ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಸೋಂಕಿಗೆ ಪ್ರಮುಖ ಔಷಧವಾಗಿರುವ ರೆಮ್ ಡಿಸಿವಿರ್ ಚುಚ್ಚು ಮದ್ದಿಗೆ ಬೇಡಿಕೆ ಹೆಚ್ಚುತ್ತಿದ್ದಂತೆ ಅಕ್ರಮ ಮಾರಾಟ ಮಾರಾಟವೂ ಹೆಚ್ಚುತ್ತಿದೆ. ವೈದ್ಯರುಗಳೇ ರೆಮ್ ಡಿಸಿವಿರ್ ನ್ನು ಅಕ್ರಮವಾಗಿ ಮಾರುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣ ಸಂಬಂಧ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ರೆಮ್ ಡಿಸಿವಿರ್ ಔಷಧವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಸುಹಾಸ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಪೊಲೀಸರು ಬಂಧಿಸಿರಿವ ಘಟನೆ ಬೆಂಗಳೂರಿನ ಆನೆಕಲ್ ನಲ್ಲಿ ನಡೆದಿದೆ.
ಅರ್ಮಾನ್ ಅಲಿ ಹಾಗೂ ರಕ್ಷಿತ್ ಬಂಧಿತ ವೈದ್ಯರು. ಇವರು ಒಂದು ಡೋಸ್ ರೆಮ್ ಡಿಸಿವಿರ್ ಗೆ 15 ಸಾವಿರ ರೂಪಾಯಿಯಂತೆ ಮಾರಾಟ ಮಾಡುತ್ತಿದ್ದರು. ಕೃತಕವಾಗಿ ಔಷಧ ಅಭಾವ ಸೃಷ್ಟಿಸಿ ರೆಮ್ ಡಿಸಿವಿರ್ ಮಾರ್ತ್ತಿರುವ ಬಗ್ಗೆ ಆಸ್ಪತ್ರೆಯ ಮಾಲೀಕ ಡಾ.ಜಗದೀಶ್ ಹಿರೇಮಠ್ ವಿರುದ್ಧ ಆರೋಪ ಕೇಳಿಬಂದಿತ್ತು. ಸುಹಾಸ್ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಹಲವು ಕೊರೊನಾ ರೋಗಿಗಳು ಸಾವನ್ನಪ್ಪುತ್ತಿರುವ ಬಗ್ಗೆಯೂ ಜಿಗಣಿ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಮೇಲೆ ದಾಳಿ ನಡೆಸಿದ ಪೊಲೀಸರು ರೆಡ್ ಹ್ಯಾಂಡ್ ಆಗಿ ಇಬ್ಬರು ವೈದ್ಯರನ್ನು ಬಂಧಿಸಿದ್ದಾರೆ.
14 ದಿನ ಏನಿರುತ್ತೆ ಏನಿರಲ್ಲ? ಇಲ್ಲಿದೆ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ