Kannada NewsLatestNational

ಪಾಸು ಮಾಡಲು ಉತ್ತರ ಪತ್ರಿಕೆಯಲ್ಲಿ ಹಣ ಇಟ್ಟು ಕಳಿಸಿದ ವಿದ್ಯಾರ್ಥಿಗಳು

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಪರೀಕ್ಷಾ ಮಂಡಳಿಯೊಂದು ನಡೆಸಿದ ಪರೀಕ್ಷೆಯಲ್ಲಿ ಉತ್ತರ ಬರೆದ ವಿದ್ಯಾರ್ಥಿಗಳು ತಮ್ಮನ್ನು ಪಾಸು ಮಾಡಲು ಮೌಲ್ಯಮಾಪನ ಮಾಡುವವರಿಗೆ ಉತ್ತರ ಪತ್ರಿಕೆಯೊಂದಿಗೆ ಹಣ ಕಳಿಸಿದ ಚಿತ್ರವೊಂದನ್ನು ಐಪಿಎಸ್ ಅಧಿಕಾರಿಯೊಬ್ಬರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿದ್ಯಾರ್ಥಿಗಳು ಉತ್ತರ ಪತ್ರಿಕೆಗಳಲ್ಲಿ 100, 200 ಮತ್ತು 500 ರೂ. ನೋಟುಗಳನ್ನು ಉತ್ತರ ಪತ್ರಿಕೆ ಜತೆ ಲಗತ್ತಿಸಿ ಕಳುಹಿಸಿರುವ ಚಿತ್ರವನ್ನು ಐಪಿಎಸ್ ಅಧಿಕಾರಿ ಅರುಣ್ ಬೋತ್ರಾ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

“ಶಿಕ್ಷಕರೊಬ್ಬರು ಕಳುಹಿಸಿರುವ ಚಿತ್ರ. ತಾವು ಪಾಸಾಗಲು ಕನಿಷ್ಠ ಅಂಕಗಳನ್ನು ನೀಡುವಂತೆ ವಿದ್ಯಾರ್ಥಿಗಳು ವಿನಂತಿಸಿದ್ದಾರೆ. ನಮ್ಮ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಇಡೀ ಶೈಕ್ಷಣಿಕ ವ್ಯವಸ್ಥೆಯ ಬಗ್ಗೆ ಇದು ಬಹಳಷ್ಟು ಹೇಳುತ್ತದೆ” ಎಂದು ಅರುಣ ಬೋತ್ರಾ ಬರೆದಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button