Kannada NewsKarnataka NewsLatest

ವೃತ್ತಿ ಗೌರವ ಮತ್ತು ವೃತ್ತಿ ಪಾವಿತ್ರ್ಯತೆ ಇದ್ದರೆ ಜೀವನದಲ್ಲಿ ಯಶಸ್ಸು -ಕೋರೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ವೃತ್ತಿ ಗೌರವ ಮತ್ತು ವೃತ್ತಿ ಪಾವಿತ್ರ್ಯತೆ ಇದ್ದರೆ ಎಂತವರೂ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಎಂದು ರಾಜ್ಯಸಭಾ ಸದಸ್ಯ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಭಿಪ್ರಾಯಪಟ್ಟಿದ್ದಾರೆ.

ಪ್ರೊಫೇಶನಲ್ ಫೋರಮ್ ಆಯೋಜಿಸಿದ್ದ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಂಡು, ಗಣ್ಯರನ್ನು ಸತ್ಕರಿಸಿ ಮಾತನಾಡಿದ ಅವರು, ಪ್ರತಿಯೊಂದು ವೃತ್ತಿ ದಿನದಿಂದ ದಿನಕ್ಕೆ ಹೊಸತನ ಪಡೆಯುತ್ತಿದ್ದು, ಅದಕ್ಕೆ ಹೊಂದಿಕೊಂಡು ಹೋಗುವುದನ್ನು ಕಲಿಯಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ ಕುಮಾರ, ದಿನದಿಂದ ದಿನಕ್ಕೆ ಕೌಶಲ್ಯದ ಅರ್ಥ ಬದಲಾಗುತ್ತಿರುತ್ತದೆ. ಇಂದು ಇರುವುದು ನಾಳೆ ಇರುವುದಿಲ್ಲ. ನಾವು ಓಡುತ್ತಲೇ ಇರಬೇಕು. ಬದಲಾವಣೆಗೆ ಸದಾ ಸಿದ್ಧವಾಗಿರಬೇಕು ಎಂದು ಕರೆ ನೀಡಿದರು.

ಹೃದಯರೋಗ ತಜ್ಞೆ ವಿಜಯಲಕ್ಷ್ಮಿ ಬಾಳೆಕುಂದ್ರಿ ಅವರನ್ನು ಸಹ ಸತ್ಕರಿಸಲಾಯಿತು.  ಆಳವಾದ ಅಧ್ಯಯನದಿಂದ ಮಾತ್ರ ಇಂದು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ಹಾಗಾಗಿ ನಿರಂತರ ಅಧ್ಯನದಲ್ಲಿ ತೊಡಗಿಕೊಳ್ಳಬೇಕು. ಹೊಸ ಹೊಸ ಬೆಳವಣಿಗೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

Home add -Advt

ಪ್ರೊಫೇಶನಲ್ ಫೋರಮ್ ಅಧ್ಯಕ್ಷ ಬಿ.ಎಸ್.ಪಾಟೀಲ, ಕಾರ್ಯದರ್ಶಿ ರಾಜೇಂದ್ರ ಮುಂದಡಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button