Latest

ನಾವು ಹೋದರೆ ಸರ್ಕಾರ ಹೋದಂತೆ ಅಲ್ಲವೇ? – ಸಚಿವ ಸುಧಾಕರ್ ಪ್ರಶ್ನೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಾಮರಾಜನಗರ ಆಕ್ಸಿಜನ್ ದುರಂತ ನಡೆದಾಗ ಸರ್ಕಾರ ಸ್ಥಳಕ್ಕೆ ಹೋಗಿಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಬೇರೆಯವರಿಂದ ಹೇಳಿಸಿಕೊಂಡು ನಾವು ಕೆಲಸ ಮಾಡಬೇಕಿಲ್ಲ. ದುರಂತ ನಡೆದಾಗ ಮೊದಲು ಭೇಟಿ ಕೊಟ್ಟಿದ್ದೇ ನಾನು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಡಿ.ಕೆ.ಶಿವಕುಮಾರ್ ಅವರು ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ಚಾಮರಾಜನಗರದಲ್ಲಿ ದುರಂತವಾದಾಗ ಮೊದಲು ಭೇಟಿ ನೀಡಿದ್ದು ನಾನು. ಸಚಿವ ಸುರೇಶ್ ಕುಮಾರ್ ಕೂಡ ಭೇಟಿ ಕೊಟ್ಟಿದ್ದಾರೆ. ನಾವು ಹೋದರೆ ಸರ್ಕಾರ ಹೋದಂತೆ ಅಲ್ಲವೇ? ನಾವು ಸರ್ಕಾರದ ಭಾಗವಲ್ಲವೇ? ಬೇರೆಯವರಿಂದ ಹೇಳಿಸಿಕೊಂಡು ಕೆಲಸ ಮಾಡಬೇಕಿಲ್ಲ. ನನಗೆ ಅಂತಹ ಅನಿವಾರ್ಯತೆ ಬಂದಿಲ್ಲ ಎಂದು ತಿರುಗೇಟು ನೀಡಿದರು.

ಬೇರೆ ರಾಜ್ಯಗಳಲ್ಲಿ ಕೋವಿಡ್ ಸಂದರ್ಭದಲ್ಲಿ ಕಾರಿಡಾರ್ ಗಳಲ್ಲಿ ಮಲಗಿಸಿ ಚಿಕಿತ್ಸೆ ಕೊಟ್ಟ ಉದಾಹರಣೆಗಳಿವೆ. ನಮ್ಮ ರಾಜ್ಯದಲ್ಲಿ ಅಂತಹ ಸಮಸ್ಯೆಗಳಾಗಿಲ್ಲ. ನಾವು ಮೊದಲೇ ಮುಂಜಾಗೃತಾ ಕ್ರಮಗಳನ್ನು ಕೈಗೊಂಡು ಚಿಕಿತ್ಸೆ ವ್ಯವಸ್ಥೆ ಮಾಡಿದ್ದೇವೆ. ನಮ್ಮ ರಾಜ್ಯದಲ್ಲಿ ಆಗಿರುವ ಕೆಲಸಗಳ ಬಗ್ಗೆ ಸ್ವಲ್ಪ ಹೆಮ್ಮೆ ಇರಲಿ ಎಂದು ಟಾಂಗ್ ನೀಡಿದರು.
ಕೋಲಾಹಲ ಎಬ್ಬಿಸಿದ ಆಪ್ತನ ಬಂಧನ; ವಿಜಯೇಂದ್ರ ನಡೆಗೆ ಶ್ರೀರಾಮುಲು ಅಸಮಾಧಾನ

Home add -Advt

Related Articles

Back to top button