
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿದ್ಯಾರ್ಥಿಗಳ ಪ್ರಯತ್ನ ನಿಂತ ನೀರಾಗದೇ ಹರಿಯುವ ನೀರಾಗಬೇಕು. ಅಂದಾಗಲೇ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳಿಗೆ ಶಿಕ್ಷಣ ಜತೆಗೆ ಸಂಸ್ಕೃತಿ, ಪ್ರಪಂಚದ ಜ್ಞಾನ ಅಗತ್ಯವಿದೆ. ಅದಕ್ಕಾಗಿ ಸಮಯವನ್ನು ಸದ್ಬಳಕೆ ಮಾಡಿಕೊಂಡು ಸಾಧನೆ ಮೆಟ್ಟಿಗಳನ್ನು ಏರಬೇಕೆಂದು ರಾಣ ಚನ್ನಮ್ಮ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ, ನಿವೃತ್ತ ಪ್ರಾಧ್ಯಾಪಕ ಪ್ರೊ. ಗಂಗಾಧರ ಕೆ ಬೂದೆಪ್ಪಾ ಹೇಳಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ೧೧ ರಂದು ಸಮಾಜಶಾಸ್ತ್ರ ವಿಭಾಗದಲ್ಲಿ, ಆಯೋಜಿಸಲಾಗಿದ್ದ, ಸಮಾಜಶಾಸ್ತ್ರ ಹಳೆಯ ವಿದ್ಯಾರ್ಥಿಗಳ ಒಕ್ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಅದಮ್ಯವಾದ ಚೇತನ ಶಕ್ತಿ ಇದೆ. ಇನ್ನೊಬ್ಬರು ಶ್ರೇಷ್ಟ ಎಂಬ ಭಾವನೆಯಿಂದ ತಮ್ಮಲ್ಲಿ ಕೀಳು ಭಾವನೆ ಬೆಳೆಸಿಕೊಳ್ಳದೆ, ನಾನು ಶ್ರೇಷ್ಟ ವ್ಯಕ್ತಿ ಯಾವ ಕಾರ್ಯವನ್ನಾದರು ಮಾಡಬಲ್ಲೆ ಎಂಬ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಮಾಜಶಾಸ್ತ್ರ ವಿಭಾಗದ ಪ್ರೊ. ಕೆ.ಬಿ. ಚಂದ್ರಿಕಾ ಮಾತನಾಡಿ, ವಿದ್ಯಾರ್ಥಿಗಳ ಸಂಘವು ಸಮಾಜಶಾಸ್ತ್ರ ವಿಷಯವನ್ನು ಸದೃಢಗೊಳಿಸಿ ಅದರ ಉನ್ನತಿಗಾಗಿ ಶ್ರಮವಹಿಸಬೇಕು ಮತ್ತು ರಾಜ್ಯಕ್ಕೆ ಮಾದರಿಯಾಗಬೇಕೆಂದು ಕರೆ ನೀಡಿದರು. ಜತೆಗೆ ಹಳೆಯ ಸ್ನೇಹಿತರ ಪರಸ್ಪರ ಭೇಟಿಯಾಗುವುದರ ಮೂಲಕ ಜ್ಞಾನವನ್ನು ಹಂಚಿಕೊಳ್ಳಬೇಕೆಂದು ಹೇಳಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ದಶರಥ ಆರ್ ಆಲಬಾಳ ಮಾತನಾಡಿ, ಶಿಕ್ಷಣವು ಜಗತ್ತನ್ನು ಬದಲಾಯಿಸಲು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ ಎಂದು ಹೇಳಿದರು ಮತ್ತು ವಿದ್ಯಾರ್ಥಿಗಳು ದೇಶದ ಬೆನ್ನೆಲುಬು, ದೇಶದ ಆಸ್ತಿ, ವಿದ್ಯಾರ್ಥಿ ಜೀವನವು ಉಜ್ವಲವಾಗಿರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಡಾ. ಸುಮಂತ ಹೀರೆಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೀತಿ ಪದಪ್ಪಗೋಳ ಸ್ವಾಗತ ನೃತ್ಯದೊಂದಿಗೆ ಪ್ರಾರಂಭವಾಯಿತು. ಸವಿತಾ ಮೇಲಿನಮಣ ಸ್ವಾಗತ ಗೀತೆಯನ್ನು ಹಾಡಿದರು. ಸಂತೋಷ ನಾಯಕ ಅತಿಥಿ ಪರಿಚಯಿಸಿದರು. ಮಾರುತಿ ಪಾಟೋಲಿ, ಮಗದುಮ್, ಡಾ. ರವಿ ದಳವಾಯಿ, ಸುನೀಲ ಲೋಂಡೆ, ಯುವರಾಜ ಸರನಾಯಕ್, ಸೋಮಪ್ಪಾ ನರಗುಂದ ಹಾಗೂ ಉಪಸ್ಥಿತರಿದ್ದರು. ಮಂಜು ಸನದಿ ನಿರೂಪಿಸಿದರು. ಡಾ. ಮರಿಗೌಡಾ ಚೌಬಾರಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ