EducationKannada NewsKarnataka News

*ಲವರ್ ನಂಬರ್ ಬ್ಲಾಕ್ ಮಾಡಿದ್ಲು ಎಂದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ*

ಪ್ರಗತಿವಾಹಿನಿ ಸುದ್ದಿ : ಲವರ್ ನಂಬರ್ ಬ್ಲಾಕ್ ಮಾಡಿದಳು ಎಂದು ಮನನೊಂದ ಯುವಕ  ಡೆತ್‌ ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಂಡಿದ್ದಾನೆ.

ಚಿಕ್ಕಬಳ್ಳಾಪುರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಪೇರೇಸಂದ್ರ ಗ್ರಾಮದ ಖಾಸಗಿ ಕಾಲೇಜಿನ ಹಾಸ್ಟೆಲ್‌ನಲ್ಲೇ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೆರಳದ ವಯನಾಡು ಮೂಲದ ಮೊಹಮ್ಮದ್ ಶಬೀರ್ (26) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯಾಗಿದ್ದಾನೆ. 

ಈತ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಗ್ರಾಮದಲ್ಲಿರುವ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಅಲೈಡ್ ಸೈನ್ಸ್ ಕೋರ್ಸ್‌ನ ಫೈನಲ್ ಇಯರ್ ಅಧ್ಯಯನ ಮಾಡುತ್ತಿದ್ದನು ಎನ್ನಲಾಗಿದೆ.

ಇನ್ನು ರೂಮ್‌ನ ಕಿಟಕಿಗೆ ಟವೆಲ್ ಕಟ್ಟಿ ಅದರಿಂದ ಕತ್ತು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಪೇರೇಸಂದ್ರ ಠಾಣಾ ಪೊಲೀಸರು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾದ ರೂಮ್ ಪರಿಶೀಲನೆ ನಡೆಸಿದಾಗ ಡೆತ್‌ ನೋಟ್ ಸಿಕ್ಕಿದೆ.

Home add -Advt

ಸಹಪಾಠಿಯಾಗಿದ್ದ ಹುಡುಗಿಯೊಬ್ಬಳನ್ನು ಆತ ತುಂಬಾ ಲವ್ ಮಾಡುತ್ತಿದನು. ಆದ್ರೆ ಆ ಹುಡುಗಿಗೆ ಇವನ ಮೇಲೆ ಇಂಟ್ರೆಸ್ಟ್ ಇರಲಿಲ್ಲ. ಹೀಗಾಗಿ ನಂಬರ್ ಬ್ಲಾಕ್ ಮಾಡಿ ಈತನನ್ನು ನಿರ್ಲಕ್ಷ್ಯ ಮಾಡಿದ್ದಳು. ಇದ್ರಿಂದ ಮನನೊಂದು ಶಬೀರ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

Related Articles

Back to top button