Latest

4 ಸಾವಿರ ಲಂಚ ಪಡೆದು 4 ವರ್ಷ ಜೈಲುಶಿಕ್ಷೆಗೆ ಗುರಿಯಾದ ಸಬ್ ರಿಜಿಸ್ಟ್ರಾರ್

ಪ್ರಗತಿವಾಹಿನಿ ಸುದ್ದಿ; ತುಮಕೂರು: ಉದಾತ್ತ ಮನಸ್ಸಿಂದ ತಮ್ಮ ಜಮೀನು ದಾನ ಮಾಡಲು ಬಂದ ವ್ಯಕ್ತಿಯ ಜಮೀನು ದಾನಪತ್ರ ನೋಂದಣಿಗೆ ಸಬ್ ರಿಜಿಸ್ಟ್ರಾರ್ ಒಬ್ಬರು ಲಂಚಕ್ಕೆ ಬೇಡಿಕೆಯಿಟ್ಟು ಜೈಲುಶಿಕ್ಷೆಗೆ ಗುರಿಯಾಗಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿಯಲ್ಲಿ ನಡೆದಿದೆ.

ಇಲ್ಲಿನ ಹೊಸಹಳ್ಳಿ ಗ್ರಾಮದ ನಿವಾಸಿಯೊಬ್ಬರು ಜಮೀನು ದಾನ ಪತ್ರ ನೋಂದಣಿಗೆ ಬಂದಿದ್ದರು. ಈ ವೇಳೆ ಮಧುಗಿರಿ ಸಬ್ ರಿಜಿಸ್ಟ್ರಾರ್ ರಾಮಚಂದ್ರಯ್ಯ 4,000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಎಸಿಬಿಯಲ್ಲಿಯೂ ದೂರು ದಾಖಲಾಗಿತ್ತು. ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದ ರಾಮಚಂದ್ರಯ್ಯ ವಿರುದ್ಧ ತುಮಕೂರು ಎಸಿಬಿ ರಘುಕುಮಾರ್, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

Related Articles

ಸಬ್ ರಿಜಿಸ್ಟ್ರಾರ್ ರಾಮಚಂದ್ರಯ್ಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಧುಗಿರಿ 7ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲದ ನ್ಯಾಯಾಧೀಶ ಎಸ್.ಸುಧೀಂದ್ರನಾಥ್, ಆರೋಪಿಗೆ 4 ವರ್ಷ ಜೈಲುಶಿಕ್ಷೆ ಹಾಗೂ 8000 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಮತ್ತೆ 1,41,986 ಜನರಲ್ಲಿ ಕೊರೊನಾ ಸೋಂಕು ಪತ್ತೆ; ದೇಶಾದ್ಯಂತ ಹೆಚ್ಚಿದ ಒಮಿಕ್ರಾನ್ ಅಟ್ಟಹಾಸ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button