ಪ್ರಗತಿವಾಹಿನಿ ಸುದ್ದಿ, ಪರ್ಥ್: ಆಸ್ಟ್ರೇಲಿಯಾದ ಪರ್ಥ್ ನಲ್ಲಿ ಭಾನುವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ T20 ಪಂದ್ಯದಲ್ಲಿ ICC ನೀತಿ ಸಂಹಿತೆಯ ಮಟ್ಟ 1ನ್ನು ಉಲ್ಲಂಘಿಸಿದ್ದಕ್ಕಾಗಿ ಆಸ್ಟ್ರೇಲಿಯಾ ತಂಡದ ನಾಯಕ ಆರನ್ ಫಿಂಚ್‌ಗೆ ಅಧಿಕೃತ ವಾಗ್ದಂಡನೆ ವಿಧಿಸಲಾಗಿದೆ.
ಇಂಗ್ಲೆಂಡ್‌ನ ಇನಿಂಗ್ಸ್‌ನ ಒಂಬತ್ತನೇ ಓವರ್‌ನಲ್ಲಿ ಡಿಆರ್‌ಎಸ್ ಕುರಿತು ಗೊಂದಲ ಉಂಟಾದಾಗ ಫಿಂಚ್ ಅವರು ಅಂಪೈರ್ ವಿರುದ್ಧ ಅನುಚಿತ ಭಾಷೆ ಬಳಸಿ ಲೆವೆಲ್ 1 ICC ನೀತಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ.
ICC ನೀತಿ ಸಂಹಿತೆಯ ಕಲಂ 2.3 “ಅಂತಾರಾಷ್ಟ್ರೀಯ ಪಂದ್ಯದ ಸಮಯದಲ್ಲಿ ಶ್ರವಣ ಮಾಡಬಹುದಾದ ಅಶ್ಲೀಲತೆಯ ಬಳಕೆ” ಗೆ ಸಂಬಂಧಿಸಿದೆ.
ಫಿಂಚ್ ತಮ್ಮ ಅಪರಾಧ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಇದನ್ನು ಅವರ ಶಿಸ್ತಿನ ದಾಖಲೆಯಲ್ಲಿ ಹಿನ್ನಡೆಯ ಅಂಶವಾಗಿ ಸೇರ್ಪಡೆ ಮಾಡಲಾಯಿತು.
ಇದು ಕಳೆದ 24 ತಿಂಗಳುಗಳಲ್ಲಿ ಫಿಂಚ್ ಅವರ ಮೊದಲ ಅಪರಾಧವಾಗಿದ್ದರೂ, ಸರಣಿಯ ಉಳಿದ ಸಮಯದಲ್ಲಿ ಅಥವಾ ಮುಂಬರುವ ICC ಪುರುಷರ T20 ವಿಶ್ವಕಪ್‌ನಲ್ಲಿ ಹೆಚ್ಚಿನ ಘಟನೆಗಳು ಸಂಭವಿಸಿದಲ್ಲಿ ಅವರು ಅಮಾನತುಗೊಳ್ಳುವ ಅಪಾಯವನ್ನು ಎದುರಿಸುವಂತಾಗಿದೆ.
ಡಾ. ವಿಕಾಸ್ ಹತ್ಯೆಗೆ ಹೊಸ ತಿರುವು; ನಗ್ನ ವಿಡಿಯೊ ಅಪ್ ಲೋಡ್ ಅಷ್ಟೇ ಕೊಲೆಗೆ ಕಾರಣವಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ