Belagavi NewsBelgaum NewsKannada NewsKarnataka NewsSports

*ಸುಳೇಬಾವಿ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಆರಂಭ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಚಾಂಪಿಯನ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ ಸುಳೇಬಾವಿಯ ಮಹಾಲಕ್ಷ್ಮೀ ಮೈದಾನದಲ್ಲಿ ಭಾನುವಾರ ಆರಂಭವಾಗಿದ್ದು, 8 ತಂಡಗಳು ಭಾಗವಹಿಸಿವೆ.

ಪ್ರಥಮ ಬಹುಮಾನ 50 ಸಾವಿರ ರೂ. ಇದ್ದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರಾಯೋಜಕತ್ವವಹಿಸಿದ್ದಾರೆ. ದ್ವಿತೀಯ ಬಹುಮಾನ 30 ಸಾವಿರ ರೂ. ಗಳನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ತೃತೀಯ ಬಹುಮಾನ 25 ಸಾವಿರ ರೂ.ಗಳನ್ನು ಯುವ ಮುಖಂಡ ಮೃಣಾಲ ಹೆಬ್ಬಾಳಕರ್ ಪ್ರಾಯೋಜಿಸಿದ್ದಾರೆ.

ಪ್ರಥಮ ಹಾಗೂ ತೃತೀಯ ಟ್ರೋಫಿಯನ್ನು ಹನುಮಂತ ಯರಗುದ್ರಿ ಮತ್ತು ದ್ವಿತೀಯ ಹಾಗೂ ನಾಲ್ಕನೇ ಟ್ರೋಫಿಯನ್ನು ಚನ್ನಪ್ಪ ಹುಣಶ್ಯಾಳ ಪ್ರಾಯೋಜಿಸಿದ್ದಾರೆ. ಪಂದ್ಯ ಪುರುಷ ಬಹುಮಾನವನ್ನು ರಾಘವೇಂದ್ರ ಕಮ್ಮಾರ ಹಾಗೂ ಕ್ಯಾಪ್ ಮತ್ತು ಇತರ ಟ್ರೋಫಿಗಳನ್ನು ಎಂ.ಎಸ್.ಧೋನಿ ಅಭಿಮಾನಿ ಬಳಗ ಪ್ರಾಯೋಜಿಸಿದೆ. 

ತಾಲೂಕು ಪಂಚಾಯಿತಿ ಮಾಜಿ ಸದಸ್ಯ, ಕಲ್ಮೇಶ್ವರ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸನಗೌಡ ಹುಂಕ್ರಿಪಾಟೀಲ ಪಂದ್ಯಾವಳಿಯನ್ನು ಉದ್ಘಾಟಿಸಿದರು. 

Home add -Advt

ಮಹಾಲಕ್ಷ್ಮೀ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ದೇವಣ್ಣ ಬಂಗೇನವರ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಕೀರವ್ವ ಅಮರಾಪುರ, ರುದ್ರಪ್ಪ ಅಮರಾಪುರ, ಫಕೀರ ಕೋಲ್ಕಾರ, ಮಂಜುನಾಥ ಪೂಜೇರಿ, ಮಂಜುನಾಥ ಪಾತ್ಲಿ, ಶಿವಾನಂದ ಅಂಕಲಗಿ, ಅಸ್ಲಂ ಅತ್ತಾರ,  ಮಾರುತಿ ಕಲಾಬಾರ್, ಶಿವಾಜಿ ಹುಂಕ್ರಿಪಾಟೀಲ, ಸಂಬಾಜಿ ಎಮೋಜಿ ಮೊದಲಾದವರು ಭಾಗವಹಿಸಿದ್ದರು.

Related Articles

Back to top button