LatestNational

*ಅವಮಾನ ಮಾಡಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್*

ಪ್ರಗತಿವಾಹಿನಿ ಸುದ್ದಿ: ಅವಮಾನ ಮಾಡಿದ್ದಕ್ಕೆ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ಒಂದು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಾನೆ ಮಧ್ಯಪ್ರದೇಶದ ರೇವಾದಲ್ಲಿ ನಡೆದಿದೆ.

ಬೈಕ್ ನಲ್ಲಿ ಹೋಗುವಾಗ ಕೆಸರು ತಾಗಿದ್ದಕ್ಕೆ ವಿದ್ಯಾರ್ಥಿನಿ ಬೈಕ್ ಸವಾರನಿಗೆ ಬೈದಿದ್ದಳು. ಇದರಿಂದ ಅವಮಾನವಾಗಿದೆ ಎಂದು ಬೈಕ್ ಸವಾರ ತನ್ನ ಸ್ನೇಹಿತರೊಂದಿಗೆ ಸೇರಿ ವಿದ್ಯಾರ್ಥಿನಿ ಮೇಲೆ ಸೇಡು ತೀರಿಸಿಕೊಳ್ಳಲು ಗ್ಯಾಂಗ್ ರೇಪ್ ನಡೆಸಿದ್ದಾನೆ.

Home add -Advt

ಕಾಲೇಜು ವಿದ್ಯಾರ್ಥಿನಿ ತನ್ನ ಮೊಬೈಲ್ ರಿಪೇರಿಗೆಂದು ಅಂಗಡಿಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ಪ್ರಮುಖ ಆರೋಪಿ ಕಿಶನ್ ಕೋಲ್ ಸ್ನೇಹಿತ ಸಂತಲಾಲ್ ನನ್ನು ಬಂಧಿಸಲಾಗಿದೆ. ಪೊಲೀಸ್ ವಿಚಾರಣೆ ವೇಳೆ ಆರೋಪಿ ತನಗೆ ಅವಮಾನ ಮಾಡಿದ್ದಕ್ಕೆ ತಕ್ಕ ಪಾಠ ಕಲಿಸಲೆಂದು ಈ ಕೃತ್ಯವೆಸಗಿದ್ದಾಗಿ ಬಾಯ್ಬಿಟ್ಟಿದ್ದಾನೆ.

Related Articles

Back to top button