GIT add 2024-1
Beereshwara 33

*ಚುನಾವಣೆ ನಂತರ ಸುಧಾಕರ್ ಜೈಲಿಗೆ ಹೋಗಲಿದ್ದಾರೆ: ಸಿಎಂ ಸಿದ್ದರಾಮಯ್ಯ* 

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಎನ್‌ ಡಿ ಎ ಅಭ್ಯರ್ಥಿ ಸುಧಾಕರ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ವೇಳೆ ಅವನೊಬ್ಬ ಭ್ರಷ್ಟ ಮಂತ್ರಿಯಾಗಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಸೋಲಿಸಿ ಮನೆಗೆ ಕಳೆಹಿಸಿದ್ದೀರಿ ಈಗ ಮತ್ತೆ ಲೋಕಸಭೆ ಸ್ಪರ್ಧೆ ಮಾಡಿರುವ ಅವನನ್ನು ಸೋಲಿಸಬೇಕು. ಚುನಾವಣೆ ನಂತರ ಭ್ರಷ್ಟ ಸುಧಾಕರ್ ಜೈಲಿಗೆ ಹೋಗಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾರಾಮಯ್ಯ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ ರಕ್ಷಾರಾಮಯ್ಯ ಈ ಬಾರೀ ಗೆಲ್ಲುವುದು ಅಷ್ಟೇ ಸತ್ಯ ಎಂದು ಭವಿಷ್ಯ ನುಡಿದಿದ್ದಾರೆ.‌

Emergency Service

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜನತೆ ಆಶೀರ್ವಾದ ಮಾಡಬೇಕು.  ಈ ಇದೆ ತಿಂಗಳು 26 ರಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತಕ್ಕೆ ಚುನಾವಣೆ ನಡೆಯುತ್ತದೆ. ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ಜೆಡಿಎಸ್ ಸೇರಿಕೊಂಡು ಒಬ್ಬ ಅಭ್ಯರ್ಥಿಯನ್ನು ನಿಲ್ಲಿಸಿದ್ದಾರೆ. ನೀವೆಲ್ಲಾ ಮತ್ತೆ ತೀರ್ಮಾನ ಮಾಡಬೇಕಾಗಿದೆ. ಒಮ್ಮೆ ತಿರಸ್ಕಾರ ಮಾಡಿದ ಭ್ರಷ್ಟನನ್ನು ಲೋಕಸಭೆಗೆ ಕಳುಹಿಸಬೇಕಾ ಎಂದು ಯೋಚಿಸಬೇಕಾಗಿದೆ. ಇನ್ನೂ ಬಿಜೆಪಿ ಅಭ್ಯರ್ಥಿ ಸುಧಾಕರ್ ಮಂತ್ರಿಯಾಗಿದ್ದ ವೇಳೆ ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ಇದರ ಬಗ್ಗೆ ಒಂದು ನ್ಯಾಯಾಂಗ ಆಯೋಗ ರಚನೆಯಾಗಿದೆ. ತನಿಖೆ ನಡೆಯುತ್ತಿದೆ. ನನಗೆ ಇದ್ದ ಮಾಹಿತಿ ಪ್ರಕಾರ ಎನ್‌ಡಿಎ ಅಭ್ಯರ್ಥಿ ಮಾಜಿ ಮಂತ್ರಿ ವಿರುದ್ದ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ತನಿಖೆ ಪೂರ್ಣ ಆದ ಮೇಲೆ ತಪ್ಪಿತಸ್ಥರು ಎಂದು ಸಾಬೀತಾಗುತ್ತೆ. 100 ಕ್ಕೆ ನೂರು ಜೈಲಿಗೆ ಹೋಗಲಿದ್ದಾರೆ. ಆದರಿಂದ ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಮತ್ತೊಮ್ಮೆ ಸೋಲಿಸಿ ಎಂದು ಮನವಿ ಮಾಡಿದ್ದಾರೆ.

ಜನತಾ ನ್ಯಾಯಾಲಯ ಕೊಡುವ ಶಿಕ್ಷೆ ಕಾನೂನಿಗಿಂತ ದೊಡ್ಡ ಶಿಕ್ಷೆಯಾಗಿದೆ. ನೀವು ಅಭ್ಯರ್ಥಿಯನ್ನು ಸೋಲಿಸಿ ರಕ್ಷಾರಾಮಯ್ಯ ಅವರನ್ನು ಗೆಲ್ಲಿಸಿದರೆ ಅದೇ ಅವರಿಗೆ ದೊಡ್ಡ ಶಿಕ್ಷೆಯಾಗುತ್ತೆ. ಎನ್‌ಡಿಎ ಭ್ರಷ್ಟರು ಲೋಕಸಭೆಗೆ ಹೋದ್ರೆ ಇನ್ನೂ ಹೆಚ್ಚು ಭ್ರಷ್ಟಾಚಾರ ನಡೆಯುತ್ತೆ. ಆದರಿಂದ 26 ರಂದು ನೀವು ಕೊಡುವ ತೀರ್ಪು ಮಹತ್ವದ್ದು. ನಿಮ್ಮ ಉತ್ಸಾಹ ನೋಡಿದರೆ ನೂರಕ್ಕೆ ನೂರು ರಕ್ಷಾರಾಮಯ್ಯ ಗೆಲ್ಲುತ್ತಾರೆ. ರಕ್ಷಾರಾಮಯ್ಯ ಅವರನ್ನು ನೀವೆಲ್ಲಾ ಗೆಲ್ಲಿಸುತ್ತೀರಾ ಎಂದು ನಂಬಿಕೆ ಇದೆ. ಸುಧಾಕರ್ ಸೋತರೆ ಮಾತ್ರ ಈ ಕ್ಷೇತ್ರ ಉಳಿಯುತ್ತೆ ಎಂದು ಚಿಕ್ಕಬಳ್ಳಾಪುರದಲ್ಲಿ ಸಿಎಂ ಮತಬೇಟೆ ಮಾಡಿದ್ದಾರೆ.

Laxmi Tai add
Bottom Add3
Bottom Ad 2