*25 ವರ್ಷಗಳ ಬೃಹತ್ ಇನ್ಸಿಷನಲ್ ಹರ್ನಿಯಾಕ್ಕೆ KLE ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ*
ಯಳ್ಳೂರ ರಸ್ತೆಯ ಕೆ.ಎಲ್.ಇ. ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ 25 ವರ್ಷಗಳ ಬೃಹತ್ ಇನ್ಸಿಷನಲ್ ಹೆರ್ನಿಯಾಕ್ಕೆ ( Huge Incisional Hernia ) ಯಶಸ್ವಿ ಶಸ್ತ್ರಚಿಕಿತ್ಸೆ ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಯಳ್ಳೂರ ರಸ್ತೆಯ ಕೆ.ಎಲ್.ಇ. ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕರ ತಂಡವು 25 ವರ್ಷಗಳಿಂದ ಬೃಹತ್ ಇನ್ಸಿಷನಲ್ ಹೆರ್ನಿಯಾದಿಂದ ಬಳಲುತ್ತಿದ್ದ 51 ವರ್ಷದ ಮಹಿಳೆಯೊಬ್ಬರಿಗೆ ಅತ್ಯಂತ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿ ಹೊಸ ಬದುಕಿನ ಆಶಾಕಿರಣ ಮೂಡಿಸಿದೆ. ರೋಗಿಯು ಅಧಿಕ ರಕ್ತದೊತ್ತಡ, ಮಧುಮೇಹ, ಹೈಪೋಥೈರಾಯ್ಡಿಸಮ್, ಸ್ಥೂಲಕಾಯ, ಗರ್ಭಾಶಯದ ಬಹು ಫೈಬ್ರಾಯ್ಡ್ಸ್ (Multiple Fibroids) ಹಾಗೂ ರಕ್ತಹೀನತೆ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಹಿಂದೆ ಅವರಿಗೆ ಮೂರು ಬಾರಿ ಸಿಸೇರಿಯನ್ (LSCS) ಶಸ್ತ್ರಚಿಕಿತ್ಸೆ ನಡೆದಿತ್ತು. ಕಳೆದ 25 ವರ್ಷಗಳಲ್ಲಿ ಉಂಟಾಗಿದ್ದ ಬೃಹತ್ ಇನ್ಸಿಷನಲ್ ಹೆರ್ನಿಯಾದ ಪರಿಣಾಮವಾಗಿ ಸಣ್ಣ ಕರುಳಿನ ಬಹುತೇಕ ಭಾಗವು ಹೆರ್ನಿಯಾ ಚೀಲದೊಳಗೆ ಜಾರಿದ್ದು, ಹೊಟ್ಟೆಯ ಭಾಗವು ಅಸಹಜವಾಗಿ ಉಬ್ಬಿ ಕೆಳಗೆ ತೂಗುವ ಸ್ಥಿತಿಗೆ ತಲುಪಿತ್ತು. ಈ ಸಂಕೀರ್ಣ ಸಮಸ್ಯೆಗೆ ಪರಿಹಾರಕ್ಕಾಗಿ ರೋಗಿಯು ಬೆಳಗಾವಿಯ ಹಲವಾರು ಆಸ್ಪತ್ರೆಗಳು ಹಾಗೂ ತಜ್ಞ ಶಸ್ತ್ರಚಿಕಿತ್ಸಕರನ್ನು ಸಂಪರ್ಕಿಸಿದ್ದರೂ, ಸಹ-ರೋಗಗಳು ಹಾಗೂ ಶಸ್ತ್ರಚಿಕಿತ್ಸೆಯ ಸಂಕೀರ್ಣತೆಯನ್ನು ಪರಿಗಣಿಸಿ ಅನೇಕರು ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದರು.Home add -Advt ನಂತರ ರೋಗಿಯು ಕೆ.ಎಲ್.ಇ. ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಮೆಡಿಸಿನ ವಿಭಾಗದ ಮುಖ್ಯಸ್ಥರಾದ ಡಾ. ಶ್ರೀನಿವಾಸ್ ಅವರ ಬಳಿ ಬಂದರು. ರೋಗಿ ಮತ್ತು ಕುಟುಂಬ ಸದಸ್ಯರಿಗೆ ಶಸ್ತ್ರಚಿಕಿತ್ಸೆಯ ಅಪಾಯಗಳು ಹಾಗೂ ಚಿಕಿತ್ಸೆಯ ಸಂಪೂರ್ಣ ಮಾಹಿತಿಯನ್ನು ವಿವರಿಸಿ ಸಮಾಲೋಚನೆ ನಡೆಸಿದ ಬಳಿಕ ಈ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಕೈಗೆತ್ತಿಕೊಳ್ಳಲಾಯಿತು. ಡಾ. ಸಾಬು ಸಾತಿಹಾಳ, ಡಾ. ಸ್ಟಾಲಿನ್ ಹೆಗರೆ ಹಾಗೂ ಡಾ. ಶ್ರೀನಿವಾಸ್ ಅವರ ನೇತೃತ್ವದ ಶಸ್ತ್ರಚಿಕಿತ್ಸಕರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿತು. ಶಸ್ತ್ರಚಿಕಿತ್ಸೆಯ ವೇಳೆ ಬೃಹತ್ ಇನ್ಸಿಷನಲ್ ಹೆರ್ನಿಯಾ ( Huge Incisional Hernia ), … Continue reading *25 ವರ್ಷಗಳ ಬೃಹತ್ ಇನ್ಸಿಷನಲ್ ಹರ್ನಿಯಾಕ್ಕೆ KLE ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ*
Copy and paste this URL into your WordPress site to embed
Copy and paste this code into your site to embed