*ಪ್ರತಿಭಾವಂತ ವಿದ್ಯಾಅರ್ಥಿಗಳಿಗೆ 80,000 ವಿದ್ಯಾರ್ಥಿ ವೇತನ*: *ಕೂಡಲೇ ಅರ್ಜಿ ಸಲ್ಲಿಸಿ*

ಪ್ರಗತಿವಾಹಿನಿ ಸುದ್ದಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ 80,000 ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಅರ್ಹ ವಿದ್ಯಾರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ. ಈ ಅವಕಾಶ ಸದುಪಯೋಗಪಡಿಸಿಕೊಳ್ಳಿ.
12ನೇ ತರಗತಿಯಲ್ಲಿ ನೀವು ಉತ್ತಮ ಅಂಕ ಗಳಿಸಿದ್ದರೆ, ಜೆಇಇ ಅಥವಾ ನೀಟ್ ಪರೀಕ್ಷೆಯಲ್ಲಿ ಟಾಪ್ ರ್ಯಾಂಕ್ ಪಡೆದು ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ಪಡೆಯಬೇಕು ಎಂದುಕೊಂಡಿದ್ದರೆ ಅಂತಹ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಅನುಕೂಲವಾಗಲಿದೆ.
ನಿಮ್ಮ ಮುಂದಿನ ವಿದ್ಯಾಭ್ಯಾಸದ ಖರ್ಚಿಗೆ ನೆರವಾಗಲು ಕೇಂದ್ರ ಸರ್ಕಾರ ವಾರ್ಷಿಕ 80,000 ಋ. ವಿದ್ಯಾರ್ಥಿವೇತನ ಪಡೆಯುವ ಅವಕಾಶ ನೀಡಿದೆ.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST), ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ INSPIRE-SHE (Scholarship for Higher Education) ವಿದ್ಯಾರ್ಥಿವೇತನ ಯೋಜನೆಯಡಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಬಾರಿ ಒಟ್ಟು 12,000 ವಿದ್ಯಾರ್ಥಿವೇತನಗಳನ್ನು ನೀಡಲಾಗುತ್ತಿದ್ದು, ಅರ್ಹ ವಿದ್ಯಾರ್ಥಿಗಳು 2026ರ ಡಿಸೆಂಬರ್ 7ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಿಶೇಷವೆಂದರೆ, ಕೇವಲ 12ನೇ ತರಗತಿಯ ಟಾಪರ್ಗಳು ಮಾತ್ರವಲ್ಲದೆ, ಜೆಇಇ ಮೇನ್, ಜೆಇಇ ಅಡ್ವಾನ್ಸ್ಡ್, ಮತ್ತು ನೀಟ್ ಪರೀಕ್ಷೆಗಳಲ್ಲಿ ಉತ್ತಮ ರ್ಯಾಂಕ್ ಪಡೆದ ವಿದ್ಯಾರ್ಥಿಗಳೂ ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಈ ವಿದ್ಯಾರ್ಥಿವೇತನ ಪಡೆಯಲು ಕೆಲವು ಅರ್ಹತಾ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.
17ರಿಂದ 22 ವರ್ಷ ವಯಸ್ಸಿನವರಾಗಿರಬೇಕು.
2025ರಲ್ಲಿ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ಮೂಲ ಮತ್ತು ನೈಸರ್ಗಿಕ ವಿಜ್ಞಾನ ವಿಭಾಗದ ಪದವಿ ಕೋರ್ಸ್ಗಳಿಗೆ ಪ್ರವೇಶ ಪಡೆದಿರಬೇಕು.
ಅರ್ಹತೆ ಪಡೆಯಲು ವಿದ್ಯಾರ್ಥಿಗಳು ಈ ಕೆಳಗಿನ ಮೂರು ವಿಭಾಗಗಳಲ್ಲಿ ಯಾವುದಾದರೂ ಒಂದಕ್ಕೆ ಸೇರಿರಬೇಕು.
12ನೇ ತರಗತಿಯಲ್ಲಿ ಆಯಾ ರಾಜ್ಯ ಅಥವಾ ಕೇಂದ್ರ ಶಿಕ್ಷಣ ಮಂಡಳಿಯ ಟಾಪ್ ಶೇ.1ರಷ್ಟು ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರಬೇಕು.
JEE Main, JEE Advanced ಅಥವಾ NEET ಪರೀಕ್ಷೆಗಳಲ್ಲಿ ಟಾಪ್ 10,000 ರ್ಯಾಂಕ್ಗಳೊಳಗೆ ಸ್ಥಾನ ಪಡೆದಿರಬೇಕು. ಜೊತೆಗೆ ಅರ್ಹ ವಿಜ್ಞಾನ ಪದವಿ ಕೋರ್ಸ್ಗೆ ಪ್ರವೇಶ ಪಡೆದಿರಬೇಕು.
NTSE, ಜಗದೀಶ್ ಬೋಸ್ ನ್ಯಾಷನಲ್ ಸೈನ್ಸ್ ಟ್ಯಾಲೆಂಟ್ ಸರ್ಚ್ (JBNSTS) ವಿದ್ಯಾರ್ಥಿವೇತನ ಪಡೆದವರು ಅಥವಾ ಅಂತರರಾಷ್ಟ್ರೀಯ ಒಲಿಂಪಿಯಾಡ್ ಪದಕ ವಿಜೇತರು ಅರ್ಹ ವಿಜ್ಞಾನ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು.
BSc, BS, ನಾಲ್ಕು ವರ್ಷಗಳ BSc with Research, Integrated MSc ಮತ್ತು Integrated MS ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಜೈವಿಕ ತಂತ್ರಜ್ಞಾನ, ಸೂಕ್ಷ್ಮಜೀವಶಾಸ್ತ್ರ, ಪರಿಸರ ವಿಜ್ಞಾನ, ಸಂಖ್ಯಾಶಾಸ್ತ್ರ ಮತ್ತು ಭೂ ವಿಜ್ಞಾನ ಸೇರಿದಂತೆ ವಿವಿಧ ಮೂಲ ಹಾಗೂ ನೈಸರ್ಗಿಕ ವಿಜ್ಞಾನ ವಿಷಯಗಳು ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ.
ವರ್ಷಕ್ಕೆ ₹80,000 ಹೇಗೆ ಸಿಗಲಿದೆ?
ಈ ಯೋಜನೆಯ ಪ್ರಮುಖ ಆಕರ್ಷಣೆಯೇ ವಾರ್ಷಿಕ ₹80,000 ಆರ್ಥಿಕ ನೆರವು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಈ ಕೆಳಗಿನಂತೆ ಹಣ ನೀಡಲಾಗುತ್ತದೆ.
ಮಾಸಿಕ ವಿದ್ಯಾರ್ಥಿವೇತನ: ₹5,000
ವಾರ್ಷಿಕ ವಿದ್ಯಾರ್ಥಿವೇತನ: ₹60,000
ಬೇಸಿಗೆ ಸಂಶೋಧನಾ ಅನುದಾನ: ₹20,000
ಅಂದರೆ, ವಿದ್ಯಾರ್ಥಿಗಳು ವರ್ಷಕ್ಕೆ ಒಟ್ಟು ₹80,000 ಪಡೆಯಬಹುದು. ವಿಶೇಷವಾಗಿ, ಸಂಶೋಧನಾ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಹೆಚ್ಚುವರಿ ₹20,000 ಅನುದಾನ ಸಹಾಯಕವಾಗಲಿದೆ.
ಅರ್ಜಿ ಸಲ್ಲಿಸಲು 2026ರ ಡಿಸೆಂಬರ್ 7 ಕೊನೆಯ ದಿನಾಂಕವಾಗಿದ್ದು, ಆಸಕ್ತರು online-inspire.gov.in ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.


