌಟುಂಬಿಕ ಮೌಲ್ಯ, ಕುಟುಂಬದ ಉಳಿವಿಗಾಗಿ ಹೋರಾಟ; ಅಂತಹ ಮಹಿಳೆಯರಿಗೆ ಧ್ವನಿಯಾಗಿ ಎಂದ ಡಿ.ರೂಪಾ*

https://pragati.taskdun.com/d-rooparohini-sindhurifacebook-post/

Related Articles

Back to top button