CrimeKannada NewsKarnataka NewsLatest

*ಸುಹಾಸ್ ಹತ್ಯೆ ಪ್ರತೀಕಾರ: ಉಡುಪಿಯಲ್ಲಿ ದಾಳಿ*

ಪ್ರಗತಿವಾಹಿನಿ ಸುದ್ದಿ, ಉಡುಪಿ: ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಪ್ರತೀಕಾರವಾಗಿ ಆತ್ರಾಡಿಯಲ್ಲಿ ಮುಸ್ಲಿಂ ಯುವಕನ ಕೊಲೆಗೆ ಯತ್ನ ನಡೆದಿದೆ.

ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಉಡುಪಿ ತಾಲೂಕಿನ ಆತ್ರಾಡಿಯಲ್ಲಿ ನಿನ್ನೆ ರಾತ್ರಿ ಅಟೋ ಚಾಲಕ ಅಬ್ಬೂಬಕ್ಕರ್ ನನ್ನು ಅಡ್ಡಕಟ್ಟಿ ಕೊಲೆಗೆ ಯತ್ನ ನಡೆಸಲಾಗಿದೆ. ಸುಶಾಂತ್ ಮತ್ತು ಸಂದೇಶ್ ಪೂಜಾರಿಯಿಂದ ಕೊಲೆಗೆ ಯತ್ನ ನಡೆದಿದೆ. ತಲವಾರು ಮತ್ತು ಬಾಟಲಿಯಿಂದ ಅಟೋ ಚಾಲಕ ಅಬೂಬ್ಬಕರ್ ನ ಕೊಲೆ ಯತ್ನ ನಡೆದಿದೆ ಎಂದು ಗೊತ್ತಾಗಿದೆ.

Related Articles

ದಾಳಿಯಿಂದ ತಪ್ಪಿಸಿಕೊಂಡ ಅಟೋ ಚಾಲಕ ಅಬೂಬ್ಬಕ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರ ದಾಖಲಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಹಿರಿಯಡಕ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸುಶಾಂತ್ ಮತ್ತು ಸಂದೇಶ್ ಪೂಜಾರಿ ಬಂಧಿಸಲಾಗಿದೆ.

ವಿಚಾರಣೆ ವೇಳೆಯಲ್ಲಿ ಸುಶಾಂತ್ ಶೆಟ್ಟಿ ಹತ್ಯೆಗೆ ಪ್ರತಿಕಾರವಾಗಿ ಕೊಲೆ ಯತ್ನ ನಡೆಸಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

Home add -Advt

Related Articles

Back to top button