Karnataka NewsLatest

*ನಲಪಾಡ್ ಹೆಸರು ಹೇಳಿ ವಿದ್ಯಾರ್ಥಿ ಕಿಡ್ಯಾಪ್, ಕಿರುಕುಳ: 9 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲು*

ಪ್ರಗತಿವಾಹಿನಿ ಸುದ್ದಿ: ನಲಪಾಡ್ ಹಾಗೂ ಯೂಥ್ ಕಾಂಗ್ರೆಸ್ ಹೆಸರು ಹೇಳಿಕೊಂಡು ವಿದ್ಯಾರ್ಥಿಯನ್ನು ಕಿಡ್ನ್ಯಾಪ್ ಮಾಡಿ, ಕಿರುಕುಳ ನೀಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಈ ಬಗ್ಗೆ ವಿದ್ಯಾರ್ಥಿ ಜೀವನ್ ಜೈನ್ ಎಂಬಾತ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 9 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಖಾಸಗಿ ಕಾಲೇಜು ವಿದ್ಯಾರ್ಥಿ ಜೀವನ್ ಜೈನ್ ಕಳೆದ ವರ್ಷ ಆಯುಷ್ ಶ್ರೀನಿವಾಸ್ ಎಂಬಾತನಿಂದ ಮೂರು ಲಕ್ಷ ಪಡೆದುಕೊಂಡಿದ್ದ. ಇವೆಂಟ್ ಗಾಗಿ ಈ ಹಣ ಪಡೆದಿದ್ದನಂತೆ. ಹೀಗೆ ತೆಗೆದುಕೊಂಡ ಹಣವನ್ನು ಸ್ವಲ್ಪ ತಡವಾಗಿ ತೀರಿಸಿದ್ದಾನೆ. ಸಾಲ ತೀರಿಸಿದರೂ ಕಿಡಿಗೇಡಿಗಳು ಜೀವನ್ ಗೆ ಮತ್ತಷ್ಟು ಹಣಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಅಲ್ಲದೇ ಬಲವಂತದಿಂದ ಬೆಟ್ಟಿಂಗ್ ಬಲೆಗೆ ಬೀಳುವಂತೆ ಮಾಡುತ್ತಿದ್ದಾರೆ. ಅಲ್ಲದೇ ಕಿಡ್ನ್ಯಾಪ್ ಮಾಡಿ ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದು, ವಿಡಿಯೋ ಮಾಡಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗೆ ಬೆದರಿಸಿ 6 ಲಕ್ಷ ಹಣ ಪಡೆದಿದ್ದಾರೆ ಎನ್ನಲಾಗಿದೆ. ಇದೀಗ ಹತ್ತು ಲಕ್ಷಕ್ಕೆ ಬೇಡಿಕೆ ಇಡುತ್ತಿದ್ದು, ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ.

ಇದರಿಂದ ನೊಂದ ವಿದ್ಯಾರ್ಥಿ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button